ಟ್ರೋಲ್ ಆದ್ರೂ ನಿಂತಿಲ್ಲ ನಿವೇದಿತಾ, ಚಂದನ್ ಶೆಟ್ಟಿ ಹಾವಳಿ: ಹೊಸ ಫೋಟೋದಲ್ಲೇನಿದೆ?
ಸ್ಯಾಂಡಲ್‌ವುಡ್‌ನ ಮುದ್ದಾದ ಜೋಡಿಗಳಲ್ಲಿ, ಚಂದನ್ ಶೆಟ್ಟಿ ಹಾಗೂ ನಿವೇದಿತಾ ಜೋಡಿ ಕೂಡ ಒಂದು. ಈ ಜೋಡಿ ತಮ್ಮದೇ ವಿಭಿನ್ನ ಶೈಲಿಯಲ್ಲಿ ಗಮನ ಸೆಳೆದಿದೆ. ಇವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ.
Recommended Video
ಇವರು ಸಿನಿಮಾ ಮಾಡುವುದು, ಕಾರ್ಯಕ್ರಮ ಮಾಡುವುದೂ ಬೇಡ. ಜಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಕಿದ್ರೆ ಸಾಕು ಅಂತ ಅದೆಷ್ಟೋ ಮಂದಿ ಕಾಯುತ್ತಾ ಇರುತ್ತಾರೆ.
ಅದಕ್ಕೆ ತಕ್ಕಂತೆ ಈ ಜೋಡಿ ಸಹ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿ ಇರುತ್ತೆ. ಒಂದಲ್ಲಾ ಒಂದು ವಿಭಿನ್ನ ವಿಡಿಯೋ ಮೂಲಕ ಅಭಿಮಾನಿ ಬಳಗಕ್ಕೆ ಸರ್ಪ್ರೈಸ್ ಕೊಡುತ್ತಲೇ ಇರುತ್ತದೆ. ಕೆಲವೊಮ್ಮೆ ಇವರ ಅತಿರೇಕದ ವಿಡಿಯೋಗಳು ಟ್ರೋಲ್ ಆಗುತ್ತಾ ಇರುತ್ತವೆ. ಈಗ ವಿಶೇಷವಾದ ಫೋಟೊವನ್ನು ಈ ಜೋಡಿ ಹಂಚಿಕೊಂಡಿದೆ.
ಬಾಲ್ಯದ ಫೋಟೊ ಹಂಚಿಕೊಂಡ ನಿವೇದಿತಾ!
ಈ ಬಾರಿ ನಿವೇದಿತಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೊ ಒಂದನ್ನು ಹಂಚಿಕೊಂಡಿದ್ದಾರೆ. ಇದು ಅವರ ಬಾಲ್ಯದ ಫೋಟೊ. ತಮ್ಮ ಸಹೋದರನ ಜೊತೆಗೆ ಇರುವ ಫೋಟೊವನ್ನು ನಿವಿ ಹಂಚಿಕೊಂಡಿದ್ದಾರೆ. ಬಾಲ್ಯದ ಫೊಟೋದಲ್ಲಿ ನಿವೇದಿತ ತುಂಬಾನೇ ಮುದ್ದಾಗಿ ಕಾಣಿಸುತ್ತಾರೆ. ಅಚ್ಚರಿ ಅಂದರೆ ಅವರ ಮುಖ ಈಗಲೂ ಹಾಗೆ ಇದೆ. ಫೊಟೋ ನೋಡಿದಾಕ್ಷಣ ಇದು ನಿವೇದಿತಾ ಅವರೇ ಎಂದು ಥಟ್ ಅಂತ ಹೇಳಬಹುದು. ನಿವೇದಿತಾ ಅವರ ಈ ಫೋಟೊಗೆ ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗಿದೆ.
ಚಂದನ್ ಕೂಡ ಬಾಲ್ಯದ ಫೋಟೊ ಹಂಚಿಕೆ!
