ಫಾರಿನ್ ಯುವಕನ ಜೊತೆ ಕ್ರಿಸ್ಮಸ್ ಹಬ್ಬವನ್ನಾಚರಿಸಿದ ನಿವೇದಿತಾ ಗೌಡ, ವಿಡಿಯೋ ವೈರಲ್ ..!

ಚಿತ್ರರಂಗದಲ್ಲಿರುವ ಅನೇಕರು ಏನೇ ಮಾಡಿದರು ನೋಡುಗರಿಗದು ಎಲೆ ಅಡಿಕೆಯೇ. ಕೆಮ್ಮಿದರೂ ಸುದ್ದಿ, ಪಾರ್ಟಿ ಮಾಡಿದರೂ ಸುದ್ದಿ, ಬಿಕಿನಿ ಹಾಕಿಕೊಂಡರು ಸುದ್ದಿ, ಅಷ್ಟರ ಮಟ್ಟಿಗೆ ಸೆಲೆಬ್ರೆಟಿಗಳ ವ್ಯೆಯಕ್ತಿಕ ಬದುಕು ಮೂರಾ ಬಟ್ಟೆಯಾಗಿರುತ್ತೆ. ಇನ್ನು ಮದುವೆ ಆಗಿ ಆ ನಂತರ ವಿಚ್ಛೇದನವಾಗಿದ್ದರಂತೂ ಮುಗೀತು. ಕಾಲೆಳೆಯಲು ಅಂತಾನೇ ಇರುವ ಒಂದು ಗುಂಪು ಇವರ ಮೇಲೆ ನಿಗಾ ವಹಿಸಿರುತ್ತೆ. ಚೂರು ಎಲ್ಲಾದರೂ ಎಡವಿದರೂ ಸಾಕು ಟ್ರೋಲ್ ಮಾಡುತ್ತೆ. ಹೀಗೆ ಟ್ರೋಲ್ ಆದಾಗೆಲ್ಲ ಕೆಲವರು ತಲೆ ಕೆಡಿಸಿಕೊಳ್ಳುತ್ತಾರೆ. ಇನ್ನು ಹಲವರು ಚಲ್ತಾ ಹೈ ಎಂದು ಮುನ್ನಡೆಯುತ್ತಾರೆ. ಉದಾಹರಣೆಗೆ ನಿವೇದಿತಾ ಗೌಡ.

ಹೌದು. ಹೌದು, ಇಲ್ಲಿಯವರೆಗೆ ನಿವೇದಿತಾ ಗೌಡ ಅವರ ಮೇಲೆ ಅನೇಕರು ಕೆಂಡ ಕಾರಿದ್ದಾರೆ. ಚಂದನ್ ಶೆಟ್ಟಿ ಜೊತೆ ಇದ್ದಾಗಲೂ ಇವರನ್ನು ಬ್ಯೆಯುತ್ತಿದ್ದ ಅನೇಕರು, ಈಗ ಚಂದನ್ ಶೆಟ್ಟಿ ಅವರಿಂದ ನಿವೇದಿತಾ ದೂರವಾದ ನಂತರವೂ ಕೂಡ ತೆಗಳುವ ಕಾರ್ಯಕ್ರಮವನ್ನು ಮುಂದುವರೆಸಿದ್ದಾರೆ. ಇದಕ್ಕೆ ನಿವೇದಿತಾ ಗೌಡ ಅವರ ರೀಲ್ಸ್ ಹವ್ಯಾಸ ಪ್ರಮುಖ ಕಾರಣ ಅನ್ನುವುದು ಮತ್ತೆ ಪ್ರತೈಕವಾಗಿ ಹೇಳಬೇಕಿಲ್ಲ. ಆದರೂ ನಿವೇದಿತಾ ಗೌಡ ತಲೆ ಕೆಡಿಸಿಕೊಂಡಿಲ್ಲ. ರೀಲ್ಸ್ ಮಾಡುವುದನ್ನು ಕಡಿಮೆ ಮಾಡಿಲ್ಲ. ಬದಲಿಗೆ ಇನ್ನೂ ಹೆಚ್ಚೆಚ್ಚು ರೀಲ್ಸ್ ಮಾಡುತ್ತಿದ್ದಾರೆ. ರೀಲ್ಸ್ ಮಾಡಲೆಂದೇ ತಮ್ಮ ಮನೆಯ ಬಾತ್‌ರೂಮ್‌ದಿಂದ ಹೊರ ಬಂದು ಸಪ್ತಸಾಗರದಾಚೆ ಪ್ರವಾಸವನ್ನು ಕೈಗೊಂಡಿದ್ದಾರೆ. ಜಾಲಿ ಮಾಡುತ್ತಿದ್ದಾರೆ.

