ನಿವೇದಿತಾ ಮೂಗು ಹಿಡಿದು ಚಂದನ್ ಶೆಟ್ಟಿ ಮಾಡಿದ್ದೇನು?: ಟ್ರೋಲ್ ಆಯ್ತು ಹೊಸ ವಿಡಿಯೋ!

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿ ಇರುತ್ತಾರೆ. ಕೆಲವೊಂದು ವಿಡಿಯೋಗಳಲ್ಲಿ ಚಂದನ್ ಮತ್ತು ನಿವೇದಿತಾ ಇಬ್ಬರೂ ಕೂಡ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಇನ್ನು ಕೆಲವು ವಿಡಿಯೋಗಳಲ್ಲಿ ಒಬ್ಬರೇ ಇರುತ್ತಾರೆ. ಇವರು ಪೋಸ್ಟ್ ಮಾಡುವ ವಿಡಿಯೋಗಳಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಹಾಗಾಗಿ ಈ ಜೋಡಿ ಮಾಡುವ ಒಂದಕ್ಕಿಂತ, ಒಂದು ವಿಡಿಯೋದಲ್ಲಿ ವಿಭಿನ್ನ ಮತ್ತು ವಿಶೇಷವಾಗಿ ಇರುತ್ತಾರೆ.

ಇವರು ಹಂಚಿಕೊಂಡಿರುವ ಹೊಸ ವಿಡಿಯೋ ಸಾಕಷ್ಟು ಗಮನ ಸೆಳೆದಿದೆ. ಚಂದನ್ ಶೆಟ್ಟಿ ಹೇಳಿ, ಕೇಳಿ ಸಂಗೀತ ನಿರ್ದೇಶಕ. ಹಾಗಾಗಿ ಸಿನಿಮಾ ಈ ಬಾರಿ ಅವರು ನಿವೇದಿತಾ ಅವರ ಜೊತೆಗೆ ಸೇರಿ ಮ್ಯೂಸಿಕ್ ಎಕ್ಸ್‌ಪೆರಿಮೆಂಟ್ ಮಾಡಿದ್ದಾರೆ. ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಮೂಗನ್ನು ಹಿಡಿದು ಒಂದು ಹಾಡಿನ ಟ್ಯೂನ್ ಹಾಕಿದ್ದಾರೆ. ನಿವೇದಿತಾ ಕೂಡ ಚಂದನ್‌ಗೆ ಸಾಥ್ ನೀಡಿದ್ದು, ಚಂದನ್ ಕೈಗೆ ಮೂಗು ಕೊಟ್ಟು ಸಂಗೀತದ ಹೊಸ ಟ್ಯೂನ್ ಹೊರಹಾಕಿದ್ದಾರೆ. ಈ ವಿಡಿಯೋ ಕೂಡ ವೈರಲ್ ಲಿಸ್ಟ್ ಸೇರಿದೆ.

ಚಂದನ್ ಹಾಗು ನಿವೇದಿತಾ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಒಂದು ಚಾಲೆಂಜ್ ಕೊಟ್ಟಿದ್ದಾರೆ. ಈ ಹಾಡು ಯಾವುದು ಎಂದು ಊಹೆ ಮಾಡಿ ಕಮೆಂಟ್ ಮಾಡಿ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ. ಜೊತೆಗೆ ನೆಟ್ಟಿಗರು ಇವರಿಬ್ಬರನ್ನು ಪ್ರಶ್ನೆ ಮಾಡುತ್ತಿದ್ದಾರೆ. ನಿಮಗೆ ಏನಾಗಿದೆ? ಈ ರೀತಿ ವಿಡಿಯೋಗಳನ್ನು ಯಾಕೆ ಅಪ್ಲೋಡ್ ಮಾಡುತ್ತೀರ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಮತ್ತೊಂದು ಕಡೆಗೆ ಇದೇ ವಿಡಿಯೋಗೆ ಸಾಕಷ್ಟು ಮೆಚ್ಚುಗೆ ಕೂಡ ಬಂದಿದೆ.

ಚಂದನ್ ನಿವೇದಿತಾ ಏನೇ ಮಾಡಿದ್ರು ಸ್ವಲ್ಪ ಹೆಚ್ಚು, ಕಡಿಮೆ ಆದ್ರೂ ಕೂಡ ಅದು ಟ್ರೋಲ್ ಆಗಿ ಬಿಡುತ್ತೆ. ಅಥವ ಜನರು ಅವರನ್ನು ಪ್ರಶ್ನೆ ಮಾಡುತ್ತಾರೆ. ಆದರೆ ಇದೆಲ್ಲವನ್ನು ಚಂದನ್ ಮತ್ತು ನಿವೇದಿತಾ ಇಬ್ಬರೂ ಕೂಡ ಯಾವುದೇ ಉದ್ದೇಶದಿಂದ ಮಾಡುವುದಿಲ್ಲ. ಫನ್‌ಗಾಗಿ, ತಮ್ಮ ಖುಷಿಗಾಗಿ ಮಾಡುತ್ತಾರೆ. ಇವರ ವಿಡಿಯೋಗಳ ವಿರುದ್ಧ ಪ್ರಶ್ನೆ ಮಾಡುವವರಿಗಿಂತಲೂ, ಮೆಚ್ಚಿಕೊಳ್ಳುವ ವರ್ಗವೇ ಹೆಚ್ಚಾಗಿದೆ.

Niveditha Gowda And Chandan Shetty New Video Troll
ಹಾಗಾಗಿ ನಿವೇದಿತಾ ಈ ಜೋಡಿ ಇದ್ಯಾವುದಕ್ಕೂ ಹೆಚ್ಚಾಗಿ ತಲೆಕೆಡಿಸಿಕೊಳ್ಳದ ಸದಾ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಅಡುಗೆ ಮಾಡುವುದು, ಶಾಪಿಂಗ್ ಮಾಡುವುದು, ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ಈ ಜೋಡಿ ವಿಡಿಯೋ ಮಾಡುತ್ತಾ ಇರುತ್ತದೆ.

More from Filmibeat

English summary
Niveditha Gowda And Chandan Shetty New Video Troll, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X