"ಏನ್ ಮಾಡ್ಬೇಕು ಅಂತ ಗೊತ್ತಿದೆ" :‌ ಶ್ರುತಿಗೆ ಸರ್ಜಾ ಪತ್ನಿ ಎಚ್ಚರಿಕೆ

Recommended Video

ಅರ್ಜುನ್ ಸರ್ಜಾ ಮೇಲೆ ಆರೋಪ ಮಾಡಿರುವ ಶ್ರುತಿ ಹರಿಹರನ್ ಗೆ ಎಚ್ಚರಿಕೆ ಕೊಟ್ಟ ಪತ್ನಿ ನಿವೇದಿತಾ ಅರ್ಜುನ್

ಶೃತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಅವರ ಮೀ ಟೂ ವಿವಾದ ದೊಡ್ಡ ಸುದ್ದಿಯಾಗಿದೆ. ಈಗಾಗಲೇ ಈ ಘಟನೆ ಬಗ್ಗೆ ಅನೇಕರು ಮಾತನಾಡಿದ್ದಾರೆ. ಇದೀಗ ಈ ವಿಚಾರವಾಗಿ ಸ್ವತಃ ಅರ್ಜುನ್ ಸರ್ಜಾ ಅವರ ಪತ್ನಿ ನಿವೇದಿತಾ ಹೇಳಿಕೆ ನೀಡಿದ್ದಾರೆ.

''ನಲವತ್ತು, ಐವತ್ತು ವರ್ಷದಿಂದ ಅವರು ಚಿತ್ರರಂಗದಲ್ಲಿ ಇದ್ದಾರೆ. ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅದಕ್ಕೆ ಎಲ್ಲರೂ ಅವರಿಗೆ ಸಪೋರ್ಟ್ ಮಾಡುತ್ತಿದ್ದಾರೆ.'' ಎಂದು ತಮ್ಮ ಪತಿಯ ಬಗ್ಗೆ ಬಂದಿರುವ ಆರೋಪದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಈ ಘಟನೆ ಸರ್ಜಾ ಕುಟುಂಬಕ್ಕೆ ತಲೆ ನೋವು ತಂದಿದೆ. ಈ ಬಗ್ಗೆ ಅರ್ಜುನ್ ಸರ್ಜಾ ತಾಯಿ ಲಕ್ಷ್ಮಿ ದೇವಮ್ಮ, ಮಾವ ರಾಜೇಶ್, ಅತ್ತೆ, ಮಗಳು ಐಶ್ವರ್ಯ, ನಟ ಧ್ರುವ ಸರ್ಜಾ ಮಾತನಾಡಿದ್ದು, ಈಗ ಪತ್ನಿ ನಿವೇದಿತಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಅವತ್ತೇ ಹೇಳಬೇಕಿತ್ತು

ಅವತ್ತೇ ಹೇಳಬೇಕಿತ್ತು

''ಆಕೆ ಏನನ್ನು ಸಾಬೀತು ಮಾಡಲು ಹೊರಟಿದ್ದಾರೆ. ಏನಾದರೂ ಇದ್ದರೇ ಅವತ್ತೇ ಹೇಳಬೇಕಿತ್ತು, ಚೆಂಬರ್ ಗೆ ದೂರು ನೀಡಬೇಕಿತ್ತು. ಎರಡು ವರ್ಷದ ನಂತರ ಈಗ ಈ ಅಭಿಯಾನ ಬಂತು ಎಂದು ಹೇಳಿದರೆ, ಯಾರಿಗೆ ಇದನ್ನು ನಂಬುವುದಕ್ಕೆ ಆಗುತ್ತದೆ.'' - ನಿವೇದಿತಾ ಅರ್ಜುನ್, ಅರ್ಜುನ್ ಸರ್ಜಾ ಪತ್ನಿ.

