ರಾಜಮೌಳಿ 'ಆರ್ ಆರ್ ಆರ್' ಸಿನಿಮಾದಲ್ಲಿ ನಿತ್ಯಾ ಮೆನನ್

ಟಾಲಿವುಡ್ ನ ಖ್ಯಾತ ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ 'ಆರ್ ಆರ್ ಆರ್' ಸಿನಿಮಾ ನಾಯಕಿ ಆಯ್ಕೆ ವಿಚಾರ ಇನ್ನು ಚರ್ಚೆಯಾಗುತ್ತಲೆ ಇದೆ. ಈಗಾಗಲೆ ಚಿತ್ರದ ಮೊದಲ ನಾಯಕಿಯಾಗಿ ಬಾಲಿವುಡ್ ನಟಿ ಅಲಿಯಾ ಭಟ್ ಆಯ್ಕೆಯಾಗಿದ್ದಾರೆ. 'ಆರ್ ಆರ್ ಆರ್' ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕಿದ್ದ ಮತ್ತೋರ್ವ ನಾಯಕಿ ಇಂಗ್ಲೆಂಡ್ ನ ಡೈಸಿ ಈದ್ಗರ್ ಚಿತ್ರದಿಂದ ಹೊರ ನಡೆದ ಕಾರಣ ಆಕೆಯ ಜಾಗಕ್ಕೆ ಯಾರನ್ನು ಕರೆತರುವುದು ಎನ್ನುವ ತಲೆನೋವು ಚಿತ್ರತಂಡಕ್ಕೆ ಎದುರಾಗಿದೆ.

ಇದರ ನಡುವೆ ಚಿತ್ರಕ್ಕೆ ಮತ್ತೋರ್ವ ನಾಯಕಿ ನಟಿ ನಿತ್ಯಾ ಮೆನನ್ ಆಯ್ಕೆ ಆಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಚಿತ್ರದಲ್ಲಿ ಜ್ಯೂ, ಎನ್ ಟಿ ಆರ್ ಗೆ ನಾಯಕಿಯಾಗಿ ನಿತ್ಯಾ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಅಂದರೆ ಚಿತ್ರದಲ್ಲಿ ನಿತ್ಯಾ ಟ್ರೈಬಲ್ ಹುಡುಗಿಯ ಪಾತ್ರದಲ್ಲಿ ಮಿಂಚಲಿದ್ದಾರಂತೆ. ಈಗಾಗಲೆ ನಿತ್ಯಾ ಜೊತೆ ಮಾತುಕತೆ ನಡೆಸಿರುವ ಚಿತ್ರತಂಡಕ್ಕೆ ನಿತ್ಯಾ ಕಡೆಯಿಂದ ಗ್ರೀನ್ ಸಿಗ್ನಲ್ ಸಿಗುವುದೊಂದೆ ಭಾಕಿ ಇದೆಯಂತೆ.

ಚಿತ್ರದಿಂದ ಹೊರನಡೆದಿರುವ ಡೈಸಿ ಜಾಗಕ್ಕೆ ಇನ್ನು ನಾಯಕಿ ಸಿಕ್ಕಿಲ್ಲ. ಡೈಸಿ ಈದ್ಗರ್ ಪಾತ್ರಕ್ಕೆ ಬಾಲಿವುಡ್ ನಟಿಮಣಿಯರ ಹೆಸರು ಕೇಳಿ ಬರುತ್ತಿತ್ತು. ಪರಿಣೀತಿ ಚೋಪ್ರ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ರಾಜಮೌಳಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರಿನ್ನು ಫೈನೆಲ್ ಆಗಿಲ್ಲ. ಆದ್ರೀಗ ದಕ್ಷಿಣ ಭಾರತದ ನಟಿ ನಿತ್ಯಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Nithya menon playing importent roal in rajamouli RRR movie

ಆರ್ ಆರ್ ಆರ್ ಸಿನಿಮಾ ಈಗಾಗಲೆ ಎರಡು ಹಂತದ ಚಿತ್ರೀಕರಣ ಮುಗಿಸಿ ಮೂರನೆ ಹಂತದ ಶೂಟಿಂಗ್ ಗೆ ತಯರಾಗುತ್ತಿದೆ. ಪುಣೆಯಲ್ಲಿ ನಡೆಯುವ ಚಿತ್ರೀಕರಣದಲ್ಲಿ ಬಾಲಿವುಡ್ ನ ಸ್ಟಾರ್ ನಟ ಅಜಯ್ ದೇವಗನ್ ಮತ್ತು ನಟಿ ಅಲಿಯಾ ಭಟ್ ಭಾಗಿಯಾಗಲಿದ್ದಾರೆ.

ಇದರ ನಡುವೆ ನಟ ರಾಮ್ ಚರಣ್ ಚಿತ್ರೀಕರಣ ವೇಳೆ ಗಾಯಗೊಂಡಿರುವ ಕಾರಣ ಸ್ವಲ್ಪ ದಿನಗಳಿಂದ ವಿಶ್ರಾಂತಿಯಲ್ಲಿದ್ದಾರೆ. ಹಾಗಾಗಿ ರಾಮ್ ಚರಣ್ ಭಾಗದ ಚಿತ್ರೀಕರಣ ಕೆಲವು ದಿನಗಳು ತಡವಾಗುವ ಸಾಧ್ಯತೆ ಇದೆ. ಒಟ್ನಲ್ಲಿ ನಾಯಕಿ ವಿಚಾರಕ್ಕೆ ಸದ್ದು ಮಾಡುತ್ತಲೆ ಇರುವ 'ಆರ್ ಆರ್ ಆರ್' ಸಿನಿಮಾದಲ್ಲಿ ನಿತ್ಯಾ ಮೆನನ್ ಕಾಣಿಸಿಕೊಳ್ಳುವುದ ನಿಜಾನ ಎನ್ನುವುದು ಸಧ್ಯದಲ್ಲೆ ಗೊತ್ತಾಲಿದೆ.

More from Filmibeat

English summary
Nithya menon has been reportedly signed for a very important role in rajamouli's RRR movie. She has not replaced international actor Daisy Edgar Jones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X