ಅಡುಗೆ ಡ್ಯೂಟಿ ಚಂದನ್ ಶೆಟ್ಟಿಗೆ: ಅಚ್ಚರಿ ಮೂಡಿಸಿದ ನಿವೇದಿತಾ ಕುಕ್ಕಿಂಗ್ ಸ್ಕಿಲ್ಸ್!
ಸ್ಯಾಂಡಲ್‌ವುಡ್‌ನ ಮುದ್ದಾದ ಜೋಡಿಗಳಲ್ಲಿ, ಚಂದನ್ ಶೆಟ್ಟಿ ಹಾಗೂ ನಿವೇದಿತಾ ಜೋಡಿ ಕೂಡ ಒಂದು. ಈ ಜೋಡಿ ತಮ್ಮದೇ ವಿಭಿನ್ನ ಶೈಲಿಯಲ್ಲಿ ಗಮನ ಸೆಳೆದಿದೆ. ಸಿನಿಮಾ ಅಥವಾ ಕಾರ್ಯಕ್ರಮಗಳಿಗಿಂತಲೂ ಈ ಜೋಡಿಗೆ ಇನ್‌ಸ್ಟಾಗ್ರಾಮ್ ಮತ್ತು ಯುಟ್ಯೂಬ್ ವಿಡಿಯೋಗಳಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ.
ಇವರು ಸಿನಿಮಾ ಮಾಡುವುದು, ಕಾರ್ಯಕ್ರಮ ಮಾಡುವುದೂ ಬೇಡ. ಜಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಕಿದ್ರೆ ಸಾಕು ಅಂತ ಅದೆಷ್ಟೋ ಮಂದಿ ಕಾಯುತ್ತಾ ಇರುತ್ತಾರೆ. ಅದರಲ್ಲೂ ನಿವೇದಿತ ಅವರ ಮುದ್ದು ಮಾತುಗಳನ್ನು ಕೇಳಲು ಸಾಕಷ್ಟು ಜನ ಸದಾ ಕಾತರರಾಗಿರುತ್ತಾರೆ.
ಅದಕ್ಕೆ ತಕ್ಕಂತೆ ಈ ಜೋಡಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿ ಇರುತ್ತದೆ. ಒಂದಲ್ಲಾ ಒಂದು ವಿಭಿನ್ನ ವಿಡಿಯೋ ಮೂಲಕ ಅಭಿಮಾನಿ ಬಳಗಕ್ಕೆ ಸರ್ಪ್ರೈಸ್ ಕೊಡುತ್ತಲೇ ಇರುತ್ತದೆ. ಕೆಲವೊಮ್ಮೆ ಇವರ ಅತಿರೇಕದ ವಿಡಿಯೋಗಳು ಟ್ರೋಲ್ ಆಗುತ್ತಾ ಇರುತ್ತವೆ. ಈಗ ನಿವೇದಿತಾ ಅವರು ತಾವು ಮಾಡುವ ಅಡುಗೆ ಬಗ್ಗೆ ವಿಡಿಯೋ ಮಾಡಿದ್ದಾರೆ.
ಚಂದನ್ ಶೆಟ್ಟಿಗಾಗಿ ಕ್ಯಾರೆಟ್ ಹಲ್ವಾ ಮಾಡಿದ ನಿವೇದಿತಾ ಗೌಡ!
ನಿವೇದಿತಾ ಗೌಡ ಅವರಿಗೆ ಅಡುಗೆ ಮಾಡಲು ಬರುವುದಿಲ್ಲ ಎನ್ನುವುದು ಜಗಜ್ಜಾಹೀರಾಗಿರುವ ವಿಚಾರ. ಇದನ್ನು ಹಲವು ಬಾರಿ ನಿವೇದಿತಾ ಅವರು ಹೇಳಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಅವರು ಒಂದಷ್ಟು ಅಡುಗೆ ಮಾಡುವ ಪ್ರಯೋಗಕ್ಕೆ ಮುಂದಾಗಿದ್ದಾರೆ. ನಿವಿ ಮಾಡುವ ಅಡುಗೆ ಟೇಸ್ಟ್ ಮಾಡುವ ಪಾಪದ ಜೀವ ಅವರ ಪತಿ ಚಂದನ್ ಅವರೇ. ಸದ್ಯ ಚಂದನ್ ಶೆಟ್ಟಿ ಅವರಿಗಾಗಿ ನಿವೇದಿತ ಕ್ಯಾರೆಟ್ ಹಲ್ವಾ ಮಾಡಿದ್ದಾರೆ. ಇದನ್ನು ತಿಂದು ಪತಿ ಎನಂದ್ರು ಅನ್ನೋದನ್ನು ವಿಡಿಯೋ ಮಾಡಿ ಯುಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ.
ಅಬ್ಬಬ್ಬಾ ನಿವೇದಿತ ಮಾಡುವ ಸಲಾಡ್ ನೋಡಿದ್ರಾ?
