ನಾನು ಒಂಟಿಯಾಗಿರಲು ಬಯಸುತ್ತೇನೆ, ನನ್ನ ಭಾವನೆಗಳಿಗೆ ಬೆಲೆ ಕೊಡಿ - ನಿಶ್ವಿಕಾ ನಾಯ್ಡು...!

ನಿಶ್ವಿಕಾ ನಾಯ್ಡು.. ಕನ್ನಡ ಚಿತ್ರರಂಗದ ಡ್ಯಾನ್ಸಿಂಗ್ ಡಾಲ್. ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿ, ಒಂದರ ಹಿಂದೆ ಒಂದು ಸಿನಿಮಾದಲ್ಲಿ ಆಕ್ಟ್ ಮಾಡ್ತಾನೇ ಅಭಿಮಾನಿ ಬಳಗವನ್ನ ಸಂಪಾದಿಸಿರುವ ನಿಶ್ವಿಕಾ ಈಗ ತಮ್ಮ ಅಭಿಮಾನಿಗಳಲ್ಲಿ ಮನವಿಯೊಂದನ್ನ ಮಾಡಿಕೊಂಡಿದ್ದಾರೆ. ನನ್ನ ಭಾವನೆಗಳಿಗೆ ನೀವು ಬೆಲೆ ಕೊಡುವ ವಿಶ್ವಾಸ ಇದೆ ಅಂದಿದ್ದಾರೆ.

ಹೌದು, ತನ್ನ ಅಂದ-ಚೆಂದ-ಅಭಿನಯ ಮತ್ತು ಡ್ಯಾನ್ಸ್‌ ನಿಂದ ಕರುನಾಡಿನೆಲ್ಲೆಡೆ ಮನೆ ಮಾತಾದ ನಿಶ್ವಿಕಾ, ಇದೇ ಮೇ 19ರಂದು 28ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಇನ್ನೂ.. ನಿಮಗೆ ಗೊತ್ತು. ಕಾಲ ಮೊದಲಿನಂತೆ ಇಲ್ಲ. ಬದಲಾದ ಕಾಲದಲ್ಲಿ ತಮ್ಮ ನೆಚ್ಚಿನ ನಾಯಕಿಯ ಹುಟ್ಟಿದ ಹಬ್ಬವನ್ನಾಚರಿಸಲು ಅಭಿಮಾನಿ ಬಳಗ ಕಾತುರದಿಂದ ಕಾಯುತ್ತಿರುತ್ತೆ. ನಿಶ್ವಿಕಾ ಅವರ ಬರ್ತ್‌ಡೇ ಹಿನ್ನೆಲೆ ಈ ಕಾತುರ- ಆತುರ ಅಭಿಮಾನಿಗಳಲ್ಲಿತ್ತು ಕೂಡ.

Nishvika Naidu Decided Not To Celebrate Her Birthday Due To This Reason

ಆದರೆ ಈಗ ಇದೆಲ್ಲದಕ್ಕೆ ನಿಶ್ವಿಕಾ ಈಗ ಬ್ರೇಕ್ ಹಾಕಿದ್ದಾರೆ. ಕಷ್ಟದ ಸಮಯದಲ್ಲಿ, ನಾನು ಒಂಟಿಯಾಗಿ ಇರಲು ಬಯಸಿದ್ದು ನನ್ನ ಈ ನಿರ್ಧಾರಕ್ಕೆ ನೀವೆಲ್ಲರು ಒಪ್ಪಿ, ನೀವು ಇರುವ ಜಾಗದಿಂದಲೇ ನನ್ನ ಹುಟ್ಟುಹಬ್ಬಕ್ಕೆ ನನ್ನನ್ನು ಹರಸಿ ಆಶಿರ್ವದಿಸಿ' ಎಂದು ಕೋರಿದ್ದಾರೆ ನಿಶ್ವಿಕಾ.

ಹೌದು, ಸಾಕಷ್ಟು ಜನ ಮುದ್ದುಮುದ್ದಾದ ನಾಯಿಗಳನ್ನು ಮನೆಮಕ್ಕಳಂತೆ ಪ್ರೀತಿಕೊಟ್ಟು, ಹಾರೈಕೆ ಮಾಡಿ ಸಾಕಿರುತ್ತಾರೆ. ಸಾಕಿದ ಶ್ವಾನಗಳೊಂದಿಗೆ ಅವಿನಾಭಾವ ಸಂಬಂಧ ಬೆಸೆದುಕೊಂಡಿರುತ್ತಾರೆ. ನಿಶ್ವಿಕಾ ಕೂಡ ಇದರಿಂದ ಹೊರತಾಗಿರಲಿಲ್ಲ. ಲೀಯೋ ಹೆಸರಿನ ನಾಯಿಯನ್ನ ನಿಶ್ವಿಕಾ ತುಂಬಾನೇ ಮುದ್ದಾಗಿ ಸಾಕಿದ್ದರು.

