For Quick Alerts
  ALLOW NOTIFICATIONS  
  For Daily Alerts

  ಧನಂಜಯ್ 'ಪಾಪ್ ಕಾರ್ನ್' ಚಿತ್ರಕ್ಕೆ ಹೀರೋಯಿನ್ ಇವರೇ.!

  By Bharath Kumar
  |
  ಡಾಲಿಗೆ ಹೆರೋಯಿನ್ ಸಿಕ್ಕಾಯ್ತು | Filmibeat Kannada

  ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾದ ಸೂಪರ್ ಯಶಸ್ಸಿನ ನಂತರ 'ಡಾಲಿ' ಧನಂಜಯ್ ಜೊತೆಯಲ್ಲಿ ನಿರ್ದೇಶಕ ಸೂರಿ ಸಿನಿಮಾ ಮಾಡ್ತಿದ್ದಾರೆ ಎಂಬುದು ಗೊತ್ತಿರುವ ವಿಚಾರ.

  ಈ ಚಿತ್ರಕ್ಕೆ 'ಪಾಪ್ ಕಾರ್ನ್ ಮಂಕಿ ಟೈಗರ್' ಎಂದು ಹೆಸರಿಟ್ಟಿದ್ದು, ಧನಂಜಯ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಚಿತ್ರದ ಟೈಟಲ್ ತುಂಬಾ ವಿಶೇಷವಾಗಿದ್ದು, ಈ ಶೀರ್ಷಿಕೆ ನೋಡಿ ಸಿನಿ ಪ್ರೇಕ್ಷಕರು ಒಂದು ಕ್ಷಣ ಆಶ್ಚರ್ಯವಾಗಿರುವುದಂತೂ ಸುಳ್ಳಲ್ಲ.

  ರಿವಿಲ್ ಆಯ್ತು ದುನಿಯಾ ಸೂರಿ-ಡಾಲಿ ಸಿನಿಮಾ ಟೈಟಲ್ರಿವಿಲ್ ಆಯ್ತು ದುನಿಯಾ ಸೂರಿ-ಡಾಲಿ ಸಿನಿಮಾ ಟೈಟಲ್

  ಯಾವ ರೀತಿ ಸಿನಿಮಾ ಇದು, ಈ ಟೈಟಲ್ ಯಾಕೆ ಇಟ್ಟಿದ್ರು.? ಧನಂಜಯ್ ಜೊತೆಯಲ್ಲಿ ನಟಿಸುವ ಹೀರೋಯಿನ್ ಯಾರು ಎಂದೆಲ್ಲ ಕುತೂಹಲ ಹುಟ್ಟಿಕೊಂಡಿವೆ. ಇದೀಗ, ಧನಂಜಯ್ ಗೆ ನಾಯಕಿ ಯಾರು ಎಂಬುದು ರಿವಿಲ್ ಆಗಿದೆ.? ಮುಂದೆ ಓದಿ.....

  ಧನಂಜಯ್ ಗೆ ಜೋಡಿ ಇವರೇ

  ಧನಂಜಯ್ ಗೆ ಜೋಡಿ ಇವರೇ

  'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರದಲ್ಲಿ ಧನಂಜಯ್ ಗೆ ನಾಯಕಿಯಾಗಿ ಶುದ್ಧಿ ಖ್ಯಾತಿಯ ನಿವೇದಿತಾ ಅಭಿನಯಿಸುತ್ತಿದ್ದಾರೆ. ದೇವಿಕಾ ಎಂದು ಪಾತ್ರವದಲ್ಲಿ ನಿವೇದಿತಾ ಕಾಣಿಸಿಕೊಳ್ಳಲಿದ್ದು, ಅದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

  ನಿವೇದಿತಾ ಬಗ್ಗೆ....

  ನಿವೇದಿತಾ ಬಗ್ಗೆ....

  ನಿವೇದಿತಾ ಕನ್ನಡದಲ್ಲಿ ಹಲವು ಸಿನಿಮಾಗಳನ್ನ ಮಾಡಿದ್ದಾರೆ. ಇದಕ್ಕೂ ಮುಂಚೆ ಇವರು ಹೆಸರು ಸ್ಮಿತಾ ಎಂದು ಪರಿಚಿತರು. 'ಅವ್ವ' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿ ಸಿಕ್ಕಿದೆ. 'ಡಿಸೆಂಬರ್ 1' ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಲಭಿಸಿದೆ. ಉಳಿದಂತೆ 'ಕಲ್ಲರಳಿ ಹೂವಾಗಿ', 'ಸಿಕ್ಸರ್', 'ಯಾರೇ ಕೂಗಾಡಲಿ', 'ಶುದ್ಧಿ' ಅಂತಹ ಚಿತ್ರಗಳಲ್ಲಿ ನಟಿಸಿದ್ದಾರೆ.

  ಕಲಾವಿದರಿಗಾಗಿ ಹುಡುಕಾಟ

  ಕಲಾವಿದರಿಗಾಗಿ ಹುಡುಕಾಟ

  ಅಂದ್ಹಾಗೆ, 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ. ತಾರಬಳಗದಲ್ಲಿ ಖ್ಯಾತ ಕಲಾವಿದರನ್ನೇ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆಯಂತೆ. ವಿಶೇಷ ಅಂದ್ರೆ, ಇನ್ನೂ ಇಬ್ಬರು ನಟಿಯರು ಈ ಚಿತ್ರಕ್ಕಾಗಿ ಬೇಕಾಗಿದ್ದಾರಂತೆ. ಅವರನ್ನ ಸೂರಿ ಹುಡುಕುತ್ತಿದ್ದಾರಂತೆ.

  ಕೆಪಿ ಶ್ರೀಕಾಂತ್ ನಿರ್ಮಾಣ

  ಕೆಪಿ ಶ್ರೀಕಾಂತ್ ನಿರ್ಮಾಣ

  'ಟಗರು' ಚಿತ್ರದಲ್ಲಿ ಕೆಲಸ ಮಾಡಿದ ಬಹುತೇಕ ಅದೇ ತಂತ್ರಜ್ಞರು ಈ ಚಿತ್ರದಲ್ಲೂ ಮುಂದುವರೆಯಲಿದ್ದಾರಂತೆ. ಕೆಪಿ ಶ್ರೀಕಾಂತ್ ನಿರ್ಮಾಣ ಮಾಡಲಿದ್ದು, ಟಗರು ಚಿತ್ರ ಖ್ಯಾತಿಯ ಮಾಸ್ತಿ ಸಂಭಾಷಣೆಯ ಜವಾಬ್ದಾರಿ ಹೊತ್ತುಕೊಳ್ಳಲಿದ್ದಾರೆ. ಈ ಚಿತ್ರದ ಮೂಲಕ ಶೇಖರ್ ಎಸ್ ಕ್ಯಾಮೆರಾ ಮ್ಯಾನ್ ಆಗಿ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ.

  English summary
  Director Suri’s upcoming film takes a title suggested by his six-year-old son, Prithvi; the film starring Dhananjay will feature Niveditha in the female lead.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X