ಯುವ ದಸರಾದಲ್ಲಿ ಚಂದನ್ ಎಡವಟ್ಟು : ನಿವೇದಿತಾ ತಾಯಿ ಹೇಳಿದ್ದೇನು?

Recommended Video

ದಸರಾ ನೋಡಲು ಬಂದ ಅಭಿಮಾನಿಗಳಿಗೆ ಶಾಕ್ ನೀಡಿದ ಚಂದನ್ ಶೆಟ್ಟಿ | FILMIBEAT KANNADA

ಬಿಗ್ ಬಾಸ್ ಪ್ರೇಮ ಪಕ್ಷಿಗಳಾದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಕಾರ್ಯ ಇದೀಗ ವಿರೋಧಕ್ಕೆ ಕಾರಣವಾಗಿದೆ. ಯುವ ದಸರಾ ಕಾರ್ಯಕ್ರಮದಲ್ಲಿ ಪ್ರೇಮ ನಿವೇದನೆ ಮಾಡಿ, ರಾಕ್ ಸ್ಟಾರ್ ಚಂದನ್ ಎಡವಟ್ಟು ಮಾಡಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಚಂದನ್ ಶೆಟ್ಟಿ ಲವ್ ಪ್ರಪೋಸ್ ಗೆ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ನಾಡ ಹಬ್ಬದ ವೇದಿಕೆಯನ್ನು ಖಾಸಗಿ ಕಾರ್ಯಕ್ಕೆ ಬಳಸಿಕೊಂಡ ಚಂದನ್ ಹಾಗೂ ನಿವೇದಿತಾ ಮೇಲೆ ನೆಟ್ಟಿಗರು ಕೆಂಗಣ್ಣು ಬಿಟ್ಟಿದ್ದಾರೆ.

ಮೈಸೂರು ಉಸ್ತುವಾರಿ ಸಚಿವ ಸೋಮಣ್ಣ ಕೂಡ ಈ ಈ ಬಗ್ಗೆ ಮಾತನಾಡಿದ್ದು, ''ಇದು ಬುದ್ದಿ ಇಲ್ಲದ ಜನ ಮಾಡುವ ಕೆಲಸ. ಹುಡುಗಾಟ ಅಲ್ಲ. ಅವರು ಮಾಡಿರುವುದು ಅಪರಾಧ.'' ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇದೀಗ ಈ ಘಟನೆಗಳ ಬಗ್ಗೆ ನಿವೇದಿತಾ ತಾಯಿ ಹೇಮ ರಮೇಶ್ ಸುದ್ದಿ ವಾಹಿನಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದು ಎಂಗೇಜ್ ಮೆಂಟ್ ಅಲ್ಲ..

ಇದು ಎಂಗೇಜ್ ಮೆಂಟ್ ಅಲ್ಲ..

ನಿವೇದಿತಾ ಕೈಗೆ ಚಂದನ್ ಉಂಗುರ ತೊಡಿಸಿದ್ದಾರೆ. ಆದರೆ, ಇದು ಎಂಗೇಜ್ ಮೆಂಟ್ ಅಲ್ಲ.. ಎಂದು ನಿವೇದಿತಾ ತಾಯಿ ಹೇಳಿದ್ದಾರೆ. ''ನಿನ್ನೆ ನಡೆದ ಘಟನೆ ತಮ್ಮಗೂ ಮುಂಚೆ ತಿಳಿದಿರಲಿಲ್ಲ. ನಮಗೂ ಸರ್ ಪೈಸ್ ಆಗಿದ್ದು, ಅಲ್ಲಿಯೇ ಗೊತ್ತಾಗಿದೆ.'' ಎಂದು ಪ್ರತಿಕ್ರಿಯೆ ನೀಡಿದ್ದಾರೆ. ವೇದಿಕೆ ಮೇಲೆ ನಡೆದದ್ದು, ಲವ್ ಪ್ರಪೋಸ್ ಹೊರತು ನಿಶ್ಚಿತಾರ್ಥ ಅಲ್ಲ ಎನ್ನುವುದು ಅವರ ಮಾತು.

ಜನರು ಕೂಡ ಇಷ್ಟ ಪಟ್ಟಿದ್ದಾರೆ

ಜನರು ಕೂಡ ಇಷ್ಟ ಪಟ್ಟಿದ್ದಾರೆ

''ಯುವ ದಸರಾ ತುಂಬ ಸಂಭ್ರಮಪಡುವ ಜಾಗ. ಅಲ್ಲಿ ನಿವೇದಿತಾಗೆ ಚಂದನ್ ಪ್ರಪೋಸ್ ಮಾಡಿದ್ದು, ಖುಷಿ ನೀಡಿದೆ.'' ಎನ್ನುವುದು ನೀವೇದಿತಾ ತಾಯಿಯ ಮಾತಾಗಿದೆ. ನಿವೇದಿತಾಗೆ ಚಂದನ್ ಪ್ರೇಮ ನಿವೇದನೆ ಮಾಡಿದಾಗ, ಕಾರ್ಯಕ್ರಮ ನೋಡುತ್ತಿದ್ದ ಜನರು ಕೂಡ ಪ್ರತಿಕ್ರಿಯೆ ನೀಡಿದರು. ಇದನ್ನು ಗಮನಿಸಿರುವ ನಿವೇದಿತಾ ತಾಯಿ ಜನರಿಗೂ ಇದು ಇಷ್ಟವಾಗಿದೆ ಎಂದಿದ್ದಾರೆ. ಅಲ್ಲದೆ, ಎಷ್ಟೊಂದು ಫೋನ್ ಕರೆಗಳು ಕೂಡ ಬರುತ್ತಿವೆಯಂತೆ.

ಎರಡು ಕುಟುಂಬದ ನಡುವೆ ಮಾತುಕತೆ ಆಗಿದೆ

ಎರಡು ಕುಟುಂಬದ ನಡುವೆ ಮಾತುಕತೆ ಆಗಿದೆ

''ಮೊದಲು ಚಂದನ್ ಹಾಗೂ ನಿವೇದಿತಾ ಲವ್ ಮಾಡುತ್ತಿರುವ ವಿಷಯ ಹೇಳಿರಲಿಲ್ಲ. ಬಿಗ್ ಬಾಸ್ ನಂತರ ಇಬ್ಬರು ಕುಟುಂಬದವರು ಈ ಬಗ್ಗೆ ಮಾತನಾಡಿದ್ವಿ. ಆದರೆ, ನಮ್ಮ ನಡುವೆ ಇನ್ನು ಅಂತಿಮ ನಿರ್ಧಾರ ಆಗಿಲ್ಲ.'' ಎನ್ನುವುದು ನಿವೇದಿತಾ ತಾಯಿ ಮಾತಾಗಿದೆ. ''ಅವರು ಯುವಕರು ಆಗಿರುವ ಕಾರಣ ಯುವ ದಸರಾದಲ್ಲಿ ಪ್ರಪೋಸ್ ಮಾಡಿದ್ದಾರೆ.'' ಎಂದು ನಿವೇದಿತಾ ತಂದೆ ಹೇಳಿದ್ದಾರೆ.

ಆಕ್ರೋಶಗೊಂಡ ವಿ ಸೋಮಣ್ಣ

ಆಕ್ರೋಶಗೊಂಡ ವಿ ಸೋಮಣ್ಣ

ಈ ಘಟನೆಯ ಬಗ್ಗೆ ಮೈಸೂರು ಉಸ್ತುವಾರಿ ಸಚಿವ ವಿ ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ''ನಿಜವಾಗಿಯೂ ಇದು ಬುದ್ದಿ ಇಲ್ಲದ ಜನ ಮಾಡುವ ಕೆಲಸ. ಅವರು ಮಾಡಿರುವುದು ಅಪರಾಧ. ಇದು ಹುಡುಗಾಟ ಅಲ್ಲ. ಆತ ನನಗೆ ಗೊತ್ತಿರುವ ಹುಡುಗ. ಹೀಗೆ ಏಕೆ ಮಾಡಿದ ತಿಳಿದಿಲ್ಲ. ಮುಂಚೆ ಯಾರಿಗೂ ಈ ವಿಷಯ ಗೊತ್ತಿರಲಿಲ್ಲ. ಚಂದನ್ ಶೆಟ್ಟಿ ವಿರುದ್ಧ ಪೋಲೀಸರ ಕ್ರಮ ತೆಗೆದುಕೊಳ್ಳುತ್ತಾರೆ.'' ಎಂದು ತಿಳಿಸಿದ್ದಾರೆ.

ಕ್ಷಮೆ ಕೇಳಿದ ಚಂದನ್

ಕ್ಷಮೆ ಕೇಳಿದ ಚಂದನ್

ಚಂದನ್ ಶೆಟ್ಟಿ ಸಹ ಘಟನೆಯ ಬಗ್ಗೆ ಮಾತನಾಡಿದ್ದಾರೆ. ''ಇದು ತಪ್ಪು ಎಂದು ತಿಳಿದಿರಲ್ಲ. ನಿವೇದಿತಾಗೆ ಒಂದು ಒಳ್ಳೆಯ ದಿನ ಪ್ರಪೋಸ್ ಮಾಡಬೇಕು ಎಂದು ಕಾಯುತ್ತಿದ್ದೆ. ಕಾರ್ಯಕ್ರಮದಲ್ಲಿ ಪ್ರಪೋಸ್ ಮಾಡಬೇಕು ಎಂದು ಪ್ಲಾನ್ ಇರಲಿಲ್ಲ. ನಿನ್ನೆ ಬೆಳಗ್ಗೆ ಹಾಗೆ ಅನಿಸಿತು. ಇದನ್ನು ಯಾರಿಗೂ ಹೇಳಿರಲಿಲ್ಲ. ನಾನು ಮಾಡಿದ್ದು, ತಪ್ಪಾಗಿದ್ರೆ ಕ್ಷಮೆ ಇರಲಿ.'' ಎಂದಿದ್ದಾರೆ.

More from Filmibeat

English summary
Bigg Boss 5 winner, kannada rapper Chandan Shetty reaction about yuva dasara incident. Chandan got engaged with Niveditha Gowda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X