ವಿದೇಶಿ ಹುಡುಗನ ಜೊತೆ ನಿತ್ಯಾ ಮೆನನ್: ಶುಭ ಕೋರಿದ ಅಭಿಮಾನಿಗಳು
ಜೋಶ್, ಮೈನಾ, ಕೋಟಿಗೊಬ್ಬ 2 ಅಂತಹ ಚಿತ್ರಗಳ ಮೂಲಕ ಕನ್ನಡ ಕಲಾಪ್ರೇಕ್ಷಕರ ಮನಸ್ಸು ಗೆದ್ದಿದ್ದ ನಟಿ ನಿತ್ಯಾ ಮೆನನ್ ಪರಭಾಷೆಯಲ್ಲಿ ಹೆಚ್ಚು ಯಶಸ್ಸು ಕಂಡಿದ್ದಾರೆ. ಮೂಲತಃ ಬೆಂಗಳೂರಿನ ಹುಡುಗಿ ನಿತ್ಯಾ ಈಗ ತೆಲುಗು ಮತ್ತು ತಮಿಳಿನಲ್ಲಿ ಬಹುಬೇಡಿಕೆಯನ್ನ ಹೊಂದಿರುವ ನಟಿ.
ಇಷ್ಟು ದಿನ ಬರಿ ಸಿನಿಮಾ ವಿಚಾರಗಳಿಗೆ ಸುದ್ದಿಯಾಗಿದ್ದ ನಿತ್ಯಾ ಮೆನನ್ ಈಗ ವಿದೇಶಿ ಹುಡುಗನ ಜೊತೆ ಕಾಣಿಸಿಕೊಂಡು ಸಿಕ್ಕಾಪಟ್ಟೆ ಚರ್ಚೆಯಾಗ್ತಿದ್ದಾರೆ.
ಹೌದು, ವಿದೇಶಿ ಹುಡುಗನನ್ನ ತಬ್ಬಿಕೊಂಡು ಫೋಟೋಗೆ ಪೋಸ್ ಕೊಟ್ಟಿರುವ ನಿತ್ಯಾ ಮೆನನ್, ಆ ಫೋಟೋವನ್ನ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ, ಅದಕ್ಕೆ '' Friends, love and happiness... '' ಎಂದು ಅಡಿಬರಹ ನೀಡಿದ್ದಾರೆ. ಇದನ್ನ ನೋಡಿದ ಅಭಿಮಾನಿಗಳು ನಿತ್ಯಾ ಮೆನನ್ ಗೆ ವಿಶ್ ಮಾಡಿದ್ದಾರೆ. ಅದಕ್ಕೂ ಕೂಡ ನಿತ್ಯಾ ಮೆನನ್ ಪ್ರತಿಕ್ರಿಯಿಸಿ, ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ, ಆ ವಿದೇಶಿ ಹುಡುಗ ಯಾರು?

ರಿಲೆಶನ್ ಷಿಪ್ ನಲ್ಲಿ ನಿತ್ಯಾ ಮೆನನ್?
ನಿತ್ಯಾ ಮೆನನ್ ಅವರು ಪೋಸ್ಟ್ ಮಾಡಿರುವ ಫೋಟೋ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗ್ತಿದೆ. ನಿತ್ಯಾ ಮೆನನ್ ಅಪ್ಪಿಕೊಂಡಿರುವ ಈ ವಿದೇಶಿ ಹುಡುಗ ಯಾರು, ರಿಲೆಶನ್ ಷಿಪ್ ನಲ್ಲಿರಬಹುದಾ ಎಂಬ ಪ್ರಶ್ನೆ ಮಾಡಿದ್ದಾರೆ. ಕೆಲವು ಒಂದು ಹೆಜ್ಜೆ ಮುಂದೆ ಹೋಗಿ ವಿಶ್ ಮಾಡಿದ್ದಾರೆ.

ನನ್ನ ಫ್ರೆಂಡ್, ಸಹೋದರ ಎಂದ ನಿತ್ಯಾ ಮೆನನ್
ಈ ಕಾಮೆಂಟ್ ಗಳನ್ನ ಗಮನಿಸಿದ ನಿತ್ಯಾ ಮೆನನ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಒಲಿವರ್ ಯಾರು ಎಂದು ಕೇಳುತ್ತಿರುವವರ ಗಮನಕ್ಕೆ ''ಅವರು ನನ್ನ ಫ್ರೆಂಡ್ ಮತ್ತು ನನ್ನ ಸಹೋದರ'' ಎಂದು ಹೇಳಿದ್ದಾರೆ.

ವಿದೇಶಿ ಹುಡುಗಿ ಜೊತೆಯೂ ಫೋಟೋ.!
ಕೇವಲ ವಿದೇಶಿ ಹುಡುಗನ ಜೊತೆ ಮಾತ್ರವಲ್ಲ, ವಿದೇಶಿ ಹುಡುಗಿ ಮತ್ತು ಮತ್ತಿಬ್ಬರು ಹುಡುಗರ ಜೊತೆ ಇರುವ ಫೋಟೋ ಕೂಡ ಪೋಸ್ಟ್ ಮಾಡಿದ್ದಾರೆ. ಅಂದ್ಹಾಗೆ, ಇದು 'ಅಮ್ಮ' ಆಶ್ರಮದಲ್ಲಿ ತೆಗೆದಿರುವ ಫೋಟೋ. ಅಮ್ಮ ಆಶ್ರಮದಲ್ಲಿ ಅಪ್ಪಿಕೊಳ್ಳುವುದು ಸಂಪ್ರದಾಯ. ಹಾಗಾಗಿ, ಸ್ನೇಹಿತನನ್ನು ತಬ್ಬಿಕೊಂಡಿದ್ದಾರೆ ನಿತ್ಯಾ ಮೆನನ್.

ಜಯಲಲಿತಾ ಬಯೋಪಿಕ್
ಎನ್.ಟಿ.ಆರ್ ಕಥಾನಾಯಕಡು, ಗೀತಾ ಗೋವಿಂದಂ ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದ ನಿತ್ಯಾ ಮೆನನ್ ಈಗ ಜಯಲಲಿತಾ ಅವರ ಬಯೋಪಿಕ್ ಮಾಡ್ತಿದ್ದಾರೆ. ಅದರ ಹಿಂದೆಯೇ ಸೈಕೋ, ಮಿಸನ್ ಮಂಗಲ್ ಎಂಬ ಚಿತ್ರವನ್ನ ಕೂಡ ಮಾಡುತ್ತಿದ್ದಾರೆ.


Click it and Unblock the Notifications











