ಕಿಕಿ ಚಾಲೆಂಜ್ ಸ್ವೀಕರಿಸಿದ ನಿವೇದಿತಾ-ಅಭಿಮಾನಿಗಳಿಂದ ವಿರೋಧ
Recommended Video

ವಿಶ್ವದಾದ್ಯಂತ ಟ್ರೆಂಡಿಂಗ್ ನಲ್ಲಿರುವ ಕಿಕಿ ಚಾಲೆಂಜ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಿಕಿ ಚಾಲೆಂಜ್ ಮಾಡಲು ಹೋಗಿ ಸಾಕಷ್ಟು ಅನಾಹುತಗಳು ಸಂಭವಿಸಿದೆ. ಇದೇ ಕಾರಣಕ್ಕೆ ಕಿಕಿ ಚಾಲೆಂಜ್ ಅನ್ನು ಹಲವಾರು ಕಡೆಗಳಲ್ಲಿ ಬ್ಯಾನ್ ಮಾಡಲಾಗಿದೆ.
ಇತ್ತೀಚಿಗಷ್ಟೆ ನಟಿ ಅದಾ ಶರ್ಮಾ ಹಾಗೂ ನೋರಾ ಫತೇಹಿ ಅದೇ ಚಾಲೆಂಜ್ ನ ಸ್ವೀಕರಿಸಿ ವಿಡಿಯೋ ಶೇರ್ ಮಾಡಿದ್ದರು. ಈಗ ಬಿಗ್ ಬೆಡಗಿ ನಿವೇದಿತಾ ಗೌಡ ಕಿಕಿ ಚಾಲೆಂಜ್ ಸ್ವೀಕರಿಸಿದ್ದಾರೆ. ಅಪಾಯಕಾರಿ ಕಿಕಿ ಚಾಲೆಂಜ್ ಸ್ವೀಕರಿಸಿ ಓಡುವ ಕಾರಿನಿಂದ ಇಳಿದ ಹೆಜ್ಜೆ ಹಾಕಿದ್ದಾರೆ ನಿವೇದಿತಾ ಗೌಡ.
ಕಿಕಿ ಚಾಲೆಂಜ್ ಗಾಗಿ ಇಂಗ್ಲಿಷ್ ಹಾಡಿಗೆ ಹೆಜ್ಜೆ ಹಾಕಿರುವ ಬೇಬಿ ಡಾಲ್ ನಿವೇದಿತಾ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆ ವ್ಯಕ್ತವಾಗಿದೆ. ಇದು ಅಪಾಯಕಾರಿ ಎಂದು ಗೊತ್ತಿದ್ದರೂ ಚಾಲೆಂಜ್ ಸ್ವೀಕರಿಸಿದ್ದಕ್ಕೆ ಅಭಿಮಾನಿಗಳು ವಿರೋಧ ವ್ಯಕ್ತ ಪಡಿಸಿದ್ದಾರೆ.

ನಿವೇದಿತಾ ಗೌಡ ಅಪ್ಲೋಡ್ ಮಾಡಿರುವ ವಿಡಿಯೋಗೆ ಸಾಕಷ್ಟು ಕಮೆಂಟ್ ಗಳು ಬಂದಿವೆ. ಚಲಿಸುವ ಕಾರಿನಿಂದ ಇಳಿದು, ಅದರ ವೇಗಕ್ಕೆ ತಕ್ಕಂತೆ ಇಂಗ್ಲಿಷ್ ಹಾಡಿಗೆ ಡಾನ್ಸ್ ಮಾಡಿ, ಮತ್ತೆ ಕಾರಿನಲ್ಲಿ ಕುಳಿತುಕೊಳ್ಳುವುದೇ ಕಿಕಿ ಚಾಲೆಂಜ್


Click it and Unblock the Notifications











