ಉಪೇಂದ್ರ ಹಾಡಿಗೆ 'ಮಸ್ತು, ಮಸ್ತಾ'ಗಿ ಕುಣಿದ ನಿವೇದಿತಾ: ಭೇಷ್ ಎಂದ ನೆಟ್ಟಿಗರು!

ನಿವೇದಿತಾ ಗೌಡ ಸಿನಿಮಾ ಒಂದು ಮಾಡಿಲ್ಲ ಎನ್ನುವುದು ಬಿಟ್ಟರೆ ಕಿರುತೆರೆ, ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿರುತ್ತಾರೆ. ಈ ಮೂಲಕ‌ ನಿವೇದಿತಾ ಸದಾ ತಮ್ಮ‌ ಅಭಿಮಾನಿ ಬಳಗದ ಜೊತೆಗೆ ಸಂಪರ್ಕದಲ್ಲಿ ಇರುತ್ತಾರೆ.

ಪ್ರತೀ ಬಾರಿ ನಿವೇದಿತಾ ಯಾವ ರೀತಿಯ ವಿಡಿಯೋಗಳನ್ನು ಹಾಕುತ್ತಾರೆ, ಯಾವ ರೀತಿ ಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ, ಯಾವ ಹಾಡಿಗೆ ಹೆಜ್ಜೆ ಹಾಕಿದ್ದಾರೆ ಎಂದು ಕುತೂಹಲದಿಂದ ಕಾಯುತ್ತಿರುತ್ತಾರೆ. ಹಾಗೆ ನಿವೇದಿತಾ ಕೂಡ ತಮ್ಮ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿ ಮಾಡದೇ, ವಿಡಿಯೋ, ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.

ನಿವೇದಿತಾ ವಿಡಿಯೋಗಳು ಸದಾ ಟ್ರೆಂಡ್ ಆಗುತ್ತಲೇ ಇರುತ್ತವೆ. ಸದ್ಯ ಕನ್ನಡದ ಮತ್ತೊಂದು ಹಾಡಿಗೆ ನಿವೇದಿತಾ ‌ಹೆಜ್ಜೆ ಹಾಕಿದ್ದಾರೆ. ಅದು ಕೂಡ ನಟ ಉಪೇಂದ್ರ ಅವರ ಹಿಟ್ ಹಾಡಿಗೆ ಮೈ ಚಳಿ ಬಿಟ್ಟು ಕುಣಿದಿದ್ದಾರೆ.

ಕಿರುತೆರೆಯಲ್ಲಿ ನಿವೇದಿತಾಗೆ ಸಿಕ್ಕಾಪಟ್ಟೆ ಬೇಡಿಕೆ!

ನಟಿ ನಿವೇದಿತಾ ಗೌಡ ಬಿಗ್ ಬಾಸ್ ಬಳಿಕ ಕಿರುತೆಯ ವಿವಿಧ ಕಾರ್ಯಕ್ರಮಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅದು ಯಾವ ಮಟ್ಟಿಗೆ ಅಂದರೆ, ನಿವೇದಿತಾ ಇಲ್ಲವಾದರೆ ಕಾರ್ಯಕ್ರಮಗಳಿಗೆ ಮೆರುಗು ಇರುವುದಿಲ್ಲ ಎನ್ನುವಷ್ಟರ ಮಟ್ಟಿಗೆ, ಬಹುತೇಕ ಎಲ್ಲಾ ಕಾರ್ಯಕ್ರಮಗಳಲ್ಲೂ ನಿವೇದಿತಾ ಭಾಗಿ ಆಗುತ್ತಾರೆ. ಇದಕ್ಕೆ ಕಾರಣ ಆಕೆಗೆ ಇರುವ ದೊಡ್ಡ ಅಭಿಮಾನಿ ಬಳಗ.‌

ಮಸ್ತು, ಮಸ್ತು ಹುಡುಗಿ ನಿವೇದಿತಾ ಗೌಡ!

