ನಿವೇದಿತಾಗೆ ಕಿಸ್ ಮಾಡಲು ಮಿಸ್ ಮಾಡಿಕೊಂಡ ಚಂದನ್: ದಂಪತಿ ಕಾಲೆಳೆದ ನೆಟ್ಟಿಗರು!
ಸಾಮಾಜಿಕ ಜಾಲತಾಣದಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಭಿನ್ನ ವಿಭಿನ್ನ ವಿಡಿಯೋ ರೀಲ್ಸ್‌ಗಳ ಮೂಲಕ ಹೆಚ್ಚು ಸುದ್ದು ಆಗುತ್ತಾರೆ. ವಿಭಿನ್ನ ಕಾನ್ಸೆಪ್ಟ್ ಮೂಲಕ ರೀಲ್ಸ್ ಮಾಡುತ್ತಾ ಚರ್ಚೆಗೆ ಕಾರಣ ಆಗುತ್ತಿರುತ್ತಾರೆ. ಹಾಗಾಗಿ ಈ ಜೋಡಿ ವಿಡಿಯೋ ಮಾಡಿ ಕೆಲವೊಮ್ಮೆ ಟ್ರೋಲ್ ಆದರೂ ಕೂಡ ಅವರ ತುಂಟಾಟದ ವಿಡಿಯೋಗಳಿಗಾಗಿ ಸಾಕಷ್ಟು ಅಭಿಮಾನಿಗಳು ಕಾಯುತ್ತಾ ಇರುತ್ತಾರೆ.
Recommended Video
ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಿವೇದಿತಾ ಹೆಚ್ಚು ವಿಡಿಯೋಗಳನ್ನು ಪತಿ ಚಂದನ್ ಶೆಟ್ಟಿ ಜೊತೆಯೇ ವಿಡಿಯೋ ಮಾಡಿ ಹಂಚಿಕೊಳ್ಳುತ್ತಾರೆ. ಚಂದನ್ ಶೆಟ್ಟಿ ಕೂಡ ಹೆಚ್ಚಾಗಿ ನಿವೇದಿತಾ ಅವರೊಂದಿಗೆ ಹಾಡು, ಡ್ಯಾನ್ಸ್, ಫೈಟ್ ಮಾಡುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚಿಗೆ ರ್‍ಯಾಪ್ ಹಾಡು ಒಂದಕ್ಕೆ ಹೆಜ್ಜೆ ಹಾಕುತ್ತಾ ಮತ್ತೆ ಕಂಬ್ಯಾಕ್ ಮಾಡಿದ್ದರು. ಪತ್ನಿಗಾಗಿ ಪಾತರಗಿತ್ತಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಅಷ್ಟೇ ಅಲ್ಲ ಈ ಜೋಡಿ ಏನಿಲ್ಲಾ ಅಂದರೂ ನಿತ್ಯವೂ ಒಂದಾದರು ವಿಡಿಯೋ ಶೇರ್ ಮಾಡುತ್ತಾರೆ. ಇತ್ತೀಚೆಗೆ ಅವರು ಮಾಡಿರುವ ಡ್ಯಾನ್ಸ್ ವಿಡಿಯೋಗಳು ಮತ್ತು ಮುತ್ತಿನ ಪ್ರಯೋಗದ ವಿಡಿಯೋ ಟ್ರೆಂಡಿಮಗ್ ಲಿಸ್ಟ್ ಸೇರಿವೆ. ಆದರೆ ಈ ಜೋಡಿ ಏನೇ ಮಾಡಿದರೂ ಕೂಡ ಇವರ ಕಾಲೆಳೆಯುವ ಕಮೆಂಟ್‌ಗಳು ಮಾತ್ರ ನಿಂತಿಲ್ಲ.
ನಿವೇದಿತಾಗೆ ಕಿಸ್ ಮಾಡಲು ಮಿಸ್ ಮಾಡಿದ ಚಂದನ್!
ಚಂದನ್ ನಿವೇದಿತಾ ಕೇವಲ ಹಾಡು, ಡ್ಯಾನ್ಸು ಮಾಡುವುದಲ್ಲ. ಬದಲಿಗೆ ಅವರು ಮುತ್ತಿಡುವ ಪ್ರಯತ್ನವನ್ನೂ ಕೂಡ ಮಾಡಿದ್ದಾರೆ. ಹೌದು ಚಂದನ್ ಶೆಟ್ಟಿ ಮತ್ತು ನಿವೇದಿತಾ ವಿಡಿಯೋ ಒಂದರಲ್ಲಿ, ಕಣ್ಣಿಗೆ ಇಬ್ಬರು ಬಟ್ಟೆ ಕಟ್ಟಿಕೊಂಡಿರುತ್ತಾರೆ. ಇದು ಕಣ್ಣು ಮುಚ್ಚಿ ಮುತ್ತು ಕೊಡುವ ಚಾಲೆಂಜ್ ಅಂತೆ. ಆದರೆ ಈ ಚಾಲೆಂಜ್‌ನಲ್ಲಿ ಇಬ್ಬರು ಸೋತಿದ್ದಾರೆ. ಈ ವಿಡಿಯೋ ನೋಡಿದ ಮಂದಿ ಕಮೆಂಟ್‌ಗಳ ಮೂಲಕ ಈ ಜೋಡಿಯ ಕಾಲೆಳೆದಿದ್ದಾರೆ.
