For Quick Alerts
  ALLOW NOTIFICATIONS  
  For Daily Alerts

  ಗೊತ್ತಿಲ್ಲದೇ ಏನೇನೋ ಮಾತಾಡಬೇಡಿ: ನೆಟ್ಟಿಗರ ವಿರುದ್ಧ ನಿತ್ಯಾ ಮೆನನ್ ಬೇಸರ

  |
  ನಿತ್ಯಾ ಮೆನನ್‍ಗೆ ಬಹಿಷ್ಕಾರದ ಬೆದರಿಕೆ

  ಜೋಶ್, ಮೈನಾ ಹಾಗೂ ಕೋಟಿಗೊಬ್ಬ-2 ಚಿತ್ರಗಳ ಮೂಲಕ ಕನ್ನಡ ಪ್ರೇಕ್ಷಕರ ಮನಸ್ಸು ಕದ್ದ ಚೋರಿ ನಿತ್ಯಾ ಮೆನನ್ ಸದ್ಯ ಪರಭಾಷೆಯಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಹೈಟ್ ಕಮ್ಮಿ ಇದ್ದರೂ ಅದನ್ನ ಪ್ಲಸ್ ಮಾಡಿಕೊಂಡು ತೆಲುಗು, ತಮಿಳು ಮತ್ತು ಹಿಂದಿ ಸೂಪರ್ ಸ್ಟಾರ್ ಗಳ ಜೊತೆ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ.

  ನಿತ್ಯಾ ಮೆನನ್ ಎತ್ತರಕ್ಕೆ, ಅವರ ಸೌಂದರ್ಯಕ್ಕೆ, ಅವರ ಅಭಿನಯಕ್ಕೆ ಪ್ರತ್ಯೇಕ ಅಭಿಮಾನಿಗಳಿದ್ದಾರೆ. ಆದ್ರೆ, ಇತ್ತೀಚಿನ ದಿನಗಳಲ್ಲಿ ನಿತ್ಯಾ ಮೆನನ್ ಸ್ವಲ್ಪ ದಪ್ಪ ಆಗಿದ್ದಾರೆ. ಇದು ನಿತ್ಯಾ ಅಭಿಮಾನಿಗಳಿಗೆ ಬೇಸರ ತರಿಸಿದೆ. ಈ ಬಗ್ಗೆ ಇಂಟರ್ ನೆಟ್ ನಲ್ಲಿ ಮೈನಾ ಸುಂದರಿಯನ್ನ ಕಾಲೆಳೆಯುತ್ತಿದ್ದಾರೆ.

  ನಿತ್ಯಾ ಮೆನನ್ ರಿಂದ ಕನ್ನಡದಲ್ಲಿ ಆಟೋಗ್ರಾಫ್ ಹಾಕಿಸಿದ ದತ್ತಣ್ಣ ನಿತ್ಯಾ ಮೆನನ್ ರಿಂದ ಕನ್ನಡದಲ್ಲಿ ಆಟೋಗ್ರಾಫ್ ಹಾಕಿಸಿದ ದತ್ತಣ್ಣ

  ಈ ನೆಗಿಟೀವ್ ಕಾಮೆಂಟ್ ಗಳ ಬಗ್ಗೆ ಬೇಸರ ಮಾಡಿಕೊಂಡಿರುವ ನಿತ್ಯಾ ಮೆನನ್, ತಮ್ಮ ಫಿಟ್ನೆಸ್ ಬಗ್ಗೆ ಮಾತನಾಡಿದ್ದಾರೆ. ಡುಮ್ಮಿ, ಸೋಮಾರಿ ಎಂದೆಲ್ಲ ನಿಂದಿಸಿದವರಿಗೆ ತಮ್ಮದೇ ಸ್ಟೈಲ್ ನಲ್ಲಿ ಉತ್ತರಿಸಿದ್ದಾರೆ.

  ಕೆಲವರಿಗೆ ಅಜ್ಞಾನ ತುಂಬಿದೆ

  ಕೆಲವರಿಗೆ ಅಜ್ಞಾನ ತುಂಬಿದೆ

  ''ಸಾಮಾನ್ಯ ಜನರಲ್ಲಿ ಕೆಲವರು ಅಜ್ಞಾನ ಹೊಂದಿದ್ದಾರೆ. ಯಾಕಂದ್ರೆ, ಯಾರಾದರೂ ತೂಕದ ಸಮಸ್ಯೆ ಎದುರಿಸುತ್ತಿದ್ದರೇ ಅವರು ಸೋಮಾರಿ ಅಥವಾ ತಿಂಡಿಪೋತಿ ಅದಕ್ಕೆ ದಪ್ಪಕ್ಕೆ ಆಗಿದ್ದಾರೆ ಎನ್ನುವುದು ತಪ್ಪು. ತಿನ್ನುವುದರಿಂದ, ಸೋಮಾರಿತನದಿಂದ ಯಾರೂ ದಪ್ಪ ಆಗಲ್ಲ. ಸಿನಿಮಾ ಕಲಾವಿದರು ಸೋಮಾರಿಗಳಲ್ಲ'' ಎಂದು ಟ್ರೋಲ್ ಗಳಿಗೆ ತಿರುಗೇಟು ನೀಡಿದ್ದಾರೆ.

