ಮಬ್ಬುಗತ್ತಲಿನಲ್ಲಿ ಹೆಜ್ಜೆ ಹಾಕಿದ ನಿವೇದಿತಾ ಗೌಡ, ಅಶ್ಲೀಲ ಕಾಮೆಂಟ್‌ಗಳ ಸುರಿಮಳೆ..!

By ಫಿಲ್ಮಿಬೀಟ್ ಡೆಸ್ಕ್

ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ಜೀವನದಲ್ಲಿ ಒಂದು ಬೊಂಬೆಯ ಜೊತೆ ಆಟವಾಡಿದರೂ ಕೂಡಾ ಸೋಶಿಯಲ್ ಮೀಡಿಯಾದಲ್ಲಿ ಅದು ಸುದ್ದಿಯಾಗಬಹುದು. ಟ್ರೋಲಿಗರ ಹಸಿವಿಗೆ ಆಹಾರವೂ ಆಗಬಹುದು. ಇದಕ್ಕೆ ನಿವೇದಿತಾ ಗೌಡ ಅವರ ಹೊಸ ರೀಲ್ಸ್ ಸದ್ಯದ ಉದಾಹರಣೆ.

ಹೌದು, ಚಂದನ್ ಶೆಟ್ಟಿ ಅವರಿಂದ ದೂರವಾದ ನಂತರ ನಿವೇದಿತಾ ಗೌಡ ಇನ್ಸ್‌ಟಾಗ್ರಾಮ್‌ನಲ್ಲಿ ತುಸು ಹೆಚ್ಚೇ ಆಕ್ಟಿವ್ ಆಗಿದ್ದಾರೆ. ದಿನಕ್ಕೊಂದು ವಿಡಿಯೋ ಅಲ್ಲದೇ ಇದ್ದರೂ, ವಾರಕ್ಕೆ ನಾಲ್ಕು ವಿಡಿಯೋವನ್ನಾದರೂ ತಪ್ಪದೇ ಹಂಚಿಕೊಳ್ಳುತ್ತಿದ್ದಾರೆ.ಆದರೆ, ನಿವೇದಿತಾ ಅವರ ಈ ಹವ್ಯಾಸ- ಅಭ್ಯಾಸ ಒಂದು ವರ್ಗದ ಜನರಿಗೆ ಮೊದಲಿಂದ ಇಷ್ಟವಾಗುತ್ತಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ನಿವೇದಿತಾ ರೀಲ್ಸ್ ಹಂಚಿಕೊಂಡಾಗಲೆಲ್ಲ, ಹೊಂಚು ಹಾಕಿ ಕುಂತಂತೆ ಇವರ ಕಾಮೆಂಟ್ ಸೆಕ್ಷನ್‌ಗೆ ಬಂದು ಕೆಲವರು ದಾಳಿಯನ್ನೂ ಮಾಡುತ್ತಾನೇ ಬಂದಿದ್ದಾರೆ. ನಿವೇದಿತಾ ಗೌಡ ಅವರ ವ್ಯೆಯಕ್ತಿಕ ವಿಚಾರಗಳನ್ನೂ ಕೆದಕುತ್ತಾ ನಿಂದಿಸುತ್ತಾನೇ ಇದ್ದಾರೆ.

Niveditha Gowda Chandan Shetty s ex-wife received abuse on social media after her new video

ಇನ್ನೂ.. ಸಾಮಾನ್ಯವಾಗಿ ಇಂತಹ ಅಸಹ್ಯಕರ,ಅಸಭ್ಯ, ಅಶ್ಲೀಲ ಕಾಮೆಂಟ್‌ಗಳಿಗೆ ಬಹುತೇಕ ಸೆಲೆಬ್ರೆಟಿಗಳು ಉರಿದು ಬೀಳುತ್ತಾರೆ. ಪ್ರತಿಕ್ರಿಯೆ ನೀಡುತ್ತಾರೆ. ಕೆಲವರಂತೂ ಕಾನೂನಿನ ಮೆಟ್ಟಿಲನ್ನು ಹತ್ತುತ್ತಾರೆ. ಆದರೆ ನಿವೇದಿತಾ ಗೌಡ ಮಾತ್ರ ಇಲ್ಲಿಯವರೆಗೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ಮುಖ ಮುಚ್ಚಿಕೊಂಡು ಅದೆಲ್ಲೋ ಕುಳಿತು ಬಾಯಿಗೆ ಬಂದಂತೆ ಮಾತನಾಡುವವರ ಮಾತುಗಳಿಂದ ಭಯ ಬಿದ್ದು ಕಾಮೆಂಟ್ ಸೆಕ್ಷನ್ ಕೂಡ ಆಫ್ ಮಾಡಿಲ್ಲ. ಬದಲಿಗೆ ಯಾವ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳದೇ ತಮ್ಮದೇ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದಾದ ಮೇಲೊಂದು ರೀಲ್ಸ್ ಮಾಡುತ್ತಿದ್ಧಾರೆ. ನಿವೇದಿತಾ ಗೌಡ ಅವರ ಈ ನಡೆ, ಕೆಟ್ಟದಾಗಿ ಮಾತನಾಡುವವರ ಧೈರ್ಯವನ್ನು ಹೆಚ್ಚಿಸಿದೆಯಾ ಗೊತ್ತಿಲ್ಲ. ಆದರೆ, ನಿವೇದಿತಾ ಗೌಡ ಹಂಚಿಕೊಂಡ ಅವರ ಹೊಸ ವಿಡಿಯೋ ಗೆ ತೀರಾ ಕೊಳಕು ಕಾಮೆಂಟ್‌ಗಳು ಬಂದಿರುವುದು ಮಾತ್ರ ಸತ್ಯ.

