ಅಪರಿಚಿತ ವ್ಯಕ್ತಿಯ ಕೋರಿಕೆ ಮೇರೆಗೆ ಪಬ್‌ನಲ್ಲಿ ಮಾದಕವಾಗಿ ಡ್ಯಾನ್ಸ್ ಮಾಡಿದ ನಿವೇದಿತಾ ಗೌಡ, ಫೋಟೊಗಳಂತೂ ಬೆಂಕಿ..!
ಹೆಸರು ಸಂಪಾದಿಸುವುದು ಕಷ್ಟ. ಆದರೆ ಅದೇ ಹೆಸರನ್ನು ಹಾಳು ಮಾಡಿಕೊಳ್ಳುವುದು ತುಂಬಾನೇ ಸುಲಭ. ಇದಕ್ಕೆ ನಿವೇದಿತಾ ಗೌಡ ಸದ್ಯದ ಅತ್ಯುತ್ತಮ ಉದಾಹರಣೆ. ಹೌದು, ಮೊದಲೆಲ್ಲ ಬಾರ್ಬಿ ಡಾಲ್, ನಿವ್ವಿ ಎಂದು ಪ್ರೀತಿಯಿಂದ ಕರೆಯುತ್ತಿದ್ದ ಜನ ಇವತ್ತು ನಿವೇದಿತಾ ಗೌಡ ಅವರ ಬಗ್ಗೆ ಇಲ್ಲ ಸಲ್ಲದ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಮನಸೋ ಇಚ್ಛೆ ಕಾಮೆಂಟ್ ಮಾಡುತ್ತಿದ್ದಾರೆ.
ಈ ಅಪಾಯಕಾರಿ ಬೆಳವಣಿಗೆಗೆ ನಿವೇದಿತಾ ಗೌಡ ಅವರಲ್ಲದೇ ಬೇರೆ ಯಾರು ಕಾರಣ ಅಲ್ಲ. ಆದರೂ ಕೂಡ ನಿವೇದಿತಾ ಗೌಡಗೆ ಈ ವಿಚಾರದ ಅರಿವು ಆಗುತ್ತಿಲ್ಲ. ಬದಲಿಗೆ ದಿನದಿಂದ ದಿನಕ್ಕೆ ನಿವೇದಿತಾ ಗೌಡ ಅವರ ಬಟ್ಟೆಯ ಸೈಜ್ ಇನ್ನೂ ಕಡಿಮೆಯಾಗುತ್ತಿದೆ. ಇದಕ್ಕೆ ವೈರಲ್ ಆದ ಮತ್ತೊಂದು ವಿಡಿಯೋ ಮತ್ತೊಂದು ಸಾಕ್ಷಿ.

ಹೌದು, ಸೋಶಿಯಲ್ ಮೀಡಿಯಾದಲ್ಲಿ ನಿವೇದಿತಾ ಗೌಡ ಅವರ ಹೊಸದೊಂದು ವಿಡಿಯೋ ವೈರಲ್ ಆಗಿದೆ. ವಿಶೇಷ ಅಂದರೆ ವೈರಲ್ ಆದ ಈ ವಿಡಿಯೋವನ್ನು ನಿವೇದಿತಾ ಗೌಡ ಹಂಚಿಕೊಂಡಿಲ್ಲ. ಬದಲಿಗೆ ರಾಕೇಶ್ ಎಂಬ ವ್ಯಕ್ತಿ ನಿವೇದಿತಾ ಗೌಡ ಅವರ ವಿಡಿಯೋ ಹಂಚಿಕೊಂಡಿದ್ದಾರೆ. ರಸ್ತೆಯಲ್ಲಿ ಓಡಾಡುವ ಹುಡುಗಿಯರನ್ನು ಮಾತನಾಡಿಸುವುದು ಅವರ ಅಪ್ಪಣೆ ಪಡೆದು ಅವರ ಫೋಟೊಗಳನ್ನು ತೆಗೆಯುವುದೇ ಇವರ ಫುಲ್ ಟೈಮ್ ಕಾಯಕ.
ಇಂಥಾ ಹವ್ಯಾಸ ಮತ್ತು ಅಭ್ಯಾಸ ಹೊಂದಿರುವ ರಾಕೇಶ್ ಕಣ್ಣಿಗೆ ಪಬ್‌ನಲ್ಲಿ ಕುಂತಿದ್ದ ನಿವೇದಿತಾ ಗೌಡ ಬಿದ್ದಿದ್ದಾರೆ. ಕೂಡಲೇ ತಡ ಮಾಡದ ರಾಕೇಶ್ ಎಲ್ಲರಿಗೆ ಕೇಳುವಂತೆ ನಿಮ್ಮ ಜೊತೆ ಮಾತನಾಡಬಹುದಾ ಎಂಬ ಪ್ರಶ್ನೆಯನ್ನು ಕೇಳಿದ್ಧಾರೆ. ಇದಕ್ಕೆ ನಿವೇದಿತಾ ಎಷ್ಟೊತ್ತಾಗುತ್ತೆ ಎಂದು ಕೇಳಿದ್ದಾರೆ. ಅದಕ್ಕೆ ರಾಕೇಶ್ ಐದು ನಿಮಿಷ ಎಂಬ ಉತ್ತರ ನೀಡಿದ್ದಾರೆ.
ಹೀಗೆ ಶುರುವಾಗುವ ಮಾತುಕಥೆಯಲ್ಲಿ ನಿವೇದಿತಾ ಗೌಡ ತಾವು ಮೈಸೂರಿನವರು ಎಂದು ಹೇಳುತ್ತಾರೆ. ತಮ್ಮ ಹಿನ್ನೆಲೆ-ದುಡಿಮೆಯ ಮಾರ್ಗವನ್ನೆಲ್ಲ ಹೇಳಿಕೊಳ್ಳುತ್ತಾರೆ. ಆ ನಂತರ ನಿಮ್ಮ ಇಷ್ಟದ ಜಾಗ ಯಾವುದು ಎಂದು ಕೇಳಿದಾಗ ನಿವೇದಿತಾ ಗೌಡ ಪಬ್‌ವೊಂದರ ಹೆಸರನ್ನು ಹೇಳುತ್ತಾರೆ. ಇದಕ್ಕೆ ಈ ಪಬ್ ಇಷ್ಟವಾಗಲು ಕಾರಣವೇನು ಎಂದು ರಾಕೇಶ್ ಮರು ಪ್ರಶ್ನೆ ಮಾಡಿದಾಗ ಫೋಟೊ ಚೆನ್ನಾಗಿ ತೆಗೆದುಕೊಳ್ಳಬಹುದು ಡ್ಯಾನ್ಸ್ ಕೂಡ ಆರಾಮಾಗಿ ಮಾಡಬಹುದು, ಡ್ಯಾನ್ಸ್ ಪ್ಲೋರ್ ಅಷ್ಟು ದೊಡ್ಡದಾಗಿದೆ ಎಂದು ಹೇಳುತ್ತಾರೆ. ಇಷ್ಟಕ್ಕೆ ಸುಮ್ಮನಾಗದ ನಿವೇದಿತಾ ಆ ನಂತರ ಡ್ಯಾನ್ಸ್ ಪ್ಲೋರ್‌ನಲ್ಲಿ ಮಾದಕವಾಗಿ ಹೆಜ್ಜೆಯನ್ನು ಕೂಡ ಹಾಕಿದ್ದಾರೆ. ಸಾಲದಕ್ಕೆ ಅಪರಿಚತ ವ್ಯಕ್ತಿಯಾದ ರಾಕೇಶ್ ಅವರ ಕೋರಿಕೆಯ ಮೇರೆಗೆ ಅವರ ಕ್ಯಾಮರಾಗೆ ಬೋಲ್ಡ್ ಫೋಸ್‌ಗಳನ್ನು ಕೂಡ ನೀಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವೈರಲ್ ಆದ ವಿಡಿಯೋಗೆ ಹಲವು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಎಂದಿನಂತೆ ಪರ ವಿರೋಧದ ಚರ್ಚೆ ನಡೆಯುತ್ತಿದೆ. ಕೆಲವರು ನಿವೇದಿತಾ ಗೌಡ ಅವರನ್ನು ವಹಿಸಿಕೊಂಡು ಮಾತನಾಡುತ್ತಿದ್ದಾರೆ. ಇನ್ನು ಕೆಲವರು ಗುರುತು ಪರಿಚಯ ಇಲ್ಲದ ವ್ಯಕ್ತಿಯ ಜೊತೆ ಇಷ್ಟೊಂದು ಸಲುಗೆಯಿಂದ ನಿವೇದಿತಾ ಗೌಡ ವರ್ತಿಸಬಾರದಿತ್ತು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಮತ್ತೂ ಕೆಲವರು ನಿವೇದಿತಾ ಗೌಡ ಅವರನ್ನು ಮಾತನಾಡಿಸಿ ಅವರ ಫೋಟೊಗಳನ್ನು ತೆಗೆದ ರಾಕೇಶ್ ಅವರ ಜಾತಕವನ್ನು ಇಂಟರ್‌ನೆಟ್‌ನಲ್ಲಿ ಹುಡುಕುತ್ತಿದ್ದಾರೆ. ಇದರ ನಡುವೆ ರಾಕೇಶ್ ಮೊದಲಿಂದ ನಿವೇದಿತಾ ಗೌಡ ಅವರಿಗೆ ಪರಿಚಯ ಹಾಗಾಗಿಯೇ ವಿಡಿಯೋ ರೆಕಾರ್ಡಿಂಗ್‌ಗೆ ನಿವೇದಿತಾ ಒಪ್ಪಿದ್ದಾರೆ ಎನ್ನುವ ವಾದವನ್ನು ಕೆಲವರು ಮಾಡುತ್ತಿದ್ದಾರೆ. ಆದರೆ ಖುದ್ದು ರಾಕೇಶ್ ಈ ವಿಡಿಯೋಗೆ ಯೂಟ್ಯೂಬ್‌ನಲ್ಲಿ Approached a Stranger for portraits ಎಂಬ ಟೈಟಲ್ ನೀಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ Spotted this girl at TOCA Brigade Road ಎಂದು ಶೀರ್ಷಿಕೆ ನೀಡಿದ್ದಾರೆ. ಹೀಗಾಗಿ ತೀರ್ಮಾನಕ್ಕೆ ಬರುವುದು ಕಷ್ಟವೆನ್ನುವ ಮಾತು ಕೂಡ ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ.


Click it and Unblock the Notifications











