For Quick Alerts
  ALLOW NOTIFICATIONS  
  For Daily Alerts

  ಮಲೆಯಾಳಂ ಸಂದರ್ಶನದಲ್ಲಿ ಕನ್ನಡ ಹಾಡು ಹಾಡಿದ ನಿತ್ಯಾ ಮೆನನ್

  |

  ಬೆಂಗಳೂರಿನಲ್ಲಿ ಹುಟ್ಟಿರುವ ನಟಿ ನಿತ್ಯಾ ಮೆನನ್ ಬಾಲಿವುಡ್ ವರೆಗೆ ಹೆಸರು ಮಾಡಿದ್ದಾರೆ. ಇತ್ತೀಚಿಗೆ 'ಮಿಷನ್ ಮಂಗಲ್' ಸಿನಿಮಾದಲ್ಲಿ ಅಕ್ಷಯ ಕುಮಾರ್ ಜೊತೆಗೆ ನಿತ್ಯಾ ಮೆನನ್ ನಟಿಸಿದ್ದಾರೆ.

  ಎಷ್ಟೇ ಬೆಳೆದರು, ಯಾವುದೇ ಭಾಷೆಯ ಸಿನಿಮಾ ಮಾಡಿದರೂ, ನಿತ್ಯಾ ಕನ್ನಡವನ್ನು ಎಂದಿಗೂ ಮರೆತಿಲ್ಲ. ಆಗಾಗ ಆಕೆ ತನ್ನ ಕನ್ನಡ ಪ್ರೇಮವನ್ನು ತೋರಿಸುತ್ತಿರಿತ್ತಾರೆ. ಕನ್ನಡದ ಅವರ ಅಭಿಮಾನಿಗಳಿಗೆ ಅದು ಬಹಳ ಇಷ್ಟ ಆಗುತ್ತದೆ. ಇದೀಗ ನಿತ್ಯಾ ಮೆನನ್ ಮಲೆಯಾಳಂ ಸಂದರ್ಶನದಲ್ಲಿ ಕನ್ನಡ ಹಾಡನ್ನು ಹಾಡುವ ಮೂಲಕ ಗಮನ ಸೆಳೆದಿದ್ದಾರೆ.

  ನಿತ್ಯಾ ಮೆನನ್ ರಿಂದ ಕನ್ನಡದಲ್ಲಿ ಆಟೋಗ್ರಾಫ್ ಹಾಕಿಸಿದ ದತ್ತಣ್ಣ ನಿತ್ಯಾ ಮೆನನ್ ರಿಂದ ಕನ್ನಡದಲ್ಲಿ ಆಟೋಗ್ರಾಫ್ ಹಾಕಿಸಿದ ದತ್ತಣ್ಣ

  ಮಲೆಯಾಳಂ ಸಂದರ್ಶನದಲ್ಲಿ ನಿತ್ಯಾ ಆರೇಳು ಹಾಡುಗಳನ್ನು ಹಾಡಿದರು. ಕೆಲವು ಭಾಷೆಯ ಹಾಡುಗಳು ಇದರಲ್ಲಿ ಇತ್ತು. ನಿರೂಪಕಿಯ ಕೋರಿಕೆ ಮೇರೆಗೆ ತಮಿಳು, ತೆಲುಗು, ಮಲೆಯಾಳಂ, ಹಿಂದಿ, ಇಂಗ್ಲೀಷ್ ಹಾಡುಗಳನ್ನು ನಿತ್ಯಾ ಹಾಡಿದರು. ಹಾಡು ಕೇಳಿದ ನಿರೂಪಕಿ ಚಪ್ಪಾಳೆ ಹೊಡೆದರು.

  ಆದರೆ, ನಿತ್ಯಾ ಮೆನನ್ ''ನಾನಿನ್ನು ಕನ್ನಡ ಹಾಡನ್ನು ಹಾಡಿಲ್ಲ'' ಎಂದು ಹೇಳಿ ಕನ್ನಡ ಹಾಡು ಶುರು ಮಾಡಿದರು. 'ಮಿಲನ' ಸಿನಿಮಾದ ''ನಿನ್ನಿಂದಲೇ.. ನಿನ್ನಿಂದಲೇ..'' ಹಾಡನ್ನು ಇಂಪಾಗಿ ಹಾಡಿದರು. ಈ ಮೂಲಕ ತಮ್ಮ ಕನ್ನಡ ಪ್ರೇಮವನ್ನು ತೋರಿಸಿದರು.

  ಚಿತ್ರರಂಗದಲ್ಲಿ ಅರ್ಧ ಶತಕ ಬಾರಿಸಿದ 'ಮೈನಾ' ಸುಂದರಿಚಿತ್ರರಂಗದಲ್ಲಿ ಅರ್ಧ ಶತಕ ಬಾರಿಸಿದ 'ಮೈನಾ' ಸುಂದರಿ

  ಇಷ್ಟೇ ಅಲ್ಲದೆ, ಕೆಲ ತಿಂಗಳುಗಳ ಹಿಂದೆ 'ಮಿಷನ್ ಮಂಗಲ್' ಸಿನಿಮಾದ ಕಾರ್ಯಕ್ರಮದಲ್ಲಿ ನಟ ದತ್ತಣ್ಣ ಜೊತೆಗೆ ನಿತ್ಯಾ ಮೆನನ್ ಕನ್ನಡದಲ್ಲಿ ಆಟೋಗ್ರಾಫ್ ಹಾಕಿದ್ದರು.

  ಕನ್ನಡದವರೇ ಆಗಿದ್ದರೂ, ನಿತ್ಯಾ ಹೆಚ್ಚು ತೆಲುಗು, ತಮಿಳು, ಮಲೆಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ 'ಕೋಟಿಗೊಬ್ಬ 2', 'ಮೈನಾ', 'ಜೋಶ್', 'ಐದೊಂದ್ಲ ಐದು', 'ಸೆವೆನ್ ಓ ಕ್ಲಾಕ್' ನಿತ್ಯಾ ನಟನೆಯ ಸಿನಿಮಾಗಳಾಗಿವೆ.

  English summary
  Actress Nithya Menon sings kannada song in malayalam interview.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X