ದಕ್ಷಿಣ ಬೆಡಗಿ ನಿಶಾ ಅಗರವಾಲ್ ಗೆ ಕಂಕಣಭಾಗ್ಯ

By ಅನಂತರಾಮು, ಹೈದರಾಬಾದ್

ದಕ್ಷಿಣದ ಬೆಡಗಿ ಕಾಜಲ್ ಅಗರವಾಲ್ ತಂಗಿ ನಿಶಾ ಅಗರವಾಲ್ ಗೆ ಕಂಕಣಭಾಗ್ಯ ಕೂಡಿಬಂದಿದೆ. ಮುಂಬೈ ಮೂಲದ ಉದ್ಯಮಿ ಕೈಹಿಡಿಯುತ್ತಿದ್ದಾರೆ ನಿಶಾ. ಡಿಸೆಂಬರ್ 28 ರಂದು ಮುಂಬೈನಲ್ಲಿ ಮದುವೆ ನೆರವೇರಲಿದೆ.

ಮುಂಬೈ ಮೂಲದ ಉದ್ಯಮಿ ಕರಣ್ ವಾಲೇಚಾ ಅವರ ಕೈಹಿಡಿಯುತ್ತಿದ್ದಾರೆ ನಿಶಾ ಅಗರವಾಲ್. ಈಗಾಗಲೆ ನಿಶಾ ಕುಟುಂಬಿಕರು ಮದುವೆ ಆಮಂತ್ರಣ ಪತ್ರಿಕೆಗಳನ್ನು ಹಂಚುತ್ತಿದ್ದಾರೆ. ನೋಡಿದರೇನೇ ದುಬಾರಿ ಅನ್ನಿಸುವ ಮದುವೆ ಆಮಂತ್ರಣ ಪತ್ರಿಕೆ ಕೆಲವು ಮಾಧ್ಯಮಗಳ ಕಚೇರಿಗೂ ತಲುಪಿದೆ.

ಅಕ್ಕನಂತೆ ನಿಶಾ ಅಗರವಾಲ್ ಅಷ್ಟಾಗಿ ಜನಪ್ರಿಯತೆ ಗಳಿಸದಿದ್ದರೂ ಒಂದಷ್ಟು ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಗಮನಸೆಳೆದಿದ್ದರು. ಅಭಿನಯಿಸಿದ ಅರ್ಧ ಡಜನ್ ಚಿತ್ರಗಳಲ್ಲಿ ಐದು ತೆಲುಗು ಚಿತ್ರಗಳಾದರೆ ಒಂದು ತಮಿಳು ಚಿತ್ರ.

ಮೂಲತಃ ಪಂಜಾಬಿಯಾದರೂ ದಕ್ಷಿಣದಲ್ಲಿ ಮಿಂಚಿದ ಬೆಡಗಿ. ಕಾಲೇಜು ದಿನಗಳಲ್ಲೇ ಮಾಡೆಲಿಂಗ್ ನಲ್ಲಿ ಹೆಜ್ಜೆ ಹಾಕಿದ ನಿಶಾ ಬಳಿಕ ಎಂಬಿಎ ಮಾಡಬೇಕೆಂದು ಬಯಸಿದ್ದರು. ಆದರೆ ಅಕ್ಕ ಕಾಜಲ್ ಅಗರವಾಲ್ ಅದಾಗಲೆ ಬೆಳ್ಳಿತೆರೆಯಲ್ಲಿ ಬೆಳಗಿದ್ದ ಕಾರಣ ನಿಶಾಗೆ ಸುನಾಯಾಸವಾಗಿ ಅವಕಾಶ ಸಿಕ್ಕಿತು.

ಒಟ್ಟಿನಲ್ಲಿ ಆರಕ್ಕೇರದೆ ಮೂರಕ್ಕಿಳಿಯದೆ ತ್ರಿಶಂಕು ಸ್ವರ್ಗದಲ್ಲಿದ್ದ ತಾರೆ ನಿಶಾ ಅಗರವಾಲ್. ಈಗ ಉದ್ಯಮಿ ಕರಣ್ ಕೈಹಿಡಿಯುವ ಮೂಲಕ ದಾಂಪತ್ಯ ಜೀವನಕ್ಕೆ ಅಡಿಯಿಡುತ್ತಿದ್ದಾರೆ. ಅವರ ಮದುವೆ ಸಂಭ್ರಮದ ಫೋಟೋಗಳನ್ನು ನಿಮ್ಮ ನೆಚ್ಚಿನ ತಾಣ ಒನ್ಇಂಡಿಯಾದಲ್ಲಿ ನಿರೀಕ್ಷಿಸಬಹುದು.

More from Filmibeat

English summary
Actress Nisha Agarwal is all set to tie the knot with Mumbai based businessman Karan Valecha on December 28th, 2013 in Mumbai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X