ಉಗುರಿನಲ್ಲೇ ಮುದ್ದೆ ಮುರಿಯುವ ನಿವೇದಿತಾ ಗೌಡಗೆ ನೆನಪಾದಳು ಸ್ನೇಹಿತೆ, ವಾಣಿ ಜೊತೆ ಮಾದಕ ಡ್ಯಾನ್ಸ್..!

By ಫಿಲ್ಮಿಬೀಟ್ ಡೆಸ್ಕ್

ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಆಗಲು ಏನೆಲ್ಲ ಮಾಡಬಾರದೋ ಅದೆಲ್ಲವನ್ನು ಚಾಚು ತಪ್ಪದೇ ಪಾಲಿಸಿಕೊಂಡು ಬರುತ್ತಿರುವವರು ನಿವೇದಿತಾ ಗೌಡ. ಕಳೆದ ವರ್ಷದ ಅಂತ್ಯದಂದು ವಿದೇಶಕ್ಕೆ ತೆರಳಿ ಅಲ್ಲಿ ಮೋಜು ಮಸ್ತಿ ಮಾಡಿ ಟ್ರೋಲಿಗರ ಪಾಲಿಗೆ ಆಹಾರವಾಗಿದ್ದ ನಿವೇದಿತಾ ಗೌಡ ಕಳೆದ ವಾರ
ತಮ್ಮ ಉಗುರಿನ ಮೂಲಕ ಚರ್ಚೆಗೀಡಾಗಿದ್ದರು. ಉಗುರಿನ ಪ್ರಯೋಜನಗಳನ್ನು ಹೇಳಿ ಎಲ್ಲರನ್ನು ಬೆಚ್ಚಿ ಬೀಳಿಸಿದ್ದರು.

ಇಂಥಾ ನಿವೇದಿತಾ ಗೌಡ ಈಗ ತಮ್ಮ ಸ್ನೇಹಿತೆಯ ಜೊತೆ ಮತ್ತೆ ಹಾಜರಾಗಿದ್ದಾರೆ. ಹೌದು, ಫಾರಿನ್ ಪ್ರವಾಸದಿಂದ ಮರಳಿದ ನಿವೇದಿತಾ ಗೌಡ ಅವರಿಗೆ ಈಗ ತಮ್ಮ ಸ್ನೇಹಿತೆ ವಾಣಿ ನೆನಪಾಗಿದೆ. ಹೀಗಾಗಿಯೇ ಅವರನ್ನು ಭೇಟಿ ಮಾಡಿರುವ ನಿವೇದಿತಾ ಗೌಡ ಗಜನಿ ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಮಾದಕವಾಗಿ ಸೊಂಟ ಬಳುಕಿಸಿದ್ದಾರೆ.

Niveditha Gowda a former Bigg Boss contestant posted a reel with her best friend Vaani

ಎಂದಿನಂತೆ ನಿವೇದಿತಾ ಗೌಡ ಅವರ ಈ ವಿಡಿಯೋ ಕೂಡ ಕೆಲವೇ ಗಂಟೆಯಲ್ಲಿ ವೈರಲ್ ಆಗಿದೆ. ಕೇವಲ ಒಂದು ಗಂಟೆಯಲ್ಲಿ ಹನ್ನೊಂದು ಸಾವಿರಕ್ಕೂ ಅಧಿಕ ಲೈಕ್‌ಗಳನ್ನು ಪಡೆದಿರುವ ಈ ವಿಡಿಯೋಗೆ ತರಹೇವಾರಿ ಅಭಿಪ್ರಾಯಗಳು ಕೂಡ ವ್ಯಕ್ತವಾಗುತ್ತಿವೆ. ಕೆಲವರು ಇಲ್ಲೇನೋ ಸಮಸ್ಯೆ ಇದೆ ಅಂದರೆ, ಇನ್ನು ಕೆಲವರು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದೂರವಾಗಲು ಇವರೇ ಕಾರಣ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಲ್ಲಿಯವರೆಗೆ ಕೇವಲ ನಿವೇದಿತಾ ಗೌಡ ಅವರನ್ನು ನಿಂದಿಸುತ್ತಿದ್ದ ಅನೇಕರು ಈಗ ಅವರ ಸ್ನೇಹಿತೆಯನ್ನು ನಿಂದಿಸುತ್ತಿದ್ದಾರೆ.