ನಿವೇದಿತಾ ಅಂತೆಯೇ, ಚಂದನ್ ಕೂಡ ತಮ್ಮ ಬಾಲ್ಯದ ಫೊಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಚಂದನ್ ಶೆಟ್ಟಿ ಫೋಟೊಗೆ ನಿವೇದಿತಾ ವಾವ್ ಸೋ ಕ್ಯೂಟ್ ಎಂದು ಕಮೆಂಟ್ ಮಾಡಿದರೆ, ನಿವೇದಿತಾ ಫೋಟೊಗೆ ಚಂದನ್ ಶೆಟ್ಟಿ ಲುಕ್ಕಿಂಗ್ ಸೋ ಕ್ಯೂಟ್ ಮೈ ಲವ್ ಎಂದು ಕಮೆಂಟ್ ಮಾಡಿದ್ದಾರೆ.
ಟವಲ್ ಕಳಚಿ ಟ್ರೋಲ್ ಆಗಿದ್ದ ಜೋಡಿ!
ಇತ್ತೀಚೆಗೆ ಇವರು ಮಾಡಿದ್ದ ಟವಲ್ ಕಳಚಿ ಮಾಡಿದ್ದ ರೀಲ್ ಒಂದು ಟ್ರೋಲ್ ಆಗಿತ್ತು. ಸಾಕಷ್ಟು ಜನ ನೆಗೆಟಿವ್ ಕಮೆಂಟ್ ಮಾಡಿದ್ದರು. ಮೈಗೆ ಟವೆಲ್ ಸುತ್ತಿಕೊಂಡು ಕ್ಯಾಮೆರಾ ಮುಂದೆ ನಿವೇದಿತಾ ಡ್ಯಾನ್ಸ್ ಮಾಡುತ್ತಿರುತ್ತಾರೆ. ಪತಿ ಚಂದನ್ ಶೆಟ್ಟಿ ಅಲ್ಲಿಯೇ ಕುಳಿತು ಲ್ಯಾಪ್‌ಟಾಪ್‌ನಲ್ಲಿ ಏನೋ ಕೆಲಸ ಮಾಡುತ್ತಿರುತ್ತಾರೆ. ಡ್ಯಾನ್ಸ್ ಮಾಡುತ್ತಿದ್ದ ನಿವೇದಿತಾ ಇದ್ದಕ್ಕಿದ್ದಂತೆ ತಮ್ಮ ಮೈಗೆ ಸುತ್ತಿಕೊಂಡಿರುವ ಟವೆಲ್ ಬಿಚ್ಚಿ ಬಿಸಾಡುತ್ತಾರೆ. ಈ ವಿಡಿಯೋ ಟ್ರೋಲ್ ಆಗಿತ್ತು.
ಹಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಜೋಡಿ!
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ರಿಯಾಲಿಟಿ ಶೋವೊಂದರಲ್ಲಿ ಸ್ಪರ್ಧಿಗಳಾಗಿದ್ದರು. ಅಲ್ಲಿಯೇ ಪರಿಚಯವಾಗಿ, ಅಲ್ಲಿಯೇ ಪ್ರೀತಿ ಬೆಳೆದು ಬಳಿಕ ವಿವಾಹವಾದರು. 2019 ಅಕ್ಟೋಬರ್ ತಿಂಗಳಲ್ಲಿ ಈ ಜೋಡಿ ವಿವಾಹ ಆದರು. ಬಳಿಕ ಈ ಜೋಡಿ ಒಟ್ಟಿಗೆ ಕಿರುತೆರೆ ಕಾರ್ಯಕ್ರಮಗಳಲ್ಲಿ ಭಾಗಿ ಆಗಿದೆ. ಅಲ್ಲದೇ ಚಂದನ್ ಶೆಟ್ಟಿಯ ಆಲ್ಬಮ್ ಹಾಡಿನಲ್ಲೂ ಕೂಡ ನಿವೇದಿತಾ ಕಾಣಿಸಿಕೊಂಡಿದ್ದಾರೆ.


Click it and Unblock the Notifications











