ನೀಲಿ ಕಣ್ಣಿನ ಚೆಲುವೆ ಆದ ನಿವೇದಿತಾ ವಿಡಿಯೋ ವೈರಲ್!
ಕನ್ನಡ ಕಿರುತೆರೆಯಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಜನಪ್ರಿಯ ಆಗಿರುವವರಲ್ಲಿ ನಿವೇದಿತಾ ಗೌಡ ಮುಂಚೂಣಿಯಲ್ಲಿ ಇದ್ದಾರೆ. ನಿವೇದಿತಾ ಏನೇ ಮಾಡಿದರು ಅದು ವೈರಲ್ ಆಗುತ್ತೆ. ಇನ್ನು ನಿವೇದಿತಾಗೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್ ಇರುದರಿಂದ ಪೋಸ್ಟ್‌ಗಳು ಬೇಗನೆ ವೈರಲ್ ಆಗುತ್ತವೆ.
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಬಳಿಕ ಚಂದನ್ ಶೆಟ್ಟಿಯ ಜೊತೆ ದಾಂಪತ್ಯ ಜೀವನವನ್ನು ಆರಂಭಿಸಿರುವ ನಿವೇದಿತಾ ಗೌಡ ಇತ್ತೀಚೆಗೆ ಒಂದು ಯುಟ್ಯೂಬ್ ಚಾನೆಲ್ ತೆರೆದಿದ್ದಾರೆ. ಇಲ್ಲಿ ಹಲವಾರು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಿವೇದಿತಾ ತಮ್ಮ ವೈಯಕ್ತಿಕ ಬದುಕಿನ ಹಲವು ವಿಚಾರಗಳನ್ನು ಯೂಟ್ಯೂಬ್ ಚಾನೆಲ್ ಮೂಲಕ ಹಂಚಿಕೊಳ್ಳುತ್ತಾ ಇರುತ್ತಾರೆ.
ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಹಾಗೇನೆ ಚಂದನ್ ಶೆಟ್ಟಿಯ ಜೊತೆ ರೀಲ್ಸ್ ಮಾಡುತ್ತಾ ವಿಡಿಯೋವನ್ನು ಅವರ ಅಭಿಮಾನಿಗಳಿಗಾಗಿ ಸಾಮಾಜಿಕ ಜಾಲತಾಣವಾದಲ್ಲಿ ಹಂಚಿಕೊಳ್ಳುತ್ತಾರೆ.
ಇತ್ತೀಚಿಗೆ ಮಿಸ್ಸರ್ಸ್ ಇಂಡಿಯಾ ಕಾಂಪಿಟೇಷನ್‌ನಲ್ಲೂ ಸಹ ನಿವೇದಿತಾ ಭಾಗವಹಿಸುತ್ತಿರುವ ವಿಷಯ ಬಹಿರಂಗಪಡಿಸಿದ್ದರು. ಬಳಿಕ ಅದಕ್ಕಾಗಿ ತಯಾರಿ ಕೂಡ ನಡೆಸಿದ್ದರು. ಹೀಗೆ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುವ ಈ ನಿವೇದಿತಾ ಗೌಡ ಇದೀಗ ಮತ್ತೊಂದು ಇಂಗ್ಲಿಷ್ ಹಾಡಿಗೆ ರೀಲ್ಸ್ ಮಾಡಿ ವೈರಲ್ ಆಗುತ್ತಿದ್ದಾರೆ.

ವಿಡಿಯೋದಲ್ಲಿ ನಿವೇದಿತಾ ಗೌಡ ಕಣ್ಣುಗಳೇ ಆಕರ್ಷಕ. ನಿವೇದಿತಾ ಕಣ್ಣು ನೀಲಿ ಬಣ್ಣಕ್ಕೆ ತಿರುಗಿದೆ. ಈ ಬಣ್ಣದ ಕಣ್ಣುಗಳೊಂದಿಗೆ ನಿವೇದಿತಾ ಥೇಟ್ ಗೊಂಬೆಯಂತೆ ಕಾಣುತ್ತಿದ್ದಾರೆ. ನಿವೇದಿತಾ ಈ ವಿಡಿಯೋ ನೋಡಿ ಅಭಿಮಾನಿಗಳು ಖುಷ್ ಆಗಿದ್ದು ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ನಿವೇದಿತಾ ಮತ್ತು ಚಂದನ್ ಶೆಟ್ಟಿ ರೀಲ್ಸ್‌ಗಳ ಮೂಲಕವೇ ಆಗಾಗ ಟ್ರೋಲ್ ಆಗುತ್ತಿರುತ್ತಾರೆ. ಈ ಜೋಡಿಯನ್ನು ನೋಡಿ ಕಿಡಿಗೇಡಿಗಳು ಟ್ರೋಲ್ ಮಾಡುತ್ತಿರುತ್ತಾರೆ. ಆದರೆ ಟ್ರೋಲ್‌ಗಿಂತಲೂ ನಿವೇದಿತಾರನ್ನು ಮೆಚ್ಚಿಕೊಳ್ಳುವವರೇ ಹೆಚ್ಚು. ಹಾಗಾಗಿ ನಿವೇದಿತಾ ಏನೇ ಮಾಡಿದರು ಅದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.


Click it and Unblock the Notifications











