ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ಹಾಗೂ ನಟಿ ರಂಜಿತಾ ನಂಟು ಬೆಳೆದಿದ್ದು ಹೇಗೆ?
ವಿವಾದಿತ ಆಧ್ಯಾತ್ಮಿಕ ಗುರು ನಿತ್ಯಾನಂದ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಇದು ಏಪ್ರಿಲ್ ಫೂಲ್ ಫ್ರಾಂಕ್ ಆಗಿರಬಹುದು ಎಂದು ಬಹುತೇಕರು ಊಹಿಸುತ್ತಿದ್ದಾರೆ.
ಬಿಡದಿ ಧ್ಯಾನಪೀಠದ ಆಶ್ರಮ ಒಂದ್ಕಾಲದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ದೇಶ ವಿದೇಶದ ಭಕ್ತರು ಇಲ್ಲಿಗೆ ಬರುತ್ತಿದ್ದರು. ಇದರಲ್ಲಿ ಸಿನಿಮಾ ನಟ, ನಟಿಯರು ಇದ್ದರು. ಸ್ವಾಮಿ ನಿತ್ಯಾನಂದ ಲೈಂಗಿಕ ಹಗರಣದ ವೀಡಿಯೋ ದಶಕದ ಹಿಂದೆ ಭಾರೀ ಸಂಚಲನ ಸೃಷ್ಟಿಸಿತ್ತು. ತಮಿಳು ನಟಿ ರಂಜಿತಾ ಜೊತೆ ನಿತ್ಯಾನಂದ ರಾಸಲೀಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಬಿಡಗಿ ಹಾಗೂ ಚೆನ್ನೈನಲ್ಲಿ ಆತನ ವಿರುದ್ಧ ದೂರುಗಳು ದಾಖಲಾಗಿತ್ತು.

ನಿತ್ಯಾನಂದನ ಮಾಜಿ ಕಾರು ಚಾಲಕ ಲೆನಿನ್ ಎಂಬಾತ ಈ ರಾಸಲೀಲೆ ಸಿಡಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಈ ಪ್ರಕರಣದಲ್ಲಿ ನಿತ್ಯಾನಂದ 50 ದಿನಗಳ ಕಾಲ ಜೈಲುವಾಸ ಅನುಭವಿಸಿದ್ದರು. ಆನಂತರ ಜಾಮೀನಿನ ಮೇಲೆ ಹೊರಬಂದಿದ್ದರು. 2019ರಲ್ಲಿ ಭಾರತ ಬಿಟ್ಟು ಪರಾರಿಯಾದ ನಿತ್ಯಾನಂದ 1 ವರ್ಷದ ಬಳಿಕ ತನ್ನದೇ ದೇಶ ಸ್ಥಾಪಿಸಿಕೊಂಡಿರುವುದಾಗಿ ಮಾಡಿರುವುದಾಗಿ ಘೋಷಿಸಿಕೊಂಡಿದ್ದ. ಆ ದೇಶದ ಹೆಸರು ಕೈಲಾಸ ಎನ್ನಲಾಗಿತ್ತು.
ತಮಿಳುನಾಡಿನ ತಿರುವಣ್ಣಾಮಲೈಯಲ್ಲಿ ಹುಟ್ಟಿ ಬೆಳೆದ ಅರುಣಾಚಲಂ ರಾಜಶೇಖರನ್ ಬಳಿಕ ಸನ್ಯಾಸಿ ಆಗಿದ್ದ. ಮಹಾವತಾರ್ ಬಾಬಾ ತಮ್ಮ ಹೆಸರನ್ನು ನಿತ್ಯಾನಂದ ಎಂದು ಬದಲಾಯಿಸಿದರು ಎಂದು ಸ್ವತಃ ಆ ಹೇಳಿಕೊಂಡಿದ್ದ. 2003 ರಲ್ಲಿ ಕರ್ನಾಟಕದ ಬಿಡದಿಯಲ್ಲಿ ಧ್ಯಾನ ಕೇಂದ್ರವನ್ನು ಸ್ಥಾಪಿಸಿದ್ದ. 2010ರಲ್ಲಿ ನಟಿ ರಂಜಿತಾ ಜೊತೆ ರಾಸಲೀಲೆ ನಡೆಸಿದ್ದಾರೆ ಎನ್ನಲಾಗಿದ್ದ ವೀಡಿಯೋ ಬಹಿರಂಗವಾಗಿತ್ತು. ಪ್ರಕರಣದ ತೀವ್ರ ಸ್ವರೂಪ ಪಡೆದಿತ್ತು.
