ನಿವೇದಿತಾ ಹೊಸ ವಿಡಿಯೋದಲ್ಲಿ 'ನನಗೇನು ಸಮಸ್ಯೆ ಇಲ್ಲ' ಎಂದಿದ್ದೇಕೆ?

ಕನ್ನಡ ಕಿರುತೆರೆಯಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಜನಪ್ರಿಯ ಆಗಿರುವ ನಟಿಯರಲ್ಲಿ ನಿವೇದಿತಾ ಗೌಡ ಮುಂಚೂಣಿಯಲ್ಲಿ ಇದ್ದಾರೆ. ನಿವೇದಿತಾ ಏನೆ ಮಾಡಿದರು ಅದು ವೈರಲ್ ಆಗುತ್ತೆ. ಇನ್ನು ನಿವಿಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್ ಇರುದರಿಂದ ಪೋಸ್ಟ್ ಗಳು ಬೇಗನೆ ವೈರಲ್ ಆಗುತ್ತವೆ.

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ಬಳಿಕ ಚಂದನ್ ಶೆಟ್ಟಿಯ ಜೊತೆ ದಾಂಪತ್ಯ ಜೀವನವನ್ನು ಆರಂಭಿಸಿರುವ ನಿವೇದಿತಾ ಗೌಡ ಇತ್ತೀಚೆಗೆ ಒಂದು ಯುಟ್ಯೂಬ್ ಚಾನಲ್ ತೆರೆದಿದ್ದಾರೆ. ಇಲ್ಲಿ ಹಲವಾರು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಿವೇದಿತಾ ತಮ್ಮ ವೈಯಕ್ತಿಕ ಬದುಕಿನ ಹಲವು ವಿಚಾರಗಳನ್ನು ಯೂಟ್ಯೂಬ್ ಚಾನೆಲ್ ಮೂಲಕ ಹಂಚಿಕೊಳ್ಳುತ್ತಾ ಇರುತ್ತಾರೆ.

ಇದೀಗ ನಿವೇದಿತಾ ಹೊಸ ವಿಡಿಯೋ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ನಿವಿ ಡ್ಯಾನ್ಸ್ ಮಾಡಿ, ನೋ ಪ್ರಾಬ್ಲಮ