ಚಂದನ್ ಶೆಟ್ಟಿ-ನಿವೇದಿತಾ ಗೌಡ ವಿಚ್ಛೇದನ ಪಡೆಯಲು ಇದೊಂದೇ ಕಾರಣ ಎಂದ ಲಾಯರ್ ಅನಿತಾ!

ಐದು ವರ್ಷದ ಹಿಂದೆ ಮೈಸೂರಿನಲ್ಲಿ ಪ್ರಪೋಸ್ ಮಾಡಿ, ನಿನ್ನೆ ಬೆಂಗಳೂರಿನಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಡಿವೋರ್ಸ್ ಪಡೆದ ನಂತರ ಅನೇಕರಿಗೆ ಅಚ್ಚರಿಯಾಗಿತ್ತು. ಯಾಕೆಂದರೆ ಮೊದಲೆಲ್ಲ ವಿಚ್ಛೇದನ ಪಡೆಯಲು ವರ್ಷಗಳವರೆಗೆ ಕಾಯಬೇಕಿತ್ತು.ಆದರೆ.. ಈ ಮಾಜಿ ಜೋಡಿಯ ವಿಚಾರದಲ್ಲಿ ಮಾತ್ರ ' ಅಲ್ಲೇ ಡ್ರಾ ಅಲ್ಲೇ ಬಹುಮಾನ' ಎಂಬಂತೆ ಒಂದೇ ದಿನದಲ್ಲಿ ವಿಚ್ಛೇದನವೂ ಸಿಕ್ತು. ಈ ಕಾರಣಕ್ಕೆ ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಅನೇಕರಲ್ಲಿತ್ತು. ಈ ಪ್ರಶ್ನೆಗೆ ಚಂದನ್ ಶೆಟ್ಟಿ ಅವರ ಪರ ವಕೀಲೆಯಾದ ಅನಿತಾ ಉತ್ತರವನ್ನ ಕೊಟ್ಟಿದ್ದಾರೆ.

ಹೌದು. ಟಿವಿ9 ಕನ್ನಡ ವಾಹಿನಿ ಜೊತೆ ಮಾತನಾಡಿರುವ ಅನಿತಾ, ಮೊದಲೆಲ್ಲ ಆರು ತಿಂಗ್ಳಾದರೂ ಕಾಯಬೇಕಿತ್ತು. ಆದರೆ ಈಗ ಹಾಗಿಲ್ಲ. ಯಾಕೆಂದರೆ.. ಖುದ್ದು ಸುಪ್ರೀಂ ಕೋರ್ಟ್ ಆದೇಶವನ್ನ ಹಿಂದೆ ಹೊರಡಿಸಿದೆ. ಹೊಂದಾಣಿಕೆ ಇಲ್ಲದೇ ಇದ್ದರೆ, ಆರು ತಿಂಗಳಿನವರೆಗೆ ಕಾಯುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

niveditha-gowda-and-chandan-shetty-decided-to-take-a-divorce-for-this-reason-says-their-lawyer-anita

ಇನ್ನೂ ನ್ಯಾಯಾಲಕ್ಕೆ ಬಂದ ಮರು ಕ್ಷಣವೇ ವಿಚ್ಛೇದನ ಸಿಗಲ್ಲ ಎಂದು ಹೇಳಿರುವ ಅನಿತಾ, ವಿಚ್ಛೇದನಕ್ಕೆ ಮೊದಲು ಮನಸ್ತಾಪ ದೂರ ಮಾಡುವ ಪ್ರಯತ್ನವನ್ನ ಮಾಡಲಾಗುತ್ತೆ ಎಂದಿದ್ದಾರೆ. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ವಿಚಾರದಲ್ಲಿ ಕೂಡ ಇಂತಹ ಸಂಧಾನ ನಡೆದಿದೆ ಎಂದಿದ್ದಾರೆ. ದುರಾದೃಷ್ಟವಶಾತ್ ಸಂಧಾನ ಸಫಲವಾಗಲಿಲ್ಲ ಎಂದಿದ್ದಾರೆ. ಇಷ್ಟೇ ಅಲ್ಲ ಕಳೆದ ಒಂದು ವರ್ಷದಿಂದ ಈ ವಿಚ್ಛೇದನದ ವಿಚಾರದ ಕುರಿತು ಇಬ್ಬರ ಜೊತೆ ಚರ್ಚೆ ನಡೆಯುತ್ತಾನೇ ಇತ್ತು ಎಂದಿದ್ದಾರೆ. ಕನಸೆಂಬ ಕುದುರೆಯನ್ನೇರಿದಾಗ ತ್ಯಾಗ ಮಾಡಬೇಕಾಗುತ್ತೆ ಎಂದಿದ್ದಾರೆ.

