ದುಂಡು ಮಲ್ಲಿಗೆ ನಿವೇದಿತಾ ಗೌಡ 'ಬೋಲ್ಡ್' ಅವತಾರಕ್ಕೆ ಪಡ್ಡೆಗಳು ವಿಲವಿಲ..!

ಚಿತ್ರರಂಗಕ್ಕೆ ಬರಬೇಕೆಂದು ಅನೇಕರು ಅಂದುಕೊಳ್ಳುತ್ತಾರೆ. ಪಡಬಾರದ ಕಷ್ಟವನ್ನೂ ಪಡುತ್ತಾರೆ. ಆದರೆ, ಇವರಲ್ಲಿ ಬಹುತೇಕರಿಗೆ ಅವಕಾಶ ಸಿಗಲ್ಲ. ಅವಕಾಶ ದೂರದ ಮಾತು ಬಹುತೇಕರ ಕಡೆ ಇಲ್ಲಿ ಅನೇಕರು ತಿರುಗಿಯೂ ಕೂಡ ನೋಡಲ್ಲ. ಆದರೆ ಇನ್ನು ಕೆಲವರಿಗೆ ಚಿತ್ರರಂಗ ರತ್ನಗಂಬಳಿಯನ್ನು ಹಾಸುತ್ತೆ. ಕೇವಲ ಚಿತ್ರರಂಗ ಮಾತ್ರವಲ್ಲ ಅನೇಕರ ಕಣ್ಣು ಇವರ ಮೇಲಿರುತ್ತೆ. ಇವರ ಹಾವ ಭಾವ ನಡೆ ಎಲ್ಲವೂ ಕೂಡ ಕ್ಷಣಾರ್ಧದಲ್ಲಿ ವೈರಲ್ ಆಗುತ್ತವೆ. ಇದಕ್ಕೆ ನಿವೇದಿತಾ ಗೌಡ ತಾಜಾ ಉದಾಹರಣೆ.

ಇನ್ನು ಆ ಕ್ಷಣದಲ್ಲಿ ಪ್ರೇಮದ ಅಮಲಿನಲ್ಲಿ ತೇಲುತ್ತಿದ್ದ ಚಂದನ್ ಶೆಟ್ಟಿ ಸುಮ್ಮನಿರಲಾರದೇ ಮೈಸೂರಿನ ಯುವ ದಸರಾದಲ್ಲಿ ಪ್ರಪೋಸ್ ಮಾಡಿದರು. ಈ ಮೂಲಕ ಕರುನಾಡಿನೆಲ್ಲೆಡೆ ಪ್ರಸಿದ್ಧರೂ ಆದರು. ಆದರೆ, ದುರಾದೃಷ್ಟವಶಾತ್ ಹೆಸರು-ಕೀರ್ತಿ ಮತ್ತು ಫ್ಯಾನ್ ಫಾಲೋವರ್ಸ್‌ ಹೆಚ್ಚಾದ ನಂತರ ಇದೇ ಚಂದನ್ ಶೆಟ್ಟಿಯನ್ನು ಎಡಗಾಲಿನಲ್ಲಿ ಒದ್ದ ನಿವೇದಿತಾ ಗೌಡ ಸದ್ಯ ವಿಚ್ಛೇದನವನ್ನು ಪಡೆದು ನೆಮ್ಮದಿಯಾಗಿದ್ದಾರೆ. ಏಕಾಂಗಿಯಾಗಿ ಪ್ರಪಂಚವನ್ನು ಸುತ್ತುತ್ತಿದ್ದಾರೆ.

Niveditha Gowda Chandan Shetty s ex-wife stuns netizens with her latest two-piece video

ಆದರೆ ಇದೇ ಸಮಯದಲ್ಲಿ ನಿವೇದಿತಾ ಗೌಡ ಅವರ ನಡಾವಳಿ ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ. ನಿವೇದಿತಾ ಗೌಡ ಅವರ ಬದಲಾದ ಜೀವನ ಶೈಲಿ ಮತ್ತು ಅವರ ಬಟ್ಟೆಯ ವಿರುದ್ಧ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಆದರೂ ನಿವೇದಿತಾ ಗೌಡ ಅವರದ್ದು ಡೋಂಟ್ ಕೇರ್ ವ್ಯಕ್ತಿತ್ವ. ಯಾರೇ ಕೂಗಾಡಲಿ ಸೋಶಿಯಲ್ ಮೀಡಿಯಾನೇ ಅಲ್ಲಾಡಲಿ ಎಂಬ ಮನೋಭಾವವ ಹೊಂದಿರುವ ನಿವೇದಿತಾ ಕಳೆದ ಹತ್ತು ಹದಿನೈದು ದಿನಗಳಿಂದ ಪಡ್ಡೆ ಹುಡುಗರನ್ನು ಕೆಣಕುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾ ಬರುತ್ತಿದ್ದಾರೆ. ಒಂದಾದ ಮೇಲೊಂದು ವಿಡಿಯೋಗಳನ್ನು ಹಂಚಿಕೊಂಡು ಸೋಶಿಯಲ್ ಮೀಡಿಯಾ ಪ್ರಪಂಚದಲ್ಲಿ ಟ್ರೆಂಡಿಂಗ್‌ನಲ್ಲಿದ್ದಾರೆ.

