For Quick Alerts
  ALLOW NOTIFICATIONS  
  For Daily Alerts

  ಮೈಸೂರಿನ ಯುವರಾಣಿಯಾಗಿ ಬದಲಾದ ನಿವೇದಿತಾ ಗೌಡ

  By Pavithra
  |
  ಮೈಸೂರಿನ ಯುವರಾಣಿ ಆಗಿ ಬದಲಾದ ನಿವೇದಿತಾ ಗೌಡ...!! | Filmibeat Kannada

  'ಬಿಗ್ ಬಾಸ್' ಎಂದ ತಕ್ಷಣ ಥಟ್ ಅಂತ ನೆನಪಿಗೆ ಬರುವುದು ನಿವೇದಿತಾ ಗೌಡ. ಆಕೆಯ ಮುಗ್ಧತೆ, ಸೌಂದರ್ಯ ಸಾಕಷ್ಟು ಜನರನ್ನು ಸೆಳೆದಿತ್ತು. ಮಾತಿನ ಶೈಲಿಗೆ ಅದೆಷ್ಟೋ ಜನರು ಮನಸೋತಿದ್ದರು. ಇದೇ ಕಾರಣದಿಂದ ನಿವೇದಿತಾ ಗೌಡ ಸಾಕಷ್ಟು ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದರು.

  ಕೇವಲ ಸಾಮಾನ್ಯ ನಜರು ಮಾತ್ರವಲ್ಲದೆ ಸೆಲಬ್ರೆಟಿಗಳು ಕೂಡ ನಿವೇದಿತಾ ಅವರನ್ನ ನೋಡಿ ಇಂಪ್ರೆಸ್ ಆಗಿದ್ದಾರೆ. ಬಿಗ್ ಬಾಸ್ ನಿವೇದಿತಾ ಎಂದರೆ ಚಿಕ್ಕ ಹುಡುಗಿ, ಡಬ್ ಸ್ಮ್ಯಾಷ್ ಮಾಡ್ತಾರೆ, ಮುದ್ದು ಮುದ್ದಾಗಿ ಮಾತಾಡುತ್ತಾರೆ. ಇಷ್ಟೇ ಅಂದುಕೊಂಡಿದ್ದವರಿಗೆ ನಿವೇದಿತಾ ಶಾಕ್ ಕೊಟ್ಟಿದ್ದಾರೆ.

  ನಿವೇದಿತಾ ಗೌಡ ಹುಟ್ಟುಹಬ್ಬವನ್ನು ಆಚರಿಸಿದ ಚಂದನ್ ಶೆಟ್ಟಿ ನಿವೇದಿತಾ ಗೌಡ ಹುಟ್ಟುಹಬ್ಬವನ್ನು ಆಚರಿಸಿದ ಚಂದನ್ ಶೆಟ್ಟಿ

  ನಾರ್ಮಲ್ ಗೆಟಪ್ ಬಿಟ್ಟು ಸಾಕಷ್ಟು ವರ್ಷಗಳ ಹಿಂದಕ್ಕೆ ಹೋಗಿ ಮೈಸೂರಿನ ಯುವರಾಣಿ ಅವತಾರದಲ್ಲಿ ಅಭಿಮಾನಿಗಳ ಮುಂದೆ ಪ್ರತ್ಯಕ್ಷರಾಗಿದ್ದಾರೆ. ಏನಿದು ಯುವರಾಣಿ ಸ್ಟೋರಿ ಅಂತೀರಾ.. ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ..