ಮೊದಲೇ ಹೇಳಿದ ಹಾಗೆ ನಿವೇದಿತಾ ಅವರು ಒಂದಷ್ಟು ಅಡುಗೆ ಪ್ರಯೋಗ ಮಾಡೋಕೆ ಮುಂದಾಗಿದ್ದಾರೆ. ಇತ್ತೀಚೆಗೆ ದೋಸೆ ಮತ್ತು ಸಲಾಡ್ ಮಾಡಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ದೋಸೆ ಓಕೆ, ಆದರೆ ಈ ಸಲಾಡ್ ಯಾಕೆ ಎನ್ನುವ ಪ್ರಶ್ನೆ ವಿಡಿಯೋ ನೋಡಿದ ಮೇಲೆ ಮೂಡುತ್ತೆ. ಇದು ಅತ್ಯಂತ ಸುಲಭವಾದ ಸಲಾಡ್. ಇದಕ್ಕೆ ಬೇಕಿರುವುದು ಈರುಳ್ಳಿ, ಟೊಮ್ಯಾಟೊ, ಮೆಣಸಿನಕಾಯಿ ಮತ್ತು ಉಪ್ಪು. ಕೇವಲ ಈ ನಾಲ್ಕು ಪದಾರ್ಥಗಳು. ಇವುಗಳನ್ನು ಒಟ್ಟಿಗೆ ಹಾಕಿ ಬೆರೆಸಿದರೆ ಅದುವೆ ಸಲಾಡ್. ಇದರೊಂದಿಗೆ ದೋಸೆ ಮಾಡಿ ಸವಿದಿದ್ದಾರೆ ನಿವೇದಿತಾ. ಆದರೆ ಈ ಅಡುಗೆ ಮಾಡುವಾಗ ಏನೆಲ್ಲಾ ಸರ್ಕಸ್ ಮಾಡಿದ್ರು ಅನ್ನೋದು ವಿಡಿಯೋದಲ್ಲಿ ಸೆರೆಯಾಗಿದೆ.
ಅತ್ತೆ, ಮಾವನಿಗೂ ಕಾಟ ಕೊಟ್ಟ ನಿವೇದಿತಾ!
ಸಾಮಾನ್ಯವಾಗಿ ನಟಿ ನಿವೇದಿತಾ ಅವರ ವಿಡಿಯೋಗಳಲ್ಲಿ ಚಂದನ್ ಶೆಟ್ಟಿ ಕಾಣಿಸಿಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ನಿವೇದಿತಾ ಚಂದನ್ ಶೆಟ್ಟಿ ಜೊತೆಗೆ ಚಂದನ್ ತಂದೆ, ತಾಯಿ ಕೂಡ ಕಾಣಿಸಿಕೊಂಡಿದ್ದರು. ಅವರಿಗೂ ನಿವೇದಿತಾ ಒಂದು ಟಾಸ್ಕ್ ಕೊಟ್ಟಿದ್ದರು. ಹಣೆಯ ಮೇಲೆ ಬಿಸ್ಕತ್ತು ಇಟ್ಟಕೊಂಡು ಅದನ್ನು ಕೈಗಳ ಸಹಾಯ ಇಲ್ಲದೆ ತಿನ್ನುವ ಚಾಲೆಂಜ್. ಈ ಚಾಲೆಂಗ್‌ನಲ್ಲಿ ಚಂದನ್ ವಿನ್ ಆಗುತ್ತಾರೆ. ನಿವೇದಿತಾ ಅತ್ತೆ, ಮಾವ ಟ್ರೈ ಮಾಡಿ ಸೋತು ಬಿಡ್ತಾರೆ. ಈ ವಿಡಿಯೋ ಕೂಡ ವೈರಲ್ ಆಗಿತ್ತು.
ನಿವೇದಿತಾ ಟವೆಲ್ ಜಾರಿಸಿಕೊಂಡ ಬಳಿಕ ಹಾಗಲಕಾಯಿ ತಿನಿಸಿದ್ದ ಚಂದನ್!
ಇನ್ನು ಈ ಜೋಡಿಯ ಮತ್ತೊಂದು ವೈರಲ್ ವಿಡಿಯೋ ಅಂದರೆ ಹಾಗಲಕಾಯಿ ತಿನ್ನುವ ಚಾಲೆಂಜ್ ಮಾಡಿದ್ದು. ರಾಕ್, ಪೇಪರ್, ಸಿಸರ್ ಆಟದಲ್ಲಿ ಸೋತು ನಿವೇದಿತ ಹೆಚ್ಚಾಗಿ ಹಾಗಲಕಾಯಿ ತಿಂದಿದ್ದರು. ಅದಕ್ಕೂ ಮುನ್ನ ಚಂದನ್ ಅವರನ್ನು ಪ್ರ್ಯಾಂಕ್ ಮಾಡಲು ಟವೆಲ್ ಜಾರಿಸಿಕೊಂಡು ಟ್ರೋಲ್ ಆಗಿದ್ದರು.


Click it and Unblock the Notifications











