'ಕಿಕಿ' ಡ್ಯಾನ್ಸ್ ಮಾಡಿದ್ದೇಕೆ ಎಂದು ಸ್ಪಷ್ಟನೆ ನೀಡಿದ ನಿವೇದಿತಾ ಗೌಡ

By Bharath Kumar

ಕಳೆದ ಎರಡ್ಮೂರು ದಿನಗಳಿಂದ ಕಿಕಿ ಚಾಲೆಂಜ್ ಎನ್ನುವುದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಬಾಲಿವುಡ್ ತಾರೆಯರು ಸೇರಿದಂತೆ ಹಲವು ಸೆಲೆಬ್ರಿಟಿಗಳು ಈ ಕಿಕಿ ಡ್ಯಾನ್ಸ್ ಮಾಡಿ ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋವನ್ನ ಪೋಸ್ಟ್ ಮಾಡಿದ್ದಾರೆ.

ಇದು ಅಪಾಯಕಾರಿ ಆಟ, ಇದನ್ನ ಮಾಡುವುದು ಒಳ್ಳೆಯದಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯ. ಇದರ ಅರಿವಿಲ್ಲದೇ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರು ಕಿಕಿ ಡ್ಯಾನ್ಸ್ ಮಾಡಿ ವಿಡಿಯೋ ಪೋಸ್ಟ್ ಮಾಡಿದ್ದರು. ಇದು ಸಹಜವಾಗಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿತ್ತು.

ಬಳಿಕ ಈ ಸಂಬಂಧ ಕೆಲವು ಸಂಘಟನೆಗಳು ನಿವೇದಿತಾ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಿವೆ. ಇಷ್ಟೆಲ್ಲ ಬೆಳವಣಿಗೆಯ ನಂತರ ನಿವೇದಿತಾ ಗೌಡ ಕಿಕಿ ಡ್ಯಾನ್ಸ್ ಮಾಡಿದ್ದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಡ್ಯಾನ್ಸ್ ಯಾಕೆ ಮಾಡಿದೆ ಎಂದು ಹೇಳಿದ್ದಾರೆ. ಮುಂದೆ ಓದಿ...

ಬ್ಯಾನ್ ಮಾಡಿರುವ ಬಗ್ಗೆ ಗೊತ್ತಾಗಲಿಲ್ಲ

ಬ್ಯಾನ್ ಮಾಡಿರುವ ಬಗ್ಗೆ ಗೊತ್ತಾಗಲಿಲ್ಲ

''ನನಗೆ ಅದು ಬ್ಯಾನ್ ಆಗಿದೆ ಎಂಬುದು ನನಗೆ ಗೊತ್ತಿದ್ದರೇ ನಾನು ಮಾಡುತ್ತಿರಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸುಮಾರು ವಿಡಿಯೋಗಳು ಬರ್ತಿದೆ. ನೋಡಿದಾಗ, ಚೆನ್ನಾಗಿದೆ ನಾನು ಮಾಡೋಣ ಅಂತಾನೇ ಮಾಡಿದ್ದು. ನಾನು ಯಾರಿಗೂ ಪ್ರಚೋದನೆ ನೀಡಿಲ್ಲ'' ಎಂದಿದ್ದಾರೆ.

ನಾನು ಯಾರಿಗೂ ಕೇಳಿಲ್ಲ

ನಾನು ಯಾರಿಗೂ ಕೇಳಿಲ್ಲ

''ನನಗೆ ಇಷ್ಟ ಆಯ್ತು ಅಂತ ನಾನು ಮಾಡಿದೆ ಅಷ್ಟೇ. ಆದ್ರೆ, ನಾನು ಯಾರಿಗೂ ನನ್ನ ರೀತಿ ಮಾಡಿ, ಡ್ಯಾನ್ಸ್ ಮಾಡಿ, ಚಾಲೆಂಜ್ ತಗೊಳ್ಳಿ ಅಂತ ನಾನು ಎಲ್ಲಿಯೂ ಹೇಳಿಲ್ಲ'' ಎಂದು ಸಮರ್ಥನೆ ಮಾಡಿಕೊಂಡಿದ್ದರು.

ಎಚ್ಚೆತ್ತುಕೊಂಡು ಡಿಲೀಟ್ ಮಾಡಿದೆ

ಎಚ್ಚೆತ್ತುಕೊಂಡು ಡಿಲೀಟ್ ಮಾಡಿದೆ

''ಇದನ್ನ ಪೋಸ್ಟ್ ಮಾಡಿದ ಮೇಲೆ ನನಗೆ ಕೆಲವರು ಕಾಲ್ ಮಾಡಿ ಇದು ತಪ್ಪು ಅಂತ ಹೇಳಿದ್ರು, ನಾನು ಸಡನ್ ಆಗಿ ಅದನ್ನ ತೆಗೆದೆ. ನನ್ನಿಂದ ಯಾರೂ ಸ್ಫೂರ್ತಿಯಾಗಬಾರದು ಅಂತ. ನಾನು ಮಾಡಬೇಕಾದರೇ ಮುಂಜಾಗ್ರತೆ ಕ್ರಮ ವಹಿಸಿನೇ ಮಾಡಿದ್ದು''.