  ಮೈಸೂರಿನ ಯುವರಾಣಿಯಾದ ನಿವೇದಿತಾ ಗೌಡ

  ಮೈಸೂರಿನ ಯುವರಾಣಿಯಾದ ನಿವೇದಿತಾ ಗೌಡ

  ನಿವೇದಿತಾ ಗೌಡ ಈಗ ಮೈಸೂರಿನ ಯುವರಾಣಿಯಾಗಿ ಬದಲಾಗಿದ್ದಾರೆ. ಇತ್ತೀಚಿಗಷ್ಟೇ ಹೊಸ ರೀತಿಯ ಫೋಟೋ ಶೂಟ್ ನಲ್ಲಿ ನಿವೇದಿತಾ ಗೌಡ ಕಾಣಿಸಿಕೊಂಡಿದ್ದು ಯುವರಾಣಿ ಲುಕ್ ನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

  ಹೊಸ ಲುಕ್ ನಲ್ಲಿ ನಿವೇದಿತಾ ಗೌಡ

  ಹೊಸ ಲುಕ್ ನಲ್ಲಿ ನಿವೇದಿತಾ ಗೌಡ

  ಸನ್ ಬರ್ಸ್ಟ್ ಸಂಸ್ಥೆಯ ಸಂದೀಪ್ ಎಂ ವಿ ಹಾಗೂ ಪ್ರೀತಂ ಹೊಸ್ಮನೆ ಇಬ್ಬರು ಹೊಸ ರೀತಿಯ ಲೈಫ್ ಸ್ಟೈಲ್ ಫೋಟೋ ಶೂಟ್ ಅನ್ನು ಆಗಾಗ ಮಾಡುತ್ತಿರುತ್ತಾರೆ. ಈ ಸಲ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಅರಮನೆ, ಯುವರಾಣಿ ಇಂತಹ ವಿಚಾರವಾಗಿ ಫೋಟೋ ಶೂಟ್ ಮಾಡಬೇಕು ಎಂದು ನಿರ್ಧಾರ ಮಾಡಿ ಮೈಸೂರಿನ ಲಲಿತ್ ಮಹಲ್ ನಲ್ಲಿ ನಿವೇದಿತಾ ಗೌಡ ಅವರ ಫೋಟೋ ಶೂಟ್ ಮಾಡಿದ್ದಾರೆ.

  ಸಂಸ್ಕೃತಿ-ಪರಂಪರೆಯನ್ನು ನೆನಪಿಸುವ ಫೋಟೋ

  ಸಂಸ್ಕೃತಿ-ಪರಂಪರೆಯನ್ನು ನೆನಪಿಸುವ ಫೋಟೋ

  ಫೋಟೋ ಶೂಟ್ ನಲ್ಲಿ ಬಿಳಿ ಹಾಗೂ ಕೆಂಪು ಬಣ್ಣದ ಗೌನ್ ಗಳಲ್ಲಿ ನಿವೇದಿತಾ ಗೌಡ ಮಿಂಚುತ್ತಿದ್ದು ಫೋಟೋಗಳನ್ನ ನೋಡಿದರೆ ಯಾರು ಕೂಡ ನಿವೇದಿತಾ ಗೌಡ ಅವರನ್ನು ಗುರುತು ಹಿಡಿಯುವುದಿಲ್ಲ.

  ಗಮನ ಸೆಳೆಯುತ್ತಿದೆ ಫೋಟೋಗಳು

  ಗಮನ ಸೆಳೆಯುತ್ತಿದೆ ಫೋಟೋಗಳು

  ನಿವೇದಿತಾ ಗೌಡ ಅವರ ಫೋಟೋಗಳು ನೋಡುಗರ ಗಮನ ಸೆಳೆಯುತ್ತಿದೆ. ಮೈಸೂರಿನ ಅರಮನೆ ಹಾಗೂ ಯುವರಾಣಿಯ ಲುಕ್ ನಿವೇದಿತಾ ಅವರಿಗೆ ತುಂಬಾ ಚೆನ್ನಾಗಿ ಹೊಂದುಕೊಂಡಿದೆ. ಸದ್ಯ ಇನ್‌ಸ್ಟಾಗ್ರಾಂ ಹಾಗೂ ಫೇಸ್ ಬುಕ್ ನಲ್ಲಿ ಫೋಟೋ ವೈರಲ್ ಆಗಿವೆ.

  English summary
  Big Boss contestant Nivedita Gowda has shot a new photo shoot. Niveditha Gowda has appeared in The princess Look at a photo shoot.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X