ಅಂದ್ಹಾಗೇ ಕಳೆದ ವರ್ಷ ನಿವೇದಿತಾ ಗೌಡ ತಮ್ಮ ತಮ್ಮ ಆಪ್ತ ಸ್ನೇಹಿತೆ ವಾಣಿ ಜೊತೆ ತಮ್ಮ ಬೆಡ್‌ ರೂಮ್‌ನಲ್ಲಿ ಕಳೆದ ಕೆಲ ಸುಂದರ ಕ್ಷಣಗಳನ್ನೂ ಹಂಚಿಕೊಂಡಿದ್ದರು. ಸ್ನೇಹಿತೆಯನ್ನು ಅಪ್ಪಿಕೊಂಡಿದ್ದರು. ಬಿದ್ದು ಬಿದ್ದು ನಕ್ಕಿದ್ದರು. ಆದರೆ ಇದಕ್ಕೂ ಹಲವಾರು ತಗಾದೆ ತೆಗೆದಿದ್ದರು. ನಿವೇದಿತಾ ಗೌಡ ಅವರ ಕಾಮೆಂಟ್ ಸೆಕ್ಷನ್‌ಗೆ ಬಂದು ಕೆಟ್ಟಾ ಕೊಳಕು ಮಾತುಗಳನ್ನಾಡುತ್ತಿದ್ದರು. ಚಂದನ್ ಶೆಟ್ಟಿ ಅವರಿಗೆ ಡಿವೋರ್ಸ್ ನೀಡಿದ್ದು ಇದೇ ಕಾರಣಕ್ಕಾ ಎಂದು ಪ್ರಶ್ನೆಯನ್ನು ಮಾಡಿದ್ದರು. ನಮಗ್ಯಾಕೋ ಅನುಮಾನ ಶುರುವಾಗುತ್ತಿದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಇನ್ನು ಇದಾದ ಕೆಲ ದಿನಗಳ ನಂತರ ಸೀದಾ ಬಾತ್‌ ರೂಮ್‌ನಿಂದ ನಿವೇದಿತಾ ಗೌಡ ವಿಡಿಯೋ ಹಂಚಿಕೊಂಡಿದ್ದರು. ಸ್ನೇಹಿತೆಯ ಜೊತೆ ಮೈಚಳಿ ಬಿಟ್ಟು ಡಾನ್ಸ್‌ ಮಾಡಿದ್ದರು. ಆಗಲೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯ ವಸ್ತುವಾಗಿದ್ದರು ನಿವೇದಿತಾ ಗೌಡ.

ಇನ್ನುಳಿದಂತೆ 'ವಾಲು ಕಳ್ಳತಾ' ಹಾಡಿನ ಮೂಲಕ ತೆಲುಗು ಚಿತ್ರರಂಗವನ್ನು ಪ್ರವೇಶಿಸಿರುವ ನಿವೇದಿತಾ ಗೌಡ ಸದ್ಯ ಕನ್ನಡ ಮತ್ತು ತೆಲುಗಿನಲ್ಲಿ ಒಳ್ಳೆಯ ಅವಕಾಶಗಳನ್ನು ಎದುರು ನೋಡುತ್ತಿದ್ದಾರೆ. ಇನ್ನು ಮಾಜಿ ಪತಿ ಚಂದನ್ ಶೆಟ್ಟಿ ಜೊತೆ ನಿವೇದಿತಾ ಗೌಡ 'ಮುದ್ದು ರಾಕ್ಷಸಿ' ಎಂಬ ಚಿತ್ರದಲ್ಲಿ ಕೂಡ ಆಕ್ಟ್ ಮಾಡಿದ್ದಾರೆ. ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಪುನೀತ್ ಶ್ರೀನಿವಾಸ್ ಈ ಚಿತ್ರದ ಕಥೆ ಚಿತ್ರಕಥೆಯನ್ನು ಬರೆದು ನಿರ್ದೇಶಿಸಿದ್ದಾರೆ. ಮೋಹನ್ ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇನ್ನೂ ಸೈಕೋ ಥ್ರಿಲ್ಲರ್ ಕಥಾಹಂದರ ಈ ಚಿತ್ರದ ಚಿತ್ರೀಕರಣ ಬಹುತೇಕ ಬೆಂಗಳೂರಿನಲ್ಲಿಯೇ ನಡೆದಿದೆ. ಎಂ ಎಸ್ ತ್ಯಾಗರಾಜ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಎ ಕರುಣಾಕರ್ ಚಿತ್ರದ ಛಾಯಾಗ್ರಹಣ ಮಾಡಿದ್ದಾರೆ. ಈ ಚಿತ್ರ ಈ ವರ್ಷ ತೆರೆಗೆ ಬರುವ ಸಾಧ್ಯತೆ ಇದೆ. ಇದನ್ನು ಹೊರತು ಪಡಿಸಿದರೆ ನಿವೇದಿತಾ ಗೌಡ ಸದ್ಯ 'ಬಾಯ್ಸ್ ವರ್ಸಸ್ ಗರ್ಲ್ಸ್' ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X