ಮಸ್ತು, ಮಸ್ತು ಹುಡುಗಿ ನಿವೇದಿತಾ ಗೌಡ!

ಇತ್ತೀಚೆಗೆ ನಿವೇದಿತಾ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಈ ಮಸ್ತ್ ಡಾನ್ಸ್ ‌ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಟ ಉಪೇಂದ್ರ ಅವರ 'ಮಸ್ತು, ಮಸ್ತು ಹುಡುಗಿ ಬಂದ್ಲು' ಹಾಡಿಗೆ ನಿವೇದಿತಾ ಡ್ಯಾನ್ಸ್ ಮಾಡಿದ್ದಾರೆ. ಈ ಡಾನ್ಸ್ ವಿಡಿಯೋಗೆ ನಿವೇದಿತಾ ವಿಶೇಷ ಎಫೆಕ್ಟ್ ಕೊಟ್ಟಿದ್ದಾರೆ. ಆಕೆ ತೊಟ್ಟ ಉಡುಪು ಬಣ್ಣ, ಬಣ್ಣವಾಗಿ ಬದಲಾಗುತ್ತದೆ.‌‌ ಸದ್ಯ ಈ ಕಲರ್ ಫುಲ್ ವಿಡಿಯೋ ವೈರಲ್ ಲಿಸ್ಟ್ ಸೇರಿದೆ‌.

ರಾ...‌ರಾ... ರಕ್ಕಮ್ಮ ಅಂತ ಕುಣಿದ ಚಂದನ್, ನಿವೇದಿತಾ ಗೌಡ!

ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾದ ರಾ ರಾ ರಕ್ಕಮ್ಮ ಹಾಡಿಗೆ ಚಂದನ್ ಶೆಟ್ಟಿ ಜೊತೆಗೆ ಡ್ಯಾನ್ಸ್ ಮಾಡಿದ್ದರು ನಿವೇದಿತಾ. ನಿವೇದಿತಾ ಮತ್ತು ಚಂದನ್ ಶೆಟ್ಟಿ ರಾ.. ರಾ.. ರಕ್ಕಮ್ಮ ಎಂದ ಪರಿಗೆ ಅಭಿಮಾನಿಗಳು ಫಿದಾ ಆಗಿದ್ದರು.‌‌‌ ಈ ವಿಡಿಯೋ ಕೂಡ ಸಿಕ್ಕಾಪಟ್ಟೆ ‌ವೈರಲ್ ಆಗಿತ್ತು. ಹೀಗೆ ಈ ಜೋಡಿಯ ಹಲವಾರು ವಿಡಿಯೋಗಳು ವೈರಲ್ ಆಗಿವೆ.

ಮಿಸ್ಟ್ರೆಸ್ ಇಂಡಿಯಾ ಸ್ಪರ್ಧೆಯಲ್ಲಿ ನಿವೇದಿತಾ!

ನಿವೇದಿತಾ ಗೌಡ ಹೆಚ್ಚಾಗಿ ಕಿರುತೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಇತ್ತೀಚೆಗೆ ನಿವೇದಿತಾ ಹೊಸ ಸುದ್ದಿಯನ್ನು ಹಂಚಿಕೊಂಡಿದ್ದರು. ನಿವೇದಿತಾ ಮಿಸ್ಟ್ರೆಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗಿ ಆಗುವ ಬಗ್ಗೆ ಹೇಳಿಕೊಂಡಿದ್ದರು. ಜೊತೆಗೆ ಈ ಬಗ್ಗೆ ಪುಟ್ಟ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಕ್ಯಾಟ್ ವಾಕ್ ಮಾಡಿ ಎಲ್ಲರ ಮನಸೂರೆಗೊಂಡೊದ್ದರು ನಿವೇದಿತಾ ಗೌಡ.

More from Filmibeat

English summary
Niveditha Gowda Danced For Upendra Famous Song Mastu Mastu Hudugi Bandlu, Video Gone Viral On Social Media,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X