Nishvika Naidu Decided Not To Celebrate Her Birthday Due To This Reason

ಆದರೆ.. ಕಳೆದ ಡಿಸೆಂಬರ್‌ನಲ್ಲಿ ಲೀಯೋ ಕೊನೆಯುಸಿರೆಳೆದಿತ್ತು. ಲೀಯೋ ಅಗಲಿಕೆಯಿಂದ ಆಘಾತಕ್ಕೊಳಗಾಗಿರುವ ನಿಶ್ವಿಕಾ ಸದ್ಯಕ್ಕೆ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಮನವಿ ಪತ್ರವೊಂದನ್ನ ಹಂಚಿಕೊಂಡಿದ್ದಾರೆ

'ಈ ವರ್ಷ ನನ್ನ ವೈಯಕ್ತಿಕ ಜೀವನದಲ್ಲಿ ಭಾವನಾತ್ಮಕವಾಗಿ ಕೆಲವು ಏರುಪೇರುಗಳು ಆಗಿವೆ. ನನ್ನ ಪ್ರೀತಿಯ ಲಿಯೋ ಇತ್ತೀಚೆಗೆ ನಮ್ಮನ್ನೆಲ್ಲ ಬಿಟ್ಟು ಹೋದ. ಈ ಆಕಸ್ಮಿಕ ಘಟನೆ ನನ್ನ ಜೀವನಕ್ಕೆ ಮತ್ತು ಮನಸಿಗೆ ತುಂಬಾ ಆಳವಾದ ನೋವನ್ನುಂಟು ಮಾಡಿದೆ. ಅದರಿಂದ ಈ ವರ್ಷ ನನ್ನ ಜನ್ಮದಿನವನ್ನು ಆಚರಿಸದಿರಲು ನಾನು ನಿರ್ಧರಿಸಿದ್ದೇನೆ ಎಂದಿರುವ ನಿಶ್ವಿಕಾ, ಲಿಯೋ ನಮ್ಮ ಕುಟುಂಬದಲ್ಲಿ ಒಬ್ಬನ್ನಾಗಿದ್ದ ಮತ್ತು ಅವನ ಅನುಪಸ್ಥಿತಿಯು ನಮ್ಮ ಕುಟುಂಬದ ಮನಸ್ಸುಗಳ ಮೇಲೆ ಬಹಳ ದೊಡ್ಡ ಗಾಯ ಮಾಡಿದೆ. ದಯವಿಟ್ಟು ನನ್ನ ಭಾವನೆಗಳಿಗೆ ಬೆಲೆ ಕೊಟ್ಟು ಈ ಬಾರಿ ನನ್ನ ಹುಟ್ಟುಹಬ್ಬದ ದಿನದಂದು ಯಾರೂ ಕೂಡ ನನ್ನನ್ನು ಭೇಟಿ ಮಾಡಲು ಬರಬೇಡಿ ಅಥವಾ ಉಡುಗೊರೆಗಳನ್ನು ತರಬೇಡಿ ಎಂದು ಈ ಮೂಲಕ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.

ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಎಂದಿಗೂ ಚಿರಋಣಿಯಾಗಿ ಇರುತ್ತೆನೆ. ಈ ಕಷ್ಟದ ಸಮಯದಲ್ಲಿ, ನಾನು ಒಂಟಿಯಾಗಿ ಇರಲು ಬಯಸಿದ್ದು ನನ್ನ ಈ ನಿರ್ಧಾರಕ್ಕೆ ನೀವೆಲ್ಲರು ಒಪ್ಪಿ, ನೀವು ಇರುವ ಜಾಗದಿಂದಲೇ ನನ್ನ ಹುಟ್ಟುಹಬ್ಬಕ್ಕೆ ನನ್ನನ್ನು ಹರಸಿ ಆಶಿರ್ವದಿಸಿ ಎಂದು ಕೋರಿದ್ದಾರೆ ನಿಶ್ವಿಕಾ ನಾಯ್ಡು

ಒಟ್ನಲ್ಲಿ ಪ್ರೀತಿಯಿಂದ ಸಾಕಿದ ನಾಯಿ ಕಳುವಾದಾಗ, ಜೀವ ಬಿಟ್ಟಾಗ ಮನೆಯ ಸದಸ್ಯರು ತೀವ್ರವಾದ ದುಃಖ ಅನುಭವಿಸುತ್ತಾರೆ ಎನ್ನುವುದಕ್ಕೆ ನಿಶ್ವಿಕಾ ನಾಯ್ಡು ಸದ್ಯಕ್ಕೆ ಸಾಕ್ಷಿ.ಕಳಚುತ್ತಿರುವ, ಸ್ನೇಹ, ವಿಶ್ವಾಸವನ್ನು ಮರೆಯುತ್ತಿರುವ ಇವತ್ತಿನ ಕಾಲದಲ್ಲಿ ನಿಯತ್ತಿಗೆ ಹೆಸರಾದ ನಾಯಿಯ ಅಗಲಿಕೆ ನೋವಲ್ಲಿರುವ ನಿಶ್ವಿಕಾ ಆದಷ್ಟು ಬೇಗ ನೋವಿಂದ ಹೊರ ಬರಲಿ ಅನ್ನುವುದು ಇವರ ಅಭಿಮಾನಿಗಳ ಆಶಯ.

More from Filmibeat

English summary
Nishvika Naidu decided to not celebrate her 28th birthday in remembrance of her late dog, Leo. She has asked her fans to respect her wish for solitude during this time, highlighting the deep bond she shared with Leo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X