For Quick Alerts
  ALLOW NOTIFICATIONS  
  For Daily Alerts

  'ವೃತ್ರ' ಚಿತ್ರದಲ್ಲಿ ರಶ್ಮಿಕಾ ಜಾಗಕ್ಕೆ ಬಂದ ಯುವ ನಟಿ 'ಇವರೇ'.!

  |

  ಎಲ್ಲವೂ ಪ್ಲಾನ್ ಪ್ರಕಾರ ನಡೆದಿದ್ದರೆ, ಇಷ್ಟೊತ್ತಿಗೆ 'ವೃತ್ರ' ಚಿತ್ರದಲ್ಲಿ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅಭಿನಯಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಚಿತ್ರತಂಡದಿಂದ ರಶ್ಮಿಕಾ ಮಂದಣ್ಣ ಹೊರನಡೆದರು.

  ಇದೀಗ 'ವೃತ್ರ' ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಜಾಗಕ್ಕೆ ಯುವ ನಟಿ ನಿತ್ಯಾಶ್ರೀ ಕಾಲಿಟ್ಟಿದ್ದಾರೆ. ರಶ್ಮಿಕಾ ಮಂದಣ್ಣ ನಿರ್ವಹಿಸಬೇಕಿದ್ದ ಇನ್ವೆಸ್ಟಿಗೇಟಿವ್ ಆಫೀಸರ್ ಪಾತ್ರದಲ್ಲಿ ನಿತ್ಯಾಶ್ರೀ ಕಾಣಿಸಿಕೊಳ್ಳಲಿದ್ದಾರೆ.

  ಗೌತಮ್ ಅಯ್ಯರ್ ನಿರ್ದೇಶಿಸುತ್ತಿರುವ 'ವೃತ್ರ' ಅಪ್ಪಟ ಮಹಿಳಾ ಪ್ರಧಾನ ಚಲನಚಿತ್ರ. ಈ ಮೊದಲು ತನಿಖಾಧಿಕಾರಿಯ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಅಭಿನಯಿಸಬೇಕಿದ್ದರಿಂದ ಆಕೆಗಾಗಿ ಡಿಫರೆಂಟ್ ಲುಕ್ ಪ್ಲಾನ್ ಮಾಡಲಾಗಿತ್ತು. ಆದರೀಗ ರಶ್ಮಿಕಾ ಮಂದಣ್ಣ ಜಾಗಕ್ಕೆ ನಿತ್ಯಾಶ್ರೀ ಎಂಟ್ರಿ ಕೊಟ್ಟಿರುವುದರಿಂದ, ಆಕೆಯ ಲುಕ್ ನಲ್ಲಿ ರೀವರ್ಕ್ ಮಾಡಲಾಗಿದೆ. ಮುಂದೆ ಓದಿರಿ....

  ಸಕಲ ತಯಾರಿ ಮಾಡಿಕೊಂಡಿರುವ ನಿತ್ಯಾಶ್ರೀ

  ಸಕಲ ತಯಾರಿ ಮಾಡಿಕೊಂಡಿರುವ ನಿತ್ಯಾಶ್ರೀ

  'ವೃತ್ರ' ಚಿತ್ರದಲ್ಲಿ ತನಿಖಾಧಿಕಾರಿಯ ಪಾತ್ರ ನಿರ್ವಹಿಸುತ್ತಿರುವ ನಿತ್ಯಾಶ್ರೀ, ತಮ್ಮ ಪಾತ್ರಕ್ಕಾಗಿ ಈಗಾಗಲೇ ಹಲವು ತಯಾರಿ ಮಾಡಿಕೊಂಡಿದ್ದಾರೆ. ಮಹಿಳಾ ಕಾನ್ಸ್ಟೇಬಲ್ ಗಳಿಂದ ಹಿಡಿದು ಉನ್ನತ ಮಹಿಳಾ ಪೊಲೀಸ್ ಅಧಿಕಾರಿವರೆಗೂ ಚರ್ಚೆ ನಡೆಸಿದ್ದಾರೆ ನಟಿ ನಿತ್ಯಾಶ್ರೀ.

  ಬ್ರೇಕಪ್ ಸುದ್ದಿ ಬಳಿಕ ರಶ್ಮಿಕಾ ಮಂದಣ್ಣ ಬಗ್ಗೆ ಇನ್ನೊಂದು ಗುಸುಗುಸು.!

  ಗ್ಲಾಮರ್ ಇಲ್ಲ.!

  ಗ್ಲಾಮರ್ ಇಲ್ಲ.!

  ಮಹಿಳಾ ಪೊಲೀಸ್ ಅಧಿಕಾರಿಯಾಗಿ ನಿತ್ಯಾಶ್ರೀ ಕಾಣಿಸಿಕೊಳ್ಳುತ್ತಿರುವುದರಿಂದ ಇಡೀ ಚಿತ್ರದಲ್ಲಿ ಆಕೆ ಫಾರ್ಮಲ್ ಡ್ರೆಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಸಿನಿಮಾದಲ್ಲಿ ಗ್ಲಾಮರ್ ಇಲ್ಲ. ನಿತ್ಯಾಶ್ರೀ ಗೆ ಸ್ಟೈಲಿಸ್ಟ್ ಗಳೂ ಇಲ್ಲ.

  'ವೃತ್ರ' ಚಿತ್ರದಿಂದ ನಟಿ ರಶ್ಮಿಕಾ ಮಂದಣ್ಣ ಹೊರಬರಲು ಅಸಲಿ ಕಾರಣವೇನು.?

  ಗೌತಮ್ ಅಯ್ಯರ್ ಆಶಯ ಏನು.?

  ಗೌತಮ್ ಅಯ್ಯರ್ ಆಶಯ ಏನು.?

  'ವೃತ್ರ' ಚಿತ್ರವನ್ನು ವಾಸ್ತವಕ್ಕೆ ಹತ್ತಿರವಾಗಿ, ಆದಷ್ಟು ರಿಯಲ್ ಆಗಿ ತೆರೆಗೆ ತರಲು ಗೌತಮ್ ಅಯ್ಯರ್ ಪ್ರಯತ್ನ ಪಡುತ್ತಿದ್ದಾರೆ. 'ವೃತ್ರ' ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.

  ಯಾರೀ ನಿತ್ಯಾಶ್ರೀ.?

  ಯಾರೀ ನಿತ್ಯಾಶ್ರೀ.?

  ನಿತ್ಯಾಶ್ರೀ ಮೂಲತಃ ಡ್ಯಾನ್ಸರ್. ಈಗಾಗಲೇ ಮಣಿರತ್ನಂ ನಿರ್ದೇಶನದ ಚಿತ್ರವೊಂದರಲ್ಲಿ ನಿತ್ಯಾಶ್ರೀ ನಟಿಸಿದ್ದಾರೆ. ಅಲ್ಲದೆ ಮಲಯಾಳಂನ ಚಿತ್ರವೊಂದಕ್ಕೆ ಸಹ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರತಿಭಾವಂತೆ ಆಗಿರುವ ನಿತ್ಯಾಶ್ರೀ ಇದೀಗ 'ವೃತ್ರ' ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

  English summary
  Nithya Shree starrer Kannada Movie 'Vrithra' first look out.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X