ನಿವೇದಿತಾಗೆ ಪಾತರಗಿತ್ತಿ ಬಾರೆ ಎಂದು ಹಾಡಿದ ಚಂದನ್ ಶೆಟ್ಟಿ!
ಚಂದನ್ ಶೆಟ್ಟಿ , ನಿವೇದಿತಾ ಯುಟ್ಯೂಬ್ ಚಾನಲ್ ಮೂಲಕ ಅಭಿಮಾನಿಗಳನ್ನು ರಂಜಿಸುವ ಕೆಲಸ ಮಾಡುತ್ತಿದ್ದಾರೆ. ಇದೀಗ ನಿವೇದಿತ ಹಾಗೂ ಚಂದನ್ ಶೆಟ್ಟಿ ಇಬ್ಬರು ಸೇರಿ ರೀಲ್ಸ್ ಒಂದನ್ನ ಮಾಡಿದ್ದಾರೆ. ಚಂದನ್ ಶೆಟ್ಟಿ ನಿವೇದಿತಾ ಗೌಡ ಹಿಂದೆ ನಿಂತು ಬೆನ್ನು ಹತ್ತಿ ಬಾರೆ ಪಾತರಗಿತ್ತಿ ಎಂಬ ಹಾಡಿಗೆ ಹೆಜ್ಜೆ ಹಾಕಿದ್ದು, ಇವರಿಬ್ಬರ ವಿಡಿಯೋ ಇದೀಗ ಬಾರಿ ವೈರಲ್ ಆಗುತ್ತಿದೆ.
ನಿವೇದಿತಾಗಾಗಿ ಪುಂಗಿ ಊಡಿದ ಚಂದನ್!
ಮತ್ತೊಂದು ವಿಡಿಯೋದಲ್ಲಿ ನಿವೇದಿತಾ ಗೌಡ ಡ್ಯಾನ್ಸ್ ಮಾಡಿದ್ದಾರೆ. ನಾಗಿನ್ ಸಂಗೀತಕ್ಕೆ ನಿವೇದಿತಾ ಮುದ್ದಾಗಿ ಹೆಜ್ಜೆ ಹಾಕಿದ್ದಾರೆ. ನಿವೇದಿತಾ ಡಾನ್ಸ್ ಶುರು ಮಾಡಿದ ಬಳಿಕ ಎಂಟ್ರಿ ಕೊಡುವ ಚಂದನ್ ಕಕ್ಕಾ ಬಿಕ್ಕಿಯಾಗಿ ನೋಡುತ್ತಾ, ನಂತರ ತಾವೂ ಕೂಡ ಪೂಂಗಿ ಊದುವ ಮಾದರಿಯಲ್ಲಿ ಒಂದೆರಡು ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋ ಕೂಡ ವೈರಲ್ ಲಿಸ್ಟ್ ಸೇರಿದೆ.
ಕ್ಯಾಂಡಲ್ ಉಫ್ ಚಾಲೆಂಜ್‌ನಲ್ಲಿ ಗೆದ್ದ ಚಂದನ್ ಶೆಟ್ಟಿ!
ಚಂದನ್, ನಿವೇದಿತಾ ಮಾತ್ರ ಅಲ್ಲ, ಆಗಾಗ ಅವರ ಇಡೀ ಕುಟುಂಬವೇ ವಿಡಿಯೋಗಲಲ್ಲಿ ಕಾಣಿಸಿಕೊಳ್ಳುತ್ತಾರೆ. ಅಂತೆಯೇ ಹೊಸ ವಿಡಿಯೋದಲ್ಲಿ ಚಂದನ್ ಶೆಟ್ಟಿಯವರ ತಂದೆ, ತಾಯಿ, ಸಹೋದರ ಕಾಣಿಸಿಕೊಂಡಿದ್ದಾರೆ. ಇಡಿ ಕುಟುಂಬ ಕ್ಯಾಂಡಲ್ ಉಫ್ ಚಾಲೆಂಗ್‌ನಲ್ಲಿ ಆಗಿದ್ದಾರೆ. ಸಾಲಾಗಿ ಜೋಡಿಸಿರುವ ಕ್ಯಾಂಡಲ್‌ಗಳನ್ನು ಊದಬೇಕು ಹೆಚ್ಚು ಕ್ಯಾಂಡಲ್ ಊದಿದವರಿಗೆ ಹೆಚ್ಚು ಬಹುಮಾನ. ಈ ಚಾಲೆಂಜ್‌ನಲ್ಲಿ ಚಂದನ್ ಶೆಟ್ಟಿ ಜಯಗಳಿಸಿ ಹೆಚ್ಚು ಹಣ ಬಾಚಿಕೊಂಡಿದ್ದಾರೆ.


Click it and Unblock the Notifications