  ನಾವು ಸುಮ್ಮನೆ ಕೂತು ಎಂಜಾಯ್ ಮಾಡ್ತಿಲ್ಲ

  ನಾವು ಸುಮ್ಮನೆ ಕೂತು ಎಂಜಾಯ್ ಮಾಡ್ತಿಲ್ಲ

  ''ಕೆಲವು ಹಾರ್ಮೋನ್ ಸಮಸ್ಯೆಗಳಿಂದಲೂ ತೂಕ ಹೆಚ್ಚಿಸಿಕೊಳ್ಳುತ್ತಾರೆ. ನಾವು ಸುಮ್ಮನೆ ಕೂತು ಎಂಜಾಯ್ ಮಾಡ್ತಿಲ್ಲ. ಇದು ಸಹಜವಾಗಿ ನಮಗೆ ಬೇಸರ ಉಂಟು ಮಾಡುತ್ತೆ. ಜನರು ಈ ಬಗ್ಗೆ ಅರಿವು ಹೊಂದಬೇಕು'' ಎಂದು ನಟಿ ನಿತ್ಯಾ ಮೆನನ್ ಹೇಳಿಕೊಂಡಿದ್ದಾರೆ.

  ವಿದೇಶಿ ಹುಡುಗನ ಜೊತೆ ನಿತ್ಯಾ ಮೆನನ್: ಶುಭ ಕೋರಿದ ಅಭಿಮಾನಿಗಳುವಿದೇಶಿ ಹುಡುಗನ ಜೊತೆ ನಿತ್ಯಾ ಮೆನನ್: ಶುಭ ಕೋರಿದ ಅಭಿಮಾನಿಗಳು

  ನಿತ್ಯಾ ಮೆನನ್ ಡುಮ್ಮಿ ಡುಮ್ಮಿ ಅಂತಾರೆ

  ನಿತ್ಯಾ ಮೆನನ್ ಡುಮ್ಮಿ ಡುಮ್ಮಿ ಅಂತಾರೆ

  ಕಳೆದ ಕೆಲವು ವರ್ಷಗಳಿಂದ ನಿತ್ಯಾ ಮೆನನ್ ದಪ್ಪ ಆಗಿದ್ದಾರೆ. ಅದಕ್ಕೂ ಮುಂಚೆ ಅಷ್ಟಾಗಿ ದಪ್ಪ ಇರಲಿಲ್ಲ. ಸ್ಲಿಮ್ ಆಗಿದ್ದರು. ಇತ್ತೀಚಿನ ಸಿನಿಮಾಗಳಲ್ಲಿ ನಿತ್ಯಾ ದಪ್ಪಕ್ಕೆ ಕಾಣಿಸಿಕೊಳ್ಳುತ್ತಿರುವುದನ್ನ ಪ್ರೇಕ್ಷಕರು ಖಂಡಿಸಿದ್ದಾರೆ. ನಿತ್ಯಾ ಡುಮ್ಮಿ ಡುಮ್ಮಿ ಎಂದು ಕಾಲೆಳೆಯುತ್ತಿದ್ದಾರೆ.

  ಹಾಗಾದ್ರೆ ನಿತ್ಯಾ ಎದುರಿಸುತ್ತಿರುವ ಸಮಸ್ಯೆ ಏನು?

  ಹಾಗಾದ್ರೆ ನಿತ್ಯಾ ಎದುರಿಸುತ್ತಿರುವ ಸಮಸ್ಯೆ ಏನು?

  ತಮ್ಮ ದೇಹದ ತೂಕ ಹೆಚ್ಚಿಸರುವ ಬಗ್ಗೆ ಪರೋಕ್ಷವಾಗಿ ಮಾತನಾಡಿದ ನಿತ್ಯಾ ಮೆನನ್, ಹಾರ್ಮೋನ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಹಾಗಾಗಿ, ತೂಕದ ಬಗ್ಗೆ ನಿತ್ಯಾ ಹೆಚ್ಚಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ. 'ಮಿಷನ್ ಮಿಂಗಲ್' ಚಿತ್ರದಲ್ಲಿ ನಟಿಸಿದ್ದ ನಿತ್ಯಾ ಕೊಲಾಂಬಿ, ದಿ ಐರನ್ ಲೇಡಿ, ಸೈಕೋ, ಅರಾಮ್ ತಿರುಕಲ್ಪನಾ ಎಂಬ ಚಿತ್ರಗಳಲ್ಲೂ ಅಭಿನಯಿಸುತ್ತಿದ್ದಾರೆ.

  English summary
  South actress Nithya menon has react about negative comments on her body shaming.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X