Nivedita Gowda celebrates Christmas in New York with a new companion fans ask Who is he

ಇಂಥಾ ನಿವೇದಿತಾ ಗೌಡ ಹುಡುಗನೊಬ್ಬನ ಜೊತೆ ಇರುವ ವಿಡಿಯೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಅನೇಕರ ಹುಬ್ಬೇರಿಸಿದ್ದಾರೆ. ಟ್ರೋಲಿಗರಿಗೆ ಆಹಾರವೂ ಆಗಿದ್ದಾರೆ. ಕಟ್ಟು ಮಸ್ತಾದ ಯುವಕನೊಬ್ಬನ ಜೊತೆ ಬಾನಂಗಳದಲ್ಲಿ ಆಕಾಶಬುಟ್ಟಿಯ ಉಡಾವಣೆಯನ್ನು ಮಾಡಿರುವ ನಿವೇದಿತಾ ಗೌಡ ಮನದ ಆಸೆ-ಆಕಾಂಕ್ಷೆಗಳೆಲ್ಲ ಈಡೇರಲಿ ಎಂಬ ಪ್ರಾರ್ಥನೆಯನ್ನು ಮಾಡಿದ್ದಾರೆ. ನಿವೇದಿತಾ ಅವರ ಜೊತೆ ಫಾರಿನ್ ಯುವಕ ಕೂಡ ಪ್ರಾರ್ಥನೆಯನ್ನು ಮಾಡಿದ್ದಾರೆ.

ಇನ್ನು ಸಾಮಾನ್ಯವಾಗಿ ಚಿತ್ರರಂಗದ ಚೆಲುವೆಯರು ಯಾರೇ ಹುಡುಗರ ಜೊತೆ ಕಾಣಿಸಿಕೊಂಡರು ಅಭಿಮಾನಿಗಳು ತಲೆ ಕೆದರಿಕೊಂಡು ಆ ಹುಡುಗನ ಕುಲ, ಗೋತ್ರ, ಜನ್ಮ ಜಾಲಾಡುತ್ತಾರೆ. ಅಂಥಾದ್ದರಲ್ಲಿ ಚಂದನ್ ಶೆಟ್ಟಿ ಅವರಿಂದ ದೂರವಾದ ನಿವೇದಿತಾ ಗೌಡ ಫಾರಿನ್ ಹುಡುಗನ ಜೊತೆ ಹೀಗೆ ಕಾಣಿಸಿಕೊಂಡರೆ ಗಂಡು ಅಭಿಮಾನಿಗಳ ಎದೆಯೊಡೆಯದಿರುತ್ತಾ ? ಹೀಗಾಗಿಯೇ ನಿವೇದಿತಾ ಗೌಡ ಅವರಲ್ಲಿ ಯಾರು ಈ ಹುಡುಗ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಬಹುಶಃ ನಿವೇದಿತಾ ಗೌಡ ಈ ಪ್ರಶ್ನೆಯನ್ನು ಮೊದಲೇ ನಿರೀಕ್ಷಿಸಿದ್ದರೇನೋ. ಹೀಗಾಗಿಯೇ ವಿಡಿಯೋವನ್ನು ಆ ಯುವಕನ ಪ್ರೊಫೈಲ್‌ಗೆ ನಿವೇದಿತಾ ಗೌಡ ಟ್ಯಾಗ್ ಮಾಡಿದ್ದಾರೆ.

ಆ ಪ್ರಕಾರ ನೋಡುವುದಾದರೆ ಈ ಯುವಕನ ಹೆಸರು ಜೈ ಮದ್ದಳೆ. ವೃತ್ತಿಯಲ್ಲಿ ಫೋಟೊಗ್ರಾಫರ್ ಆಗಿರುವ ಇವರು ಲಂಡನ್‌ನಲ್ಲಿ ವಾಸವಾಗಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಟ್ವಿಕಾಂಡೋ ಸ್ಫರ್ಧೆಯಲ್ಲಿ ಕೂಡ ಭಾಗಿಯಾದ ಈ ಜೈ ಮದ್ದಳೆ ಫಿಟ್ನೆಸ್ ಫ್ರೀಕ್ ವ್ಯಕ್ತಿ ಕೂಡ ಹೌದು. ಇನ್ನುಳಿದಂತೆ ನಿವೇದಿತಾ ಗೌಡ ಅವರ ಈ ವಿಡಿಯೋಗೆ ಕೂಡ ಅನೇಕರು ಕಾಮೆಂಟ್ ಮಾಡಿದ್ದಾರೆ. ಎಂದಿನಂತೆ ನಿವೇದಿತಾ ಗೌಡ ಅವರನ್ನು ನಿಂದಿಸಿದ್ದಾರೆ. ಇನ್ನು ಕೆಲವರು ಯಾರು ಈ ಸಿಕ್ಸ್ ಪ್ಯಾಕ್ ಸುಂದರ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಫಾರಿನ್ ಹೋದಾಗ ಅಪರಿಚಿತರ ಜೊತೆ ಗೆಳೆತನವಾಗುವುದು ಸಹಜ ನಿವೇದಿತಾ ಕೂಡ ಹಾಗೇ ಫ್ರೆಂಡ್‌ಶಿಪ್ ಮಾಡಿಕೊಂಡಿದ್ದಾರೆ ಸುಮ್ ಸುಮ್ನೆ ಕಾಮೆಂಟ್ ಮಾಡಬೇಡಿ ಎಂದು ಕೂಡ ಕೆಲವರು ಮನವಿಯನ್ನು ಮಾಡಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X