ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸಿಂಪಲ್ ಸುನಿ 'ಸಖತ್'ಗೆ ಸಿಕ್ಕಳು ನಾಯಕಿ

ಗೋಲ್ಡನ್ ಸ್ಟಾರ್ ಗಣೇಶ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತ್ರಿಬಲ್ ರೈಡಿಂಗ್, ಗಾಳಿಪಟ-2 ಮತ್ತು ಸಖತ್ ಸಿನಿಮಾಗಳ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಸದ್ಯ ಗಣೇಶ್ ನಟನೆಯ ಸಖತ್ ಸಿನಿಮಾದಿಂದ ಸಖತ್ ಸುದ್ದಿಯೊಂದು ಹೊರಬಿದ್ದಿದೆ.

ಗೋಲ್ಡನ್ ಸ್ಟಾರ್ ಗಣೇಶ್ ಗೆ ನಾಯಕಿ ಯಾರಾಗ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಇದೀಗ ಈ ಕುತೂಹಲಕ್ಕೆ ತೆರೆಬಿದ್ದಿದೆ. ಸಖತ್ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಜೊತೆ ನಿಶ್ವಿಕಾ ನಾಯ್ಡು ರೊಮ್ಯಾನ್ಸ್ ಮಾಡಲು ಸಜ್ಜಾಗಿದ್ದಾರೆ.

ಮೊದಲ ಬಾರಿಗೆ ಗಣೇಶ್ ಮತ್ತು ನಿಶ್ವಿಕಾ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಸಖತ್ ಒಂದು ರೊಮ್ಯಾಂಟಿಕ್ ಸಿನಿಮಾವಾಗಿದೆ. ಚಿತ್ರದಲ್ಲಿ ನಿಶ್ವಿಕಾ, ನಕ್ಷತ್ರ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಕ್ಷತ್ರ ಶಾಲಾ ಶಿಕ್ಷಕಿಯ ಪಾತ್ರವಾಗಿದೆ.

Nishvika Naidu to Play Female Lead opposite Ganesh in Suni’s Sakath Movie

ಅಂದಹಾಗೆ ಸಖತ್ ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿಬರತ್ತಿರುವ ಸಿನಿಮಾ. ಈ ಮೊದಲು ಗಣಿ ಮತ್ತು ಸುನಿ ಇಬ್ಬರು ಚಮಕ್ ಮೂಲಕ ಅಭಿಮಾನಿಗಳನ್ನು ಮೋಡಿ ಮಾಡಿದ್ದರು. ಇದೀಗ ಸಖತ್ ಮೂಲಕ ಎರಡನೇ ಬಾರಿಗೆ ಒಂದಾಗಿದ್ದು, ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

ಗಣೇಶ್ ಇತ್ತೀಚಿಗಷ್ಟೆ ಗಾಳಿಪಟಿ-2 ಸಿನಿಮಾದ ಕಜಕಿಸ್ತಾನದಲ್ಲಿ ಶೂಟಿಂಗ್ ಮುಗಿಸಿ ವಾಪಸ್ ಆಗಿದ್ದಾರೆ. ಇನ್ನು ಮಾರ್ಚ್ 22ರಿಂದ ಸಖತ್ ಸಿನಿಮಾದ ಚಿತ್ರೀಕರಣ ಪುನಃ ಪ್ರಾರಂಭವಾಗಲಿದ್ದು, ಗಣಿ ಮತ್ತು ನಿಶ್ವಿಕಾ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

Recommended Video

ಜನರ ತಲೆಗೆ ಹುಳಬಿಟ್ಟ ನವರಸನಾಯಕ ಜಗ್ಗೇಶ್ | Filmibeat Kannada

More from Filmibeat

English summary
Actress Nishvika Naidu to Play Female Lead opposite Ganesh in Suni’s Sakath Movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X