ಮನಸಾರೆ ನಿನ್ನ, ತೆಲುಗು ಹೀರೋ ಜೊತೆ ನಿವೇದಿತಾ ಗೌಡ ರೊಮ್ಯಾನ್ಸ್...!

ಸೋಶಿಯಲ್ ಮೀಡಿಯಾದಲ್ಲಿ ಬೆಳಗಾದರೆ ಆ ಸೆಲೆಬ್ರೆಟಿಗಳು ಹಂಗೆ, ಈ ಸೆಲೆಬ್ರೆಟಿಗಳು ಹಿಂಗೇ ಎನ್ನುವಂತಹ ಪೋಸ್ಟುಗಳು, ಸ್ಟಾರ್ ಸೆಲೆಬ್ರೆಟಿಗಳ ಕುರಿತಾದ ಟ್ರೋಲುಗಳು, ಕಿಂಡಲ್ಲುಗಳು ಬರೋದು ಕಾಮನ್ನು. ಸೆಲೆಬ್ರೆಟಿಗಳೆಂದ ಮೇಲೆ ಅಷ್ಟೂ ಮಾಡದೇ ಇದ್ದರೆ ಹೇಗೆ? ಇಂತಹ ಸಾಕಷ್ಟು ವಿವಾದಾತ್ಮಕ ವಿಚಾರಗಳಿಗೆ ಬಹುತೇಕ ಸೆಲೆಬ್ರೆಟಿಗಳು ಉರಿದು ಬೀಳುತ್ತಾರೆ. ಪ್ರತಿಕ್ರಿಯೆ ನೀಡುತ್ತಾರೆ. ಕೆಲವರಂತೂ ಕಾನೂನಿನ ಮೆಟ್ಟಿಲನ್ನು ಹತ್ತುತ್ತಾರೆ. ಇನ್ನೂ ಕೆಲವರು ಇಂತಹ ಯಾವ ಅನಗತ್ಯ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳದೇ ತಮ್ಮದೇ ಕೆಲಸಗಳಲ್ಲಿ ಬ್ಯುಸಿಯಾಗಿತ್ತಾರೆ. ಉದಾಹರಣೆಗೆ ನಿವೇದಿತಾ ಗೌಡ.

ಹೌದು, ಇಲ್ಲಿಯವರೆಗೆ ನಿವೇದಿತಾ ಗೌಡ ಅವರ ಮೇಲೆ ಅನೇಕರು ಕೆಂಡ ಕಾರಿದ್ದಾರೆ. ಚಂದನ್ ಶೆಟ್ಟಿ ಜೊತೆ ಇದ್ದಾಗಲೂ ಇವರನ್ನು ಬ್ಯೆಯುತ್ತಿದ್ದ ಅನೇಕರು, ಈಗ ಚಂದನ್ ಶೆಟ್ಟಿ ಅವರಿಂದ ನಿವೇದಿತಾ ದೂರವಾದ ನಂತರವೂ ಕೂಡ ತೆಗಳುವ ಕಾರ್ಯಕ್ರಮವನ್ನು ಮುಂದುವರೆಸಿದ್ದಾರೆ. ಇದಕ್ಕೆ ನಿವೇದಿತಾ ಗೌಡ ಅವರ ರೀಲ್ಸ್ ಹವ್ಯಾಸ ಪ್ರಮುಖ ಕಾರಣ ಅನ್ನುವುದು ಮತ್ತೆ ಪ್ರತೈಕವಾಗಿ ಹೇಳಬೇಕಿಲ್ಲ.

Niveditha Gowda ex-wife of Chandan Shetty is making her Telugu debut with the song Aalu Kallatho

ಆದರೂ ನಿವೇದಿತಾ ಗೌಡ ತಲೆ ಕೆಡಿಸಿಕೊಂಡಿಲ್ಲ. ರೀಲ್ಸ್ ಮಾಡುವುದನ್ನು ಕಡಿಮೆ ಮಾಡಿಲ್ಲ. ಬದಲಿಗೆ ಇನ್ನೂ ಹೆಚ್ಚೆಚ್ಚು ರೀಲ್ಸ್ ಮಾಡುತ್ತಿದ್ದಾರೆ. ಇಂಥಾ ನಿವೇದಿತಾ ಗೌಡ ಸದ್ಯಕ್ಕೆ ತಮ್ಮ ಕನ್ನಡದಿಂದ ತೆಲುಗುಗೆ ವಲಸೆ ಹೋಗುವ ಪ್ರಯತ್ನ ಮಾಡುತ್ತಿದ್ದಾರೆ. ಈ ಮೂಲಕ ಅಚ್ಚರಿಗೆ ದೂಡಿದ್ದಾರೆ. ಹೌದು, ಕನ್ನಡದಲ್ಲಿ ತಮ್ಮ ಮಾಜಿ ಪತಿ ಚಂದನ್ ಶೆಟ್ಟಿ ಜೊತೆ ಮುದ್ದು ರಾಕ್ಷಸಿ ಎಂಬ ಚಿತ್ರದಲ್ಲಿ ನಟಿಸಿರುವ ನಿವೇದಿತಾ ಗೌಡ ಸದ್ಯಕ್ಕೆ ತೆಲುಗು ಮತ್ತು ಕನ್ನಡದಲ್ಲಿ ನಿರ್ಮಾಣವಾದ ಆಡಿಯೋ ಆಲ್ಬಂ ಒಂದಕ್ಕೆ ಬಣ್ಣ ಹಚ್ಚಿದ್ದಾರೆ. ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ತಮ್ಮ ಆಡಿಯೋ ಆಲ್ಬಂನ ಫಸ್ಟ್ ಲುಕ್‌ನ ಹಂಚಿಕೊಂಡಿದ್ದಾರೆ.