ಸಾಕ್ಷಿ ಇದ್ದರೆ ತೋರಿಸಲಿ

ಸಾಕ್ಷಿ ಇದ್ದರೆ ತೋರಿಸಲಿ

''ಈ ಅಭಿಯಾನವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಬೇಕು. ಈ ರೀತಿ ಮಾಡಬಾರದು. ಅಲ್ಲಿಗೆ ಕರೆದರು, ಇಲ್ಲಿಗೆ ಕರೆದರು ಎಂದು ಹೇಳುತ್ತಿದ್ದಾರೆ. ಇದಕ್ಕೆ ಯಾವುದೇ ಸಾಕ್ಷಿ ಇಲ್ಲ. ಅವರ ಬಳಿ ಸಾಕ್ಷಿ ಇದ್ದರೆ ತೋರಿಸಲಿ. ನಮ್ಮ ಬಳಿಯೂ ಪ್ರೂಫ್ ಇದೆ.'' - ನಿವೇದಿತಾ ಅರ್ಜುನ್, ಅರ್ಜುನ್ ಸರ್ಜಾ ಪತ್ನಿ.

ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ

ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ

''ಆ ಮಟ್ಟಕ್ಕೆ ಇಳಿದು ಮಾತನಾಡುವ ಸಂಸ್ಕಾರ ನಮ್ಮದಲ್ಲ. ನನಗೆ ಈ ಬಗ್ಗೆ ಮಾತನಾಡಲು ಸಹ ಇಷ್ಟ ಇಲ್ಲ. ನಲವತ್ತು ಐವತ್ತು ವರ್ಷದಿಂದ ಅವರು ಚಿತ್ರರಂಗದಲ್ಲಿ ಇದ್ದಾರೆ. ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅದಕ್ಕೆ ಜನರೂ ಕೂಡ ಸಪೋರ್ಟ್ ಮಾಡುತ್ತಿದ್ದಾರೆ.'' - - ನಿವೇದಿತಾ ಅರ್ಜುನ್, ಅರ್ಜುನ್ ಸರ್ಜಾ ಪತ್ನಿ.

ಅರ್ಜುನ್ ಗೆ ಕುಟುಂಬದ ಬೆಂಬಲ

ಅರ್ಜುನ್ ಗೆ ಕುಟುಂಬದ ಬೆಂಬಲ

ನಟ ಅರ್ಜುನ್ ಸರ್ಜಾ ಅವರ ಇಡೀ ಕುಟುಂಬ ಅವರ ಪರ ನಿಂತಿದೆ. ಪತ್ನಿ ನಿವೇದಿತಾ ಅರ್ಜುನ್, ಮಗಳು ಐಶ್ವರ್ಯ, ತಾಯಿ ಲಕ್ಷ್ಮಿ ದೇವಮ್ಮ, ಅಳಿಯ ಧ್ರುವ ಸರ್ಜಾ, ಮಾವ ರಾಜೇಶ್, ಅತ್ತೆ ಹೀಗೆ ಅವರ ಫ್ಯಾಮಿಲಿ ಈ ವಿಚಾರದಲ್ಲಿ ಅವರ ಜೊತೆಗೆ ಇದೆ.

ವಾಣಿಜ್ಯ ಮಂಡಳಿಗೆ ದೂರು

ವಾಣಿಜ್ಯ ಮಂಡಳಿಗೆ ದೂರು

ಅರ್ಜುನ್ ಸರ್ಜಾ ಬಗ್ಗೆ ಆರೋಪಿಸಿರುವ ಶ್ರುತಿ ಹರಿಹರನ್ ವಿರುದ್ಧ ಹಿರಿಯ ನಟ, ಅರ್ಜುನ್ ಸರ್ಜಾ ಮಾವ ರಾಜೇಶ್ ಸಿಡಿದೆದ್ದಿದ್ದಾರೆ. ಸುಳ್ಳು ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜೇಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಟ್ಟಿದ್ದಾರೆ.

More from Filmibeat

English summary
Niveditha Arjun reaction about Sruthi Hariharan's allegation. Kannada actress Sruthi Hariharan has accused actor Arjun Sarja.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X