ದೂರು ಬಗ್ಗೆ ನನಗೆ ಗೊತ್ತಿಲ್ಲ

ದೂರು ಬಗ್ಗೆ ನನಗೆ ಗೊತ್ತಿಲ್ಲ

''ನನಗೆ ಈ ಬಗ್ಗೆ ದೂರು ಆಗಿದೆ ಎನ್ನವುದರ ಬಗ್ಗೆ ಗೊತ್ತಿಲ್ಲ. ಅದರಿಂದ ಏನಾಗುತ್ತೆ ಎನ್ನುವುದು ಕೂಡ ನನಗೆ ಗೊತ್ತಿಲ್ಲ. ನನ್ನಿಂದ ಯಾರಿಗೂ ತೊಂದರೆ ಆಗಿಲ್ಲ, ಬೇರೆಯವರಿಂದ ನನಗೂ ತೊಂದರೆಯಾಗಿಲ್ಲ. ಅಪಾಯ, ಯಾರಿಗೂ ಏನೂ ಆಗಬಾರದು ಅಂತ ಜಾಗೃತಿ ಮೂಡಿಸ್ತಿದ್ದಾರೆ, ನನ್ನಿಂದ ಆಗಿದ್ದ ತಪ್ಪನ್ನ ನಾನು ಡಿಲೀಟ್ ಮಾಡಿ ಸರಿಪಡಿಸಿಕೊಂಡಿದ್ದೇನೆ'' ಎಂದು ನಿವೇದಿತಾ ಗೌಡ ಮಾಧ್ಯಮದ ಜೊತೆ ಮಾತನಾಡಿದ್ದಾರೆ.

ಏನಿದು ಕಿಕಿ ಚಾಲೆಂಜ್.?

ಏನಿದು ಕಿಕಿ ಚಾಲೆಂಜ್.?

ಖ್ಯಾತ ಸಂಗೀತಗಾರ ಡ್ರೇಕ್ ರವರ ಹೊಸ ಹಾಡು 'ಕಿಕಿ ಡು ಯು ಲವ್ ಮಿ..' (ಇನ್ ಮೈ ಫೀಲಿಂಗ್ಸ್) ತಿಂಗಳ ಹಿಂದೆ ಬಿಡುಗಡೆ ಆಗಿ, ಬಹು ಜನಪ್ರಿಯತೆ ಪಡೆದಿದೆ. ಅಸಲಿಗೆ, 'ಕಿಕಿ ಚಾಲೆಂಜ್' ಶುರುವಾಗಿದ್ದು ಕೂಡ ಒಂದು ತಿಂಗಳ ಹಿಂದೆಯೇ. 'ಕಿಕಿ ಡು ಯು ಲವ್ ಮಿ..' ಹಾಡಿಗೆ ಕಾಮಿಡಿಯನ್ ಶಿಗ್ಗಿ ನಡು ಬೀದಿಯಲ್ಲಿ ಡ್ಯಾನ್ಸ್ ಮಾಡಿ, ವಿಡಿಯೋನ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದರು. ಇಲ್ಲಿಂದಲೇ, 'ಕಿಕಿ ಚಾಲೆಂಜ್'/'ಇನ್ ಮೈ ಫೀಲಿಂಗ್ಸ್' ಚಾಲೆಂಜ್ ಶುರುವಾಗಿದ್ದು.! ಕಾಡ್ಗಿಚ್ಚಿನಂತೆ ಸೋಷಿಯಲ್ ಮೀಡಿಯಾದಲ್ಲಿ 'ಕಿಕಿ ಚಾಲೆಂಜ್' ಹಬ್ಬಿತು. ಚಲಿಸುತ್ತಿರುವ ಕಾರಿನಿಂದ ಇಳಿದು, ಕಾರಿನ ಸ್ಪೀಡ್ ಗೆ ತಕ್ಕ ಹಾಗೆ 'ಕಿಕಿ ಡು ಯು ಲವ್ ಮಿ...' ಹಾಡಿಗೆ ಡ್ಯಾನ್ಸ್ ಮಾಡಿ ನಂತರ ಮತ್ತೆ ಕಾರಿನೊಳಗೆ ಜಿಗಿಯುವ ಅಪಾಯಕಾರಿ ಸವಾಲು ವೈರಲ್ ಆಗಲು ಆರಂಭವಾಯ್ತು. 'ಕಿಕಿ ಚಾಲೆಂಜ್'ನ ನಡು ರಸ್ತೆಯಲ್ಲಿ ಸ್ವೀಕರಿಸಿ ಎಷ್ಟೋ ಮಂದಿ ಅಪಘಾತಕ್ಕೀಡಾಗಿದ್ದಾರೆ. ಕೈ-ಕಾಲು ಮುರಿದುಕೊಂಡಿದ್ದಾರೆ, ತಲೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ದಿನದಿಂದ ದಿನಕ್ಕೆ 'ಕಿಕಿ ಚಾಲೆಂಜ್'ನಿಂದ ಅವಾಂತರಗಳು ಹೆಚ್ಚಾದಂತೆ ಕೆಲವೆಡೆ ಬ್ಯಾನ್ ಮಾಡಲಾಗಿದೆ.

More from Filmibeat

English summary
Earlier, Complaint filed against Niveditha Gowda for accepting Dangerous KiKi Challenge. now niveditha gowda has given clarification about kiki challenge.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X