ಎರಡುವರೆ ದಶಕದ ಬಳಿಕ ಮತ್ತೆ ಬಂದ ಕಮಾಂಡೋ ಅಜಯ್
ಒಂದು ಬ್ಯಾಂಕ್ ದರೋಡೆಯನ್ನು ಅಧ್ಬುತವಾಗಿ ತೆರೆ ಮೇಲೆ ತೋರಿಸಿದ್ದ ಸಿನಿಮಾ 'ನಿಷ್ಕರ್ಷ'. ಇಡೀ ಸಿನಿಮಾವನ್ನು ಒಂದು ಬ್ಯಾಂಕ್ ಕಟ್ಟಡದಲ್ಲಿ ಚಿತ್ರೀಕರಣ ಮಾಡಿ ಅಂದಿನ ಕಾಲಕ್ಕೆ ಬಹು ದೊಡ್ಡ ಸಾಹಸ ಮಾಡಿದ್ದರು ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ. ಈ ಸಿನಿಮಾದಲ್ಲಿ ವಿಷ್ಣುವರ್ಧನ್ ಕಮಾಂಡೋ ಅಜಯ್ ಆಗಿ ಕಾಣಿಸಿಕೊಂಡಿದ್ದರು.
ಅಂದಹಾಗೆ, ಈಗ ಎರಡುವರೆ ದಶಕದ ಬಳಿಕ ಮತ್ತೆ ಕಮಾಂಡೋ ಅಜಯ್ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಅರ್ಥಾತ್ 'ನಿಷ್ಕರ್ಷ' ಸಿನಿಮಾ 26 ವರ್ಷಗಳ ನಂತರ ಮತ್ತೆ ಬಿಡುಗಡೆ ಆಗುತ್ತಿದೆ. ಈ ವರ್ಷದ ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಈ ಸಿನಿಮಾ ರಿ ರಿಲೀಸ್ ಆಗುತ್ತಿದೆ. ಡಿಜಿಟಲ್ ರೂಪದಲ್ಲಿ ಜಯಣ್ಣ ಬ್ಯಾನರ್ ನಲ್ಲಿ ಚಿತ್ರ ಸಪ್ಟೆಂಬರ್ 20ಕ್ಕೆ ಬಿಡುಗಡೆ ಆಗಲಿದೆ.
ಸಪ್ಟೆಂಬರ್ 18 ರಂದು ವಿಷ್ಣು ಬರ್ತ್ ಡೇ ವಿಶೇಷವಾಗಿ ಆಗಾಗ ಅವರ ಹಳೆಯ ಸಿನಿಮಾಗಳು ಮರು ಬಿಡುಗಡೆ ಆಗುತ್ತಿರುತ್ತವೆ. ಆ ರೀತಿ ಈ ವರ್ಷ 'ನಿಷ್ಕರ್ಷ' ಚಿತ್ರದ ತೆರೆಗೆ ಬರುತ್ತಿದೆ. 'ನಿಷ್ಕರ್ಷ' ಸಿನಿಮಾ 1993ರಲ್ಲಿ ಬಿಡುಗಡೆ ಆಗಿತ್ತು. ವಿಷ್ಣು ಕೆರಿಯರ್ ನ ಬೆಸ್ಟ್ ಸಿನಿಮಾಗಳ ಪೈಕಿ ಇದು ಒಂದಾಗಿತ್ತು. ಜೊತೆಗೆ ಮೂರು ರಾಜ್ಯ ಪ್ರಶಸ್ತಿಗಳು ಚಿತ್ರಕ್ಕೆ ಸಿಕ್ಕವು.

ಸುನೀಲ್ ಕುಮಾರ್ ದೇಸಾಯಿ ತಮ್ಮ ಸ್ಟೈಲ್ ನಲ್ಲಿ ಥ್ರಿಲ್ಲರ್ ಕಥೆ ಹೇಳಿ ಗೆದ್ದಿದ್ದರು. ಅನಂತ್ ನಾಗ್, ಗುರುಕಿರಣ್, ಬಿಸಿ ಪಾಟೀಲ್, ಪ್ರಕಾಶ್ ರೈ, ಅವಿನಾಶ್, ರಮೇಶ್ ಭಟ್ ಸಿನಿಮಾದಲ್ಲಿ ನಟಿಸಿದ್ದರು.


Click it and Unblock the Notifications











