For Quick Alerts
  ALLOW NOTIFICATIONS  
  For Daily Alerts

  ಮಾತು ಬಾರದ ಮೂಕಿಯಾದ 'ಸ್ವೀಟಿ' ಅನುಷ್ಕಾ ಶೆಟ್ಟಿ

  |

  ಇತ್ತೀಚಿಗಷ್ಟೆ ಕನ್ನಡದಲ್ಲಿ ಟ್ವೀಟ್ ಮಾಡಿ, ಮತ್ತೆ ಹೆಮ್ಮೆಯ ಕನ್ನಡತಿ ಎಂದು ಸಾಬೀತು ಮಾಡಿದ್ದರು ಅನುಷ್ಕಾ ಶೆಟ್ಟಿ. ಈಗ ಈ ನಟಿ ಒಂದು ಹೊಸ ಸಿನಿಮಾ ಮಾಡುತ್ತಿದ್ದಾರೆ.

  ಅನುಷ್ಕಾ ಶೆಟ್ಟಿ ತಮ್ಮ ಕೆರಿಯರ್ ನಲ್ಲಿ ವಿಭಿನ್ನ ಪಾತ್ರಗಳನ್ನು ಮಾಡಿಕೊಂಡು ಬಂದ ನಟಿ. 'ಅರುಂಧತಿ', ವೇದಂ, 'ರುದ್ರಮದೇವಿ', 'ಬಾಹುಬಲಿ', 'ಭಾಗವತಿ', 'ಸ್ವೀಟಿ' ಹೀಗೆ ಅನುಷ್ಕಾ ಅದೆಷ್ಟೋ ಸವಾಲಿನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈಗ ಮತ್ತೆ ತಮ್ಮ ಪ್ರತಿಭೆಗೆ ತಕ್ಕ ಪಾತ್ರವನ್ನು ಆಯ್ಕೆ ಮಾಡಿದ್ದಾರೆ.

  ತಾಯಿ ಮತ್ತು ತಾಯ್ನಾಡಿನ ಮೇಲಿನ ಅನುಷ್ಕಾ ಪ್ರೀತಿ ನಿಜಕ್ಕೂ ಮೆಚ್ಚುವಂತದ್ದು.!ತಾಯಿ ಮತ್ತು ತಾಯ್ನಾಡಿನ ಮೇಲಿನ ಅನುಷ್ಕಾ ಪ್ರೀತಿ ನಿಜಕ್ಕೂ ಮೆಚ್ಚುವಂತದ್ದು.!

  ಅನುಷ್ಕಾ ಮುಂದಿನ ಸಿನಿಮಾ 'ನಿಶ್ಯಬ್ದಂ'. ಹೇಮಂತ್ ಮಧುಕರ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಸಾಕ್ಷಿ ಎಂಬ ಪ್ರೆಂಟರ್ ಪಾತ್ರವನ್ನು ಅನುಷ್ಕಾ ಮಾಡುತ್ತಿದ್ದಾರೆ. ಅಚ್ಚರಿ ಅಂದರೆ, ಮಾತು ಬಾರದ ಹುಡುಗಿ ಪಾತ್ರವನ್ನು ಅನುಷ್ಕಾ ಕಾಣಿಸಿಕೊಳ್ಳುತ್ತಿದ್ದಾರೆ.

  ಇತ್ತೀಚಿಗೆ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಮೊದಲ ಪೋಸ್ಟರ್ ತುಂಬ ಚೆನ್ನಾಗಿದೆ. ಅನುಷ್ಕಾ ಲುಕ್ ಅಭಿಮಾನಿಗಳ ಮೆಚ್ಚುಗೆ ಪಡೆದಿದೆ. ಪೋಸ್ಟರ್ ನಲ್ಲಿ ಅನುಷ್ಕಾ ಬ್ರಷ್ ಹಿಡಿದು ಚಿತ್ರ ಬರೆಯುತ್ತಿದ್ದಾರೆ.

  ಪ್ರಭಾಸ್-ಅನುಷ್ಕಾ ಡೇಟಿಂಗ್ ಬಗ್ಗೆ ಬಾಲಿವುಡ್ ಮಾಧ್ಯಮಗಳು ಅಚ್ಚರಿ ವರದಿ.!ಪ್ರಭಾಸ್-ಅನುಷ್ಕಾ ಡೇಟಿಂಗ್ ಬಗ್ಗೆ ಬಾಲಿವುಡ್ ಮಾಧ್ಯಮಗಳು ಅಚ್ಚರಿ ವರದಿ.!

  'ನಿಶ್ಯಬ್ದಂ' ಮೊದಲ ನೋಟದಲ್ಲಿ ಗಮನ ಸೆಳೆಯಲು ಯಶಸ್ವಿಯಾಗಿದೆ. ಅಂದಹಾಗೆ, ಸಿನಿಮಾ ತಮಿಳು, ತೆಲುಗು, ಮಲೆಯಾಳಂ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ.

  English summary
  Actress Anushka Shetty's 'Nishabdam' telugu movie first look out.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X