ಇಂಥಾ ನಿವೇದಿತಾ ಗೌಡ ಈಗ ತುಂಡುಡುಗೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಇನ್ನೊಮ್ಮೆ ತುಂಡೈಕ್ಳ ನಿದ್ದೆಗೆ ಕೊಳ್ಳಿ ಇಟ್ಟಿದ್ದಾರೆ. ಸಪೂರ ಸೊಂಟ ಬಳುಕಿಸಿ ಕಚಗಳಿ ಇಟ್ಟಿದ್ದಾರೆ. ಸದ್ಯ ನಿವೇದಿತಾ ಗೌಡ ಅವರ ಈ ಟೂ ಪೀಸ್ ವಿಡಿಯೋ ಇನ್ಸ್ಟಾಗ್ರಾಮ್‌ಗೆ ಬೆಂಕಿಯನ್ನು ಹಚ್ಚಿದೆ. ರಸಿಕರಿಗೆ ಹುಚ್ಚು ಹಿಡಿಸಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಹತ್ತು ಹಲವು ಅಭಿಪ್ರಾಯಗಳು ಕಣ್ಣಿಗೆ ಕಾಣುತ್ತವೆ. ಕೇವಲ ಎರಡು ಗಂಟೆಯಲ್ಲಿ ನಲವತ್ತು ನಾಲ್ಕು ಸಾವಿರಕ್ಕೂ ಅಧಿಕ ಜನರ ಗಮನವನ್ನು ಈ ವಿಡಿಯೋ ಸೆಳೆದಿದೆ.

ಇನ್ನು ಸಹಜವಾಗಿ ಈ ವಿಡಿಯೋ ಅನೇಕರ ಕಣ್ಣನ್ನು ಕೆಂಪಾಗಿಸಿದೆ. ಎಂದಿನಂತೆ ನಿವೇದಿತಾ ಗೌಡ ಅವರ ಈ ಅವತಾರಕ್ಕೆ ಸಾರ್ವತ್ರಿಕ ವಲಯದಲ್ಲಿ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಒಬ್ಬರು ಗೌಡ್ರೇ ಏನಿದು ನಿಮ್ಮ ಅವತಾರ ಎಂದು ಕೇಳಿದರೆ ಮತ್ತೊಬ್ಬರು ಈ ಸೆಲೆಬ್ರಿಟಿಗಳು ಎನ್ನಿಸಿಕೊಂಡವರೆಲ್ಲ , ಒಂದಷ್ಟು ಫಾಲೋವರ್ಸ್‌ಗಳನ್ನು ಇಟ್ಟುಕೊಂಡು ಒಂದೇ ರಾತ್ರಿಯಲ್ಲಿ ಹಣ ಸಂಪಾದಿಸುವ ದುರಾಸೆಯಲ್ಲಿ ಜನರಿಗೆ ಏನು ಸಂದೇಶ ಕೊಡುತ್ತಿದ್ದಾರೆ ? ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಮತ್ತೊಬ್ಬರು ನಿವೇದಿತಾ ಗೌಡ ಅವರ ಈ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸಿದ ಕಲರ್ಸ್ ಕನ್ನಡ ವಾಹಿನಿಗೆ ಧನ್ಯವಾದವನ್ನು ಹೇಳಿದ್ದಾರೆ. ಮತ್ತೊಬ್ಬರು ಸಾಲುತ್ತಿಲ್ಲವೇ ಸಾಲುತ್ತಿಲ್ಲವೇ ಹಾಡಿನ ಸಾಲನ್ನು ಬರೆದಿದ್ದಾರೆ. ಎಂದಿನಂತೆ ಇನ್ನು ಹಲವರು ಚಂದನ್ ಶೆಟ್ಟಿ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಕೆಟ್ಟ ಕಾಮೆಂಟ್‌ಗಳನ್ನು ಮಾಡುವ ಮೂಲಕ ನಿವೇದಿತಾ ಗೌಡ ಅವರನ್ನು ನಿಂದಿಸುತ್ತಿದ್ದಾರೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X