ಹೌದು, ಅಸಲಿಗೆ ನಿವೇದಿತಾ ಗೌಡ ಹೊಸ ವಿಡಿಯೋವೊಂದನ್ನು ಹಂಚಿಕೊಂಡಿದ್ಧಾರೆ. ಮಬ್ಬುಗತ್ತಲಿನಲ್ಲಿ ಕೂದಲು ಹಿಡಿದುಕೊಂಡು ನಾಲ್ಕು ಹೆಜ್ಜೆ ಹಾಕಿದ್ದಾರೆ. ಸಾಲದಕ್ಕೆ ಸೋಮವಾರ ಬೆಳ್ಳಗ್ಗೆನಾ ..? ಶುಕ್ರವಾರದ ರಾತ್ರಿನಾ..? ನಿಮ್ಮ ಆಯ್ಕೆ ಯಾವುದು ಎಂದು ಮತವನ್ನು ಮಾಡುವುದರ ಮೂಲಕ ತಿಳಿಸಿ ಎಂದಿದ್ದಾರೆ. ನಿವೇದಿತಾ ಗೌಡ ಕೇಳಿರುವ ಈ ಪ್ರಶ್ನೆಗೆ ಹೆಚ್ಚು ಕಡಿಮೆ 5295ಜನ ಮತದಾನದ ಮೂಲಕ ಉತ್ತರ ನೀಡಿದ್ದಾರೆ. ಶೇಕಡಾ 73% ಜನ ಶುಕ್ರವಾರದ ರಾತ್ರಿ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ಧಾರೆ.

Niveditha Gowda Chandan Shetty s ex-wife received abuse on social media after her new video

ಇನ್ನೂ ಹತ್ ಹತ್ರ 900 ಜನ ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಈ 900 ಕಾಮೆಂಟ್‌ಗಳಲ್ಲಿ ಶೇಕಡಾ 75% ಕಾಮೆಂಟ್‌ಗಳು ಓದಲು ಆಗದಷ್ಟು ಅಸಹ್ಯಕರವಾಗಿವೆ. ರೇಣುಕಾಸ್ವಾಮಿ ಪ್ರಕರಣವಾದ ನಂತರವೂ ಇವರು ಯಾರು ಎಚ್ಚೆತ್ತುಕೊಂಡಿಲ್ಲ ಎನ್ನುವುದು ಅಚ್ಚರಿಯ ವಿಷಯ.

ಇನ್ನೂ ವಿಚ್ಛೇದನದ ಪಡೆದ ನಂತರ ನಿವೇದಿತಾ ಗೌಡ ಅವರ ಮಾಜಿ ಪತಿ ಚಂದನ್ ಶೆಟ್ಟಿ ಸ್ಪೀಡ್ ಪ್ಲಸ್ ಜೊತೆ ನೀಡಿದ್ದ ಸಂದರ್ಶನದಲ್ಲಿ ಕಿರಿಕ್ ಕೀರ್ತಿ ಅವರ ಜೊತೆ ಮಾತನಾಡುತ್ತಾ, ಹುಡುಗಿಯರ ಪ್ರೈವೇಟ್ ಪಾರ್ಟ್‌ ಬಗ್ಗೆ ನೇರವಾಗಿಯೇ ಕಮೆಂಟ್ ಮಾಡ್ತಾರೆ ಎಂದು ತಮ್ಮ ಆಕ್ರೋಶ ಹೊರ ಹಾಕಿದ್ದರು. ಸಮಾಜ ಎತ್ತ ಸಾಗುತ್ತಿದೆ ಎಂದು ತಮ್ಮ ಬೇಸರವನ್ನೂ ವ್ಯಕ್ತಪಡಿಸಿದ್ದರು. ಆದರೂ ಕೂಡ ನಿವೇದಿತಾ ಗೌಡ ಅವರ ಈ ವಿಡಿಯೋಗೆ ಕೆಟ್ಟಾ ಕೊಳಕು ಕಾಮೆಂಟ್‌ಗಳೂ ಬಂದಿರುವುದು ದುರ್ದೈವ.

ಉಳಿದಂತೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ನಿಜ ಜೀವನದಲ್ಲಿ ದೂರವಾದರೂ, ಬೆಳ್ಳಿ ತೆರೆಯ ಮೇಲೆ ಸದ್ಯದಲ್ಲಿಯೇ ಜೊತೆಯಾಗಿ ದರ್ಶನ ಕೊಡಲಿದ್ದಾರೆ. ಇವರಿಬ್ಬರು ಅಭಿನಯಿಸಿರುವ ಚಿತ್ರ ಮುದ್ದು ರಾಕ್ಷಸಿ ಬಿಡುಗಡೆಗೆ ಸಿದ್ಧವಾಗಿದ್ದು ಎಲ್ಲವೂ ಅಂದುಕೊಂಡತೆ ಆದರೆ ಚಿತ್ರ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X