ಅಹಮದಾಬಾದ್‌ನಲ್ಲಿ ಅಪ್ರಾಪ್ತ ಬಾಲಕಿಯರನ್ನು ತನ್ನ ಆಶ್ರಮದಲ್ಲಿ ಇಟ್ಟುಕೊಂಡು ಕಿರುಕುಳ ನೀಡಿದ್ದ ಆರೋಪದ ಮೇಲೆ 2019ರಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು. ನಟಿ ರಂಜಿತಾ ಇಂದಿಗೂ ನಿತ್ಯಾನಂದನ ಕೈಲಾಸ ದೇಶದಲ್ಲಿ ಇದ್ದಾರೆ ಎನ್ನಲಾಗುತ್ತದೆ. ನಿತ್ಯಾನಂದನ ಕೈಲಾಸಕ್ಕೆ ಶಿಷ್ಯೆ ರಂಜಿತಾ ಪ್ರಧಾನಿಯನ್ನಾಗಿ ನೇಮಕಗೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ.
ಕೆಲ ವರ್ಷಗಳ ಹಿಂದೆ ರಂಜಿತಾ ಹಾಗೂ ಆಕೆಯ ಸಹೋದರಿ ನಿರ್ಮಲಾ ಹೇಗೆ ನಿತ್ಯಾನಂದನ ಆಶ್ರಮ ಸೇರಿದರು ಎಂದು ಅವರ ತಂದೆ ಅಶೋಕ್ ಹೇಳಿದ್ದರು. ತೆಲುಗು ಸಂದರ್ಶನವೊಂದರಲ್ಲಿ ಮಾತನಾಡಿ ತಮ್ಮ ಇಬ್ಬರು ಹೆಣ್ಣು ಮಕ್ಕಳು ಇಂದಿಗೂ ನಿತ್ಯಾನಂದನ ಆಶ್ರಮದಲ್ಲಿದ್ದಾರೆ ಎಂದು ಕಣ್ಣೀರು ಹಾಕಿದ್ದರು.
ಅಮೆರಿಕಾದಲ್ಲಿ ನಿತ್ಯಾನಂದನ ಪ್ರವಚನ ಕೇಳಲು ರಂಜಿತಾ ಸಹೋದರಿ ನಿರ್ಮಲಾ ಹೋಗುತ್ತಿದ್ದಳು. ಆಕೆಯನ್ನು ನೋಡಲು ಅಲ್ಲಿಗೆ ಹೋಗಿದ್ದ ರಂಜಿತಾ ಕೂಡ ಅಕ್ಕನ ಜೊತೆ ಆಶ್ರಮಕ್ಕೆ ಹೋಗಲು ಆರಂಭಿಸಿದ್ದಳು. ಬಳಿಕ ನನ್ನ ಇಬ್ಬರೂ ಹೆಣ್ಣು ಮಕ್ಕಳು ತಮ್ಮ ತಮ್ಮ ಗಂಡನಿಗೆ ಡಿವೋರ್ಸ್ ಕೊಟ್ಟು ಆಶ್ರಮ ಸೇರಿದರು ಎಂದು ತಂದೆ ಅಶೋಕ್ ತಿಳಿಸಿದ್ದರು.
ಖ್ಯಾತ ನಟಿ, ಗುಡ್‌ವಿಲ್ ಎಂಬ ಕಾರಣಕ್ಕೆ ರಂಜಿತಾಳನ್ನು ನಿತ್ಯಾನಂದ ಕೈವಶ ಮಾಡಿಕೊಂಡಿರಬಹುದು ಎಂದು ಅಶೋಕ್ ಹೇಳಿದ್ದರು. ಒಮ್ಮೆ ನಾನು ಆಶ್ರಮಕ್ಕೆ ಹೋಗಿ ಗಲಾಟೆ ಮಾಡಿದ್ದೆ. ನನ್ನ ಹೆಣ್ಣು ಮಕ್ಕಳನ್ನು ಯಾಕೆ ಇಲ್ಲಿ ಇಟ್ಟುಕೊಂಡಿದ್ದೀಯಾ, ಕಳಿಸು ಎಂದಾಗ ಅವರು ಬಂದರೆ ಕರೆದುಕೊಂಡು ಹೋಗಿ ಎಂದು ಹೇಳಿದ್ದಾರೆ ಅಶೋಕ್ ನೆನಪಿಸಿಕೊಂಡಿದ್ದರು.
ನಮಗೆ ಮೋಕ್ಷ ಸಿಕ್ಕಿದೆ. ನಾವು ಇಲ್ಲಿ ಆನಂದದಿಂದ ಇದ್ದೇವೆ ಎಂದು ಇಬ್ಬರೂ ಮಕ್ಕಳು ಹೇಳಿದರು. ನಾನು ಎಷ್ಟು ಕರೆದರೂ ಬರಲಿಲ್ಲ. ಬಿಡದಿ ಆಶ್ರಮದಲ್ಲಿದ್ದಾಗ ಫೋನ್ ಮಾಡುತ್ತಿದ್ದರು. ದೇಶ ಬಿಟ್ಟ ಮೇಲೆ ಮಕ್ಕಳು ಫೋನ್ ಸಹ ಮಾಡುತ್ತಿಲ್ಲ ಎಂದು ಅಶೋಕ್ ವಿವರಿಸಿದ್ದರು.


Click it and Unblock the Notifications