ಇನ್ನೂ ನಿಮಗೆ ಗೊತ್ತು. ರೀಲ್ಸ್ ಮಾಡುವುದು ನಿವೇದಿತಾ ಗೌಡ ಅವರ ನೆಚ್ಚಿನ ಹವ್ಯಾಸ. ಆದರೆ ಚಂದನ್ ಶೆಟ್ಟಿ ಇದಕ್ಕೆ ತದ್ವಿರುದ್ದ. ನಿಜಾ.. ನಿವೇದಿತಾ ಅವರ ಜೊತೆ ಚಂದನ್ ಈ ಹಿಂದೆ ರೀಲ್ಸ್ ಮಾಡಿದ್ದಾರೆ. ಕುಣಿದಿದ್ದಾರೆ. ಆದರೆ ಚಂದನ್ ಪಾಲಿಗೆ ಅದು ಕೇವಲ ಊಟಕ್ಕೆ ಉಪ್ಪಿನಕಾಯಿ ಅಷ್ಟೇ ಸೀಮಿತವಾಗಿತ್ತು.

niveditha-gowda-and-chandan-shetty-decided-to-take-a-divorce-for-this-reason-says-their-lawyer-anita

ಅಂದ್ಹಾಗೇ ಚಂದನ್ ಶೆಟ್ಟಿ ಅವರಿಗೆ ಈಗ 34ರ ಹರೆಯ. ನಿವೇದಿತಾ ಗೌಡ ಅವರಿಗೆ ಈಗ 25ರ ಪ್ರಾಯ. ಇಬ್ಬರ ನಡುವೆ ಇರುವ ಈ ವಯಸ್ಸಿನ ಅಂತರ ಕೂಡ ಇವರನ್ನ ದೂರ ಮಾಡಿದೆ. ಯಾಕೆಂದರೆ ಇಬ್ಬರ ಅಭಿರುಚಿ ಬೇರೆ. ಆಲೋಚನೆ ಬೇರೆ. ಆಸಕ್ತಿ ಬೇರೆ. ಈ ಚಿಕ್ಕ.. ಚಿಕ್ಕ.. ವಿಚಾರದಿಂದ ವಿರಸ ಶುರುವಾಗಿದೆಯಷ್ಟೇ ಎಂದಿರುವ ವಕೀಲೆ ಅನಿತಾ ಮಗು ವಿಚಾರದಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಯಾಗಿತ್ತು ಎನ್ನುವುದು ಎಲ್ಲ ಶುದ್ಧ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ಇಬ್ಬರೂ ಮೆಚ್ಯೂರ್ ಆಗಿದ್ದಾರೆ. ಇಬ್ಬರೂ ಬೆಸ್ಟ್ ಹ್ಯೂಮನ್ ಬೀಯಿಂಗ್ಸ್. ಸೆಲೆಬ್ರಿಟಿ ಎಂಬ ಕಾರಣಕ್ಕೆ ಟಾರ್ಗೆಟ್ ಮಾಡೋದು ಸರಿ ಅಲ್ಲ' ಎಂದಿದ್ದಾರೆ ಅನಿತಾ.

ಜೊತೆಯಿರಲು ಚಂದನ್ ಮತ್ತು ನಿವೇದಿತಾ ಈ ಹಿಂದೆ ತುಂಬಾನೇ ಪ್ರಯತ್ನ ಮಾಡಿದ್ದಾರೆ ಎಂದು ಕೂಡ ಹೇಳಿರುವ ಚಂದನ್ ಪರ ವಕೀಲೆಯಾದ ಅನಿತಾ, ವೃತ್ತಿಯ ವಿಚಾರದಲ್ಲಿ ಕೂಡ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ ಎಂದಿದ್ದಾರೆ. ನಿವೇದಿತಾ ನಾಯಕಿಯಾಗುವ ಪ್ರಯತ್ನಕ್ಕೆ ಮುಂದಾಗಿದ್ದಕ್ಕೆ ವಿಚ್ಛೇದನ ಎಂಬ ಸುದ್ದಿ ಕೂಡ ಸುಳ್ಳು ಅಂದಿದ್ದಾರೆ. ಚಂದನ್ ಮತ್ತು ನಿವೇದಿತಾ ಇಬ್ಬರು ಜೊತೆಯಾಗಿಯೇ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ ಹೀಗಿರುವಾಗ ಅಸೂಯೆ.. ಅಭದ್ರತೆಗೆ.. ಜಾಗ ಎಲ್ಲಿರುತ್ತೆ ಎಂಬರ್ಥದಲ್ಲಿ ಪ್ರಶ್ನೆಯನ್ನು ಕೂಡ ಮಾಡಿದ್ದಾರೆ. ಒಬ್ಬರಿಗೊಬ್ಬರು ಸಮಯ ನೀಡಲು ಸಾಕಾಗುತ್ತಿಲ್ಲರಲಿಲ್ಲ ಅಷ್ಟೇ ಎಂದಿದ್ದಾರೆ. ಹೊಂದಾಣಿಕೆಯ ಸಮಸ್ಯೆ ಕಾರಣ ದೂರವಾಗಿದ್ದಾರೆ ಎಂದಿದ್ದಾರೆ ಚಂದನ್ ಮತ್ತು ನಿವೇದಿತಾ ಅವರ ಪರ ವಕೀಲೆಯಾದ ಅನಿತಾ

More from Filmibeat

English summary
The renowned couple from the Kannada film industry, Chandan Shetty and Niveditha Gowda, who gained prominence following their appearance on Bigg Boss Kannada, have decided to divorce for this reason, says their lawyer, Anita.ಬಿಗ್ ಬಾಸ್ ಮೂಲಕ ಕರುನಾಡಿನೆಲ್ಲೆಡೆ ಮನೆ ಮಾತಾದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಪರಸ್ಪರ ಒಪ್ಪಿ ಸೌಹಾರ್ದಯುತವಾಗಿ ದೂರವಾಗಲು ಕಾರಣ ಏನು ಅನ್ನುವುದನ್ನ ಅವರ ಪರ ವಕೀಲೆ ಅನಿತಾ ಅವರು ವಿವರಿಸಿದ್ದಾರೆ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X