ಮಾಸ್ಟರ್ ಆನಂದ್ ಮಗಳ ಹೆಸರಲ್ಲಿ 40 ಲಕ್ಷ ರೂ. ವಂಚಿಸಿದ್ದ ನಿಶಾ ನರಸಪ್ಪ ಅರೆಸ್ಟ್!
ಮಾಸ್ಟರ್ ಆನಂದ್‌ರಂತೆಯೇ ಅವರ ಪುತ್ರಿ ವಂಶಿಕಾ ಕೂಡ ಅಷ್ಟೇ ಫೇಮಸ್. ಪುಟ್ಟ ವಯಸ್ಸಿನಲ್ಲೇ ವಂಶಿಕಾ ತಂದೆಯಂತೆಯೇ ಹೆಸರು ಮಾಡುತ್ತಿದ್ದಾರೆ. ಕನ್ನಡದ ಕಿರುತೆರೆಯ ರಿಯಾಲಿಟಿ ಶೋ ಹಾಗೂ ನಿರೂಪಣೆ ಮಾಡಿ ಜನರ ಮನಸ್ಸನ್ನು ಗೆದ್ದಿದ್ದಾರೆ.
ವಂಶಿಕಾ ಕನ್ನಡ ಕಿರುತೆರೆ ವೀಕ್ಷಕರಿಗೆ ಚಿರಪರಿಚಿತ. ಈ ಪೋರಿ ಪಟ ಪಟ ಅಂತ ಮಾತಾಡುವುದನ್ನು ಕೇಳಿ ಫಿದಾ ಆಗಿದ್ದಾರೆ. ವಂಶಿಕಾ ಭಾಗವಹಿಸುವ ರಿಯಾಲಿಟಿ ಶೋಗಳನ್ನು ಬಿಡದ ಹಾಗೆ ನೋಡುತ್ತಾರೆ. ಇದೇ ಸಂದರ್ಭದಲ್ಲಿ ವಂಶಿಕಾ ಹೆಸರನ್ನು ದುರ್ಬಳಕೆ ಮಾಡಿಕೊಂಡು ಯುವತಿಯೊಬ್ಬರು ಮೋಸ ಮಾಡಿದ್ದಾರೆ ಎನ್ನಲಾಗಿದೆ.

ಹೌದು, ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರನ್ನು ಬಳಸಿಕೊಂಡು ನಿಶಾ ನರಸಪ್ಪ ಅನ್ನೋ ಯುವತಿ ಸುಮಾರು 40 ಲಕ್ಷ ರೂಪಾಯಿ ಮೋಸ ಮಾಡಿದ್ದಾರೆ ಆರೋಪ ಕೇಳಿಬರುತ್ತಿದೆ. ಈ ಸಂಬಂಧ ನಿಶಾ ವಿರುದ್ಧ ಬೆಂಗಳೂರಿನ ಸದಾಶಿವನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಈ ನಿಟ್ಟಿನಲ್ಲಿ ನಿಶಾ ಅವರನ್ನು ಬಂಧಿಸಲಾಗಿದೆ.
ನಿಶಾ ನರಸಪ್ಪ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸುತ್ತಿದ್ದರು ಎನ್ನಲಾಗಿದೆ. ಈ ಮೂಲಕ ಮಕ್ಕಳ ಟ್ಯಾಲೆಂಟ್ ಶೋಯಿಂದ ಹಿಡಿದು ಮಕ್ಕಳಿಗಾಗಿ ಮಾಡಲಿಂಗ್ ಸೇರಿದಂತೆ ಅವರ ಟ್ಯಾಲೆಂಟ್ ಬೆಳಕಿಗೆ ತರಲು ಕ್ಲಾಸ್ ನಡೆಸುವುದಾಗಿ ಹೇಳುತ್ತಿದ್ದರು ಎನ್ನಲಾಗಿದೆ. ಇವುಗಳನ್ನೇ ಇಟ್ಟುಕೊಂಡು ಮಕ್ಕಳ ಪೋಷಕರಿಂದ ಸುಮಾರು ಲಕ್ಷಾಂತರ ರೂಪಾಯಿ ಹಣವನ್ನು ನಿಶಾ ವಸೂಲಿ ಮಾಡುತ್ತಿದ್ದರು ಎಂಬ ಆರೋಪ ನಿಶಾ ಮೇಲಿದೆ.
ನಿಶಾ ನರಸಪ್ಪ ಅವರಿಂದ ಮೋಸ ಹೋದ ಪೋಷಕರು ಹಾಗೂ ವಂಶಿಕಾ ತಾಯಿ ಯಶಸ್ವಿನಿ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರನ ಅನ್ವಯ ನಿಶಾ ನರಸಪ್ಪ ಅವರನ್ನು ಬಂಧಿಸಲಾಗಿದೆ. ನಿಶಾ ನರಸಪ್ಪ ವಂಶಿಕಾ ಅಷ್ಟೇ ಅಲ್ಲ. ಕನ್ನಡ ಚಿತ್ರರಂಗದ ನಟಿಯರ ಹೆಸರನ್ನು ಇಟ್ಟುಕೊಂಡು ಮಕ್ಕಳ ಪೋಷಕರಿಂದ ಲಕ್ಷಾಂತರ ರೂಪಾಯಿ ಹಣವನ್ನು ಕೀಳುತ್ತಿದ್ದರು ಎಂಬ ಆರೋಪ ಇವರ ಮೇಲಿದೆ.
ನಿಶಾ ಹೇಗೆ ಮಕ್ಕಳ ಪೋಷಕರನ್ನು ಹೇಗೆ ಯಾಮಾರಿಸುತ್ತಿದ್ದರು? ಇವರಿಂದ ಸರಿಯಾಗಿ ಎಷ್ಟು ಹಣ ವಂಚನೆ ಮಾಡಿದ್ದಾರೆ? ಇಂತಹದ್ದೇ ಒಂದಿಷ್ಟು ವಿಷಯಗಳು ಹೊರಬರಬೇಕಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


Click it and Unblock the Notifications











