ಮತ್ತೊಂದು ಸ್ಪೆಷಲ್ ಸಿನಿಮಾ ಮೂಲಕ ಬಂದ ನಿತ್ಯಾ ಮೆನನ್
Recommended Video

ನಿತ್ಯ ಮೆನನ್ ಹೊಸ ಸಿನಿಮಾ ಹೇಗಿದೆ..? | FILMIBEAT KANNADA
ನಟಿ ನಿತ್ಯಾ ಮೆನನ್ ಸಿನಿಮಾ ಮಾಡುತ್ತಿದ್ದಾರೆ ಎಂದರೆ ಅದರಲ್ಲೊಂದು ವಿಶೇಷ ಇದ್ದೇ ಇರುತ್ತದೆ. 'ಕೋಟಿಗೊಬ್ಬ 2' ಸಿನಿಮಾದಲ್ಲಿ ಸಾಲುತಿಲ್ಲವೆ ಸಾಲುತಿಲ್ಲವೆ ಎಂದು ಸುದೀಪ್ ಜೊತೆ ಕುಣಿದಿದ್ದ ನಿತ್ಯಾ ಈಗ ಮತ್ತೆ ಕನ್ನಡ ಸಿನಿಮಾ ಮಾಡುತ್ತಿದ್ದಾರೆ.
'ಪ್ರಾಣ' ಎಂಬ ಹೊಸ ಸಿನಿಮಾದಲ್ಲಿ ನಿತ್ಯಾ ನಟಿಸುತ್ತಿದ್ದಾರೆ. ಈ ಸಿನಿಮಾದ ಒಂದು ಪೋಸ್ಟರ್ ಈ ಹಿಂದೆ ರಿಲೀಸ್ ಆಗಿದ್ದು, ಈಗ ಮತ್ತೊಂದು ಹೊಸ ಪೋಸ್ಟರ್ ಹೊರ ಬಂದಿದೆ. ಈ ಪೋಸ್ಟರ್ ಕೂಡ ಸಖತ್ ವಿಶೇಷವಾಗಿದೆ.
ಒಂದು ಸಿನಿಮಾದ ಪೋಸ್ಟರ್ ನ ಮುಖ್ಯ ಉದ್ದೇಶ ಚಿತ್ರದ ಮೇಲೆ ನಿರೀಕ್ಷೆ ಹುಟ್ಟಿಸುವುದು ಆಗಿರುತ್ತದೆ. ಆ ಕೆಲಸವನ್ನು ಈ ಪೋಸ್ಟರ್ ಮಾಡುತ್ತಿದೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ನಲ್ಲಿ ಚಿತ್ರ ಬರುತ್ತಿದೆ.

ಅಂದಹಾಗೆ, ಸಂಪೂರ್ಣ ಸಿನಿಮಾವನ್ನು ಸಿಂಕ್ ಸೌಂಡ್ ನಲ್ಲಿ ಚಿತ್ರೀಕರಿಸಲಾಗುತ್ತಿದ್ದು. ವಿ ಕೆ ಪ್ರಕಾಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ರೆಸುಲ್ ಪುಕುಟ್ಟಿ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
English summary
Actress Nithya Menen's 'Prana' movie poster released.


Click it and Unblock the Notifications