ಹನಿಮೂನ್ ಮೂಡ್‌ನಲ್ಲಿ ಚಂದನ್ ಶೆಟ್ಟಿ-ನಿವೇದಿತ: ಯಾವ ದೇಶಕ್ಕೆ ಪಯಣ?
ಬಿಗ್ ಬಾಸ್ ಮನೆಯಲ್ಲಿ ಜೊತೆಯಾಗಿ ಈಗ ಜೀವನದಲ್ಲೂ ಜೊತೆಯಾಗಿರುವ ಹೊಸ ಜೋಡಿ ಚಂದನ್ ಶೆಟ್ಟಿ, ನಿವೇದಿತ ಮಧುಚಂದ್ರಕ್ಕೆ ಹೊರಟಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ಅದ್ಧೂರಿಯಾಗಿ ವಿವಾಹವಾಗಿದ್ದ ರ್ಯಾಪರ್ ಚಂದನ್ ಶೆಟ್ಟಿ ಮತ್ತು ಗೊಂಬೆ ನಿವೇದಿತ ಹನಿಮೂನ್ ಗೆ ಹೊರಟಿದ್ದಾರೆ.
ನಿವೇದಿತ ಮತ್ತು ಚಂದನ್ ಶೆಟ್ಟಿ ವಿಮಾನದಲ್ಲಿ ಕುಳಿತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಹೊಸ ಜೋಡಿ ಯಾವ ದೇಶಕ್ಕೆ ಹೊರಟಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಮೋಜಿನ ನಗರಿಗೆ ಚಂದನ್-ನಿವೇದಿತಾ ಪಯಣ
ಚಂದನ್ ಶೆಟ್ಟಿ ಮತ್ತು ನಿವೇದಿತಾ ಅವರುಗಳು ಮೋಜಿನ ನಗರಿಯೆಂದೇ ಹೆಸರುವಾಸಿಯಾಗಿರುವ ಆಮ್‌ಸ್ಟರ್ ಡ್ಯಾಂ ಗೆ ವಿಮಾನ ವೇರಿದೆ. ನೆದರ್‌ಲೆಂಡ್ ದೇಶದ ರಾಜಧಾನಿ ಆಮ್‌ಸ್ಟರ್ ಡ್ಯಾಂ ಪ್ರವಾಸಿಗರ ನೆಚ್ಚಿನ ನಗರ. ಚಳಿತುಂಬಿದ ನಗರದಲ್ಲಿ ಹೊಸ ಜೋಡಿ ಹನಿಮೂನ್ ಆಚರಿಸಿಕೊಳ್ಳಲಿದ್ದಾರೆ.

ನಗೆಪಾಟಲಿಗೆ ಗುರಿಯಾಗಿದ್ದ ನಿವೇದಿತಾ
ಮದುವೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ನಿವೇದಿತ ಗೌಡ, ಹನಿಮೂನ್ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಹೇಳಿ ನಗೆಪಾಟಲಿಗೆ ಗುರಿಯಾಗಿದ್ದರು. 'ಹನಿಮೂನ್ ಎಂದರೇನೆಂದು ಗೊತ್ತಿಲ್ಲದೆ ಹನಿಮೂನ್ ಗೆ ಹೊರಟಿದ್ದಾರೆ ನಿವೇದಿತಾ' ಎಂದು ಕೆಲವರು ಗೇಲಿ ಮಾಡಿದ್ದರು.

ವಿವಾದಕ್ಕೂ ಗುರಿಯಾಗಿದ್ದ ಚಂದನ್-ನಿವೇದಿತಾ ಜೋಡಿ
ಫೆಬ್ರವರಿ 25 ರಂದು ಮೈಸೂರಿನಲ್ಲಿ ವಿವಾಹವಾಗಿದ್ದ ಈ ಜೋಡಿ ಬಿಗ್ ಬಾಸ್ ಸಮಯದಿಂದಲೂ ಕನ್ನಡಿಗರಿಗೆ ಪರಿಚಿತರು. ದಸರಾ ಸಂದರ್ಭದಲ್ಲಿ ವೇದಿಕೆ ಮೇಲೆಯೇ ಚಂದನ್ ಶೆಟ್ಟಿ ಮಾಡಿದ್ದ ಪ್ರೇಮ ನಿವೇದನೆ ವಿವಾದಕ್ಕೂ ಗುರಿಯಾಗಿತ್ತು.

ಆಮ್‌ಸ್ಟರ್ ಡ್ಯಾಂ ಯಾವುದಕ್ಕೆ ಪ್ರಖ್ಯಾತ
ಚಂದನ್ ಶೆಟ್ಟಿ-ನಿವೇದಿತಾ ಗೌಡ ಹನಿಮೂನ್ ಗೆ ಹೋಗಿರುವ ಆಮ್ಸ್ಟರ್‌ಡ್ಯಾಂ ಅನ್ನು ವಯಸ್ಕರ ನಗರ ಎಂದೂ ಕರೆಯುತ್ತಾರೆ. ಆಮ್‌ಸ್ಟರ್‌ಡ್ಯಾಂ ನಗರ ವೇಶ್ಯಾವಾಟಿಕೆಗೂ ಪ್ರಸಿದ್ಧ. ಜೊತೆಗೆ ಲೆಕ್ಕವಿಲ್ಲದಷ್ಟು ಕಾಫಿಶಾಪ್‌ಗಳು ನಗರದಲ್ಲಿವೆ ಗಾಂಜಾ ಮಾರಾಟ ಇಲ್ಲಿ ಅವ್ಯಾಹತ.


Click it and Unblock the Notifications