ತೆಲುಗಿನಲ್ಲಿ ವಾಲು ಕಳ್ಳತಾ ಹೆಸರಿನಲ್ಲಿ ಹೊರ ಬರಲಿರುವ ಈ ಹಾಡಿಗೆ ಕನ್ನಡದಲ್ಲಿ ಮನಸಾರೆ ನಿನ್ನ ಎಂದು ಶೀರ್ಷಿಕೆ ಇಡಲಾಗಿದೆ. ಇನ್ನೂ ತೆಲುಗಿನಲ್ಲಿ ನಟನಾಗಿ, ಬರಹಗಾರನಾಗಿ, ಸಂಕಲನಕಾರನಾಗಿ ಇಷ್ಟೇ ಅಲ್ಲದೇ ಛಾಯಾಗ್ರಾಹಕರಾಗಿ ಕೂಡ ಗುರುತಿಸಿಕೊಂಡಿರುವ ಗೌರಿ ನಾಯ್ಡು ಇಲ್ಲಿ ನಿವೇದಿತಾ ಗೌಡ ಅವರ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ.

ಸದ್ಯಕ್ಕೆ ನಿವೇದಿತಾ ಗೌಡ ಅವರ ಈ ಹೊಸ ಪ್ರಯತ್ನವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಶುಭಾಶಯಗಳನ್ನು ಹೇಳುತ್ತಿದ್ದಾರೆ. ಆಲ್ ದಿ ಬೆಸ್ಟ್ ಎಂದು ಹೇಳಿದ್ದಾರೆ. ಇನ್ನೂ ಕೆಲವರು ವಿಚ್ಛೇದನದ ವಿಚಾರವನ್ನು ಎಳೆದು ತರುತ್ತಿದ್ದಾರೆ. ಕೊಳಕು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಚಂದನ್ ಶೆಟ್ಟಿ ಅವರಿಗೆ ಡಿವೋರ್ಸ್ ನೀಡಿದ್ದು ಇದೇ ಕಾರಣಕ್ಕಾ ಎಂದು ಪ್ರಶ್ನೆಯನ್ನು ಮಾಡುತ್ತಿದ್ದಾರೆ.

ಇನ್ನುಳಿದಂತೆ ನಿವೇದಿತಾ ಗೌಡ 'ವಾಲು ಕಳ್ಳತಾ' ಹಾಡಿನ ಮೂಲಕ ತೆಲುಗು ಚಿತ್ರರಂಗದ ಬಾಗಿಲನ್ನು ಬಡೆಯುತ್ತಿದ್ದಾರೆ. ಈ ಹಾಡು ಬಿಡುಗಡೆಯಾದ ನಂತರ ನಿವೇದಿತಾ ಗೌಡ ಅವರ ಅದೃಷ್ಟ ಖುಲಾಯಿಸಿ ತೆಲುಗು ಚಿತ್ರರಂಗ ಇವರಿಗೆ ರತ್ನಗಂಬಳಿಯನ್ನು ಹಾಕಿ ಸ್ವಾಗತ ಮಾಡುತ್ತಾ ಅನ್ನುವುದನ್ನು ಕಾದು ನೋಡಬೇಕಿದೆ.

ಈ ಆಡಿಯೋ ಆಲ್ಬಂ ಹೊರತು ಪಡಿಸಿದರೆ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಅಭಿನಯದ ಮುದ್ದು ರಾಕ್ಷಸಿ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಈ ಚಿತ್ರವನ್ನು ಪುನೀತ್ ಶ್ರೀನಿವಾಸ್ ಕಥೆ ಚಿತ್ರಕಥೆಯನ್ನು ಬರೆದು ನಿರ್ದೇಶಿಸಿದ್ದಾರೆ.ಮೋಹನ್ ಕುಮಾರ್ ಈ ಮುದ್ದು ರಾಕ್ಷಸಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇನ್ನೂ ಸೈಕೋ ಥ್ರಿಲ್ಲರ್ ಕಥಾಹಂದರ ಈ ಚಿತ್ರದ ಚಿತ್ರೀಕರಣ ಬಹುತೇಕ ಬೆಂಗಳೂರಿನಲ್ಲಿಯೇ ನಡೆದಿದೆ. ಎಂ ಎಸ್ ತ್ಯಾಗರಾಜ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಎ ಕರುಣಾಕರ್ ಚಿತ್ರದ ಛಾಯಾಗ್ರಹಣ ಮಾಡಿದ್ದಾರೆ. ಈ ವರ್ಷಾಂತ್ಯದಲ್ಲಿ ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ...!

More from Filmibeat

English summary
Niveditha Gowda, ex-wife of Chandan Shetty, is entering the Telugu industry with an album song titled 'Aalu Kallatho.' The song will be released simultaneously in Kannada under the title 'Manasare Ninna.' This romantic song features Gowri Naidu alongside Niveditha Gowda."
Read more about: niveditha gowda song sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X