For Quick Alerts
  ALLOW NOTIFICATIONS  
  For Daily Alerts

  ಡಾರ್ಲಿಂಗ್ ಕೃಷ್ಣ ಜೊತೆ ಇಬ್ಬರು ಸ್ಟಾರ್ ನಾಯಕಿಯರು ರೊಮ್ಯಾನ್ಸ್

  |

  ಸೆಪ್ಟಂಬರ್ 27 ರಂದು ನಟ ಡಾರ್ಲಿಂಗ್ ಕೃಷ್ಣ ಹೊಸ ಚಿತ್ರವೊಂದಕ್ಕೆ ಚಾಲನೆ ಕೊಡ್ತಿದ್ದಾರೆ. ಕರ್ನಾಟಕದ ದಕ್ಷ ಪೊಲೀಸ್ ಅಧಿಕಾರಿ, ಐಪಿಎಸ್ ರವಿ ಡಿ ಚೆನ್ನಣ್ಣನವರ್ ಈ ಸಿನಿಮಾದ ಟೈಟಲ್ ಬಿಡುಗಡೆ ಮಾಡುತ್ತಿದ್ದಾರೆ.

  ತಾನು ಆಕ್ಟರ್ ಆಗಿದ್ದಕ್ಕೆ ಕಾರಣ ಕೊಟ್ಟ ಡಾರ್ಲಿಂಗ್ ಕೃಷ್ಣ

  ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಜೊತೆ ಇಬ್ಬರು ನಾಯಕಿಯರು ನಟಿಸುತ್ತಿದ್ದಾರೆ ಎನ್ನುವ ವಿಚಾರ ಬಹಿರಂಗವಾಗಿದೆ. ಕನ್ನಡ ಚಿತ್ರರಂಗ ಯುವ ಪ್ರತಿಭಾನ್ವಿತ ನಟಿ ನಿಶ್ವಿಕಾ ನಾಯ್ಡು ಹಾಗೂ ಕಿರುತೆರೆಯಲ್ಲಿ ಹೆಚ್ಚು ಖ್ಯಾತಿ ಗಳಿಸಿಕೊಂಡಿರುವ ಮೇಘಾ ಶೆಟ್ಟಿ ಇಬ್ಬರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.

  ಅಧಿಕೃತವಾಗಿ ಈ ಚಿತ್ರದ ಹೆಸರು ಏನು? ನಾಯಕಿಯರು ಯಾರು ಎನ್ನುವುದು ಬಹಶಃ ಮಂಗಳವಾರ ತಿಳಿಯಬಹುದು. ಇನ್ನು ರಶ್ಮಿ ಫಿಲಂಸ್ ಸಂಸ್ಥೆಯಲ್ಲಿ ಸುಮಂತ್ ಕ್ರಾಂತಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ನಿರ್ದೇಶಿಸುತ್ತಿದ್ದು, ಶೇಖರ್ ಚಂದ್ರ ಛಾಯಾಗ್ರಹಣ, ಕೆಎಂ ಪ್ರಕಾಶ್ ಸಂಕಲನ, ರವಿ ವರ್ಮ ಸಾಹಸ, ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ ಇದೆ.

  ಇನ್ನು ಡಾರ್ಲಿಂಗ್ ಕೃಷ್ಣ ಮತ್ತು ಜಾಕಿ ಭಾವನಾ ನಟಿಸಿರುವ 'ಶ್ರೀಕೃಷ್ಣ@ಜಿಮೇಲ್.ಕಾಮ್' ಚಿತ್ರದ ಮೊದಲ ವಿಡಿಯೋ ಸಾಂಗ್ ಸೆಪ್ಟೆಂಬರ್ 25 ರಂದು ಬಿಡುಗಡೆಯಾಗುತ್ತಿದೆ. ಸಂದೇಶ್ ಈ ಚಿತ್ರ ನಿರ್ಮಾಣ ಮಾಡ್ತಿದ್ದು, ನಾಗಶೇಖರ್ ನಿರ್ದೇಶಿಸಿದ್ದಾರೆ. ಸಿನಿಮಾ ರಿಲೀಸ್‌ಗೂ ಮುಂಚೆಯೇ 'ಶ್ರೀಕೃಷ್ಣ@ಜಿಮೇಲ್.ಕಾಮ್' ಚಿತ್ರದ ಸ್ಯಾಟ್‌ಲೈಟ್ ಹಕ್ಕು ಹಾಗೂ ಡಿಜಿಟಲ್ ಹಕ್ಕು ದುಬಾರಿ ಬೆಲೆಗೆ ಮಾರಾಟವಾಗಿದೆಯಂತೆ. ಸೋಶಿಯಲ್ ಮೀಡಿಯಾದಲ್ಲಿ ವರದಿಯಾಗಿರುವ ಪ್ರಕಾರ, 2.5 ಕೋಟಿ ಸ್ಯಾಟ್‌ಲೈಟ್ ಹಕ್ಕು ಹಾಗೂ ಡಿಜಿಟಲ್ ಹಕ್ಕು ಸೇಲ್ ಆಗಿದೆ ಎನ್ನಲಾಗಿದೆ.

  ಡಾರ್ಲಿಂಗ್ ಕೃಷ್ಣ ಹೊಸ ಚಿತ್ರಕ್ಕೆ ಐಪಿಎಸ್ ರವಿ ಡಿ ಚೆನ್ನಣ್ಣನವರ್ ಸಾಥ್ ಡಾರ್ಲಿಂಗ್ ಕೃಷ್ಣ ಹೊಸ ಚಿತ್ರಕ್ಕೆ ಐಪಿಎಸ್ ರವಿ ಡಿ ಚೆನ್ನಣ್ಣನವರ್ ಸಾಥ್

  ಈ ನಡುವೆ ಪಿಸಿ ಶೇಖರ್ ಹಾಗೂ ಕಡ್ಡಿಪುಡಿ ಚಂದ್ರು ಜೊತೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಆಶಿಕಾ ರಂಗನಾಥ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಕಾರ್ಪೋರೇಟ್ ಹಿನ್ನೆಲೆಯಲ್ಲಿ ಕಥೆ ಮಾಡಲಾಗಿದ್ದು, ಡಾರ್ಲಿಂಗ್ ಕೃಷ್ಣ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ದಾರೆ.

  Nishvika Naidu, Megha Shetty to star opposite Darling Krishna in Shiva Tejas Movie

  'ಲವ್ ಮಾಕ್ಟೈಲ್' ಹಿಟ್ ಆದ್ಮೇಲೆ ಡಾರ್ಲಿಂಗ್ ಕೃಷ್ಣ ಸಖತ್ ಬ್ಯುಸಿಯಾದರು. ಈಗಾಗಲೇ ಲವ್ ಮಾಕ್ಟೈಲ್ 2 ಸಿನಿಮಾ ಮಾಡಿ ಮುಗಿಸಿದ್ದಾರೆ. ಇದರ ಜೊತೆ ಜೊತೆಗೆ ಹಲವು ಹೊಸ ಪ್ರಾಜೆಕ್ಟ್‌ಗಳಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಲೋಕಲ್ ಟ್ರೈನ್, ಶುಗರ್ ಫ್ಯಾಕ್ಟರಿ, ವರ್ಜಿನ್, ರಚಿತಾ ರಾಮ್ ಜೊತೆ ಲವ್ ಮಿ ಔರ್ ಹೇಟ್ ಮೀ ಅಂತಹ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

  English summary
  Kannada Actress Nishvika Naidu, Megha Shetty to star opposite Darling Krishna in Shiva Tejas Directional Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X