ಕಿಕ್ ಬಾಕ್ಸರ್ ಲಿಖಿತ್ ಜೊತೆ ನಿಶಾ ಕೊಠಾರಿ 'ಲವ್ವಿ ಡವ್ವಿ'

By Rajendra

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ 'ರಾಜ್ ಶೋ ಮ್ಯಾನ್' ಚಿತ್ರದಲ್ಲಿ ಅಭಿನಯಿಸಿದ್ದ ನಿಶಾ ಕೊಠಾರಿ (ಪ್ರಿಯಾಂಕಾ ಕೊಠಾರಿ) ಈಗ ಮತ್ತೊಮ್ಮೆ ಕನ್ನಡ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದ್ದಾರೆ. ಇತ್ತೀಚೆಗೆ ಅವರು 'ದಂಡುಪಾಳ್ಯ' ಚಿತ್ರದಲ್ಲೂ ಅಭಿನಯಿಸಿದ್ದರು.

ಈಗ ಲವ್ವಿ ಡವ್ವಿ ಎಂಬ ಚಿತ್ರಕ್ಕೆ ಅವರು ಬಹುತೇಕ ಆಯ್ಕೆಯಾಗಿದ್ದಾರೆ. ಲವ್ವಿ ಡವ್ವಿ ಎಂಬ ಟೈಟಲ್ ಇಟ್ಟು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಹೆಚ್.ವಾಸು, ಆನಂದ್ ಪಿ.ರಾಜು, ಗೆಜ್ಜೆ ನಾದ ವಿಜಯಕುಮಾರ್ ರಂಥ ನಿರ್ದೇಶಕರ ಬಳಿ ಕೆಲಸ ಮಾಡಿದ ಎ.ಸಿ. ವಿಜಯಕುಮಾರ್. ಲವ್ವಿ ಡವ್ವಿ ಚಿತ್ರದ ಮೂಲಕ ಅವರು ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.

ಪ್ರೀತಿ, ಪ್ರೇಮದ ಸುತ್ತ ಕಥೆ ಹೆಣೆದಿರುವ ಮನರಂಜನಾತ್ಮಕ ಅಂಶಗಳನ್ನೊಳಗೊಂಡ 'ಲವ್ವಿ ಡವ್ವಿ' ಚಿತ್ರದ ನಾಯಕನಾಗಿ ರಾಜ್ಯಮಟ್ಟದ ಕಿಕ್ ಬಾಕ್ಸರ್ ಕೂಡ ಆಗಿರುವ ಲಿಖಿತ್ ರಾಜ್ ಅರಸ್ ಅಭಿನಯಿಸುತ್ತಿದ್ದಾರೆ. ಇವರ ಕನ್ನಡದ ಮೊದಲ ಚಿತ್ರ 'ಕಾರಣ' ಬಿಡುಗಡೆಗೆ ಸಿದ್ಧವಾಗಿದೆ.

'ಬೇಬೂಸ್' ಎಂಬ ಹಿಂದಿ ಚಿತ್ರವೂ ಬಿಡುಗಡೆಗೆ ರೆಡಿಯಾಗಿದ್ದು 'ಅವರಂಗಾಡು' ಎಂಬ ತಮಿಳು ಚಿತ್ರ ಶೂಟಿಂಗ್ ಹಂತದಲ್ಲಿದೆ. ಆಗಸ್ಟ್ ಎರಡನೇ ವಾರದಿಂದ ಸೆಟ್ಟೇರಲಿರುವ 'ಲವ್ವಿ ಡವ್ವಿ' ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣ ಕೂಡ ಮಾಡುತ್ತಿದ್ದಾರೆ.

ತರುಣ್ ಸೈಮಂಡ್ ಸಂಗೀತ, ಆನಂದ್ ಛಾಯಾಗ್ರಹಣ, ರಾಜೇಶ್ ಬ್ರಹ್ಮಾವರ್ ಹಾಗೂ ಮುರಳಿ ನೃತ್ಯ, ಜಾನಿ ರವರ ಸಾಹಸವಿದೆ. ರಮೇಶ್ ಭಟ್, ಸುಧಾ ಬೆಳವಾಡಿ, ರಕ್ಷಿತ್ ಆಯ್ಕೆಯಾಗಿದ್ದಾರೆ. ಮೂವರು ನಾಯಕಿಯರಾಗಿ ದೀಪಿಕಾ, ಜ್ಯೋತಿ ಹಾಗೂ ನಿಶಾ ಕೊಠಾರಿ ಅವರನ್ನು ಕರೆತರುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಈ ಚಿತ್ರಕ್ಕೆ ಉಳಿದ ತಾಂತ್ರಿಕ ವರ್ಗದ ಆಯ್ಕೆ ನಡೆಯುತ್ತಿದೆ. (ಒನ್ಇಂಡಿಯಾ ಕನ್ನಡ)

More from Filmibeat

English summary
Actress Nisha Kothari all set to act in Kannada film titled as 'Lovey Dovey'. The producer cum director of the film, AC Vijaykumar, has also roped in Deepika and Jyothi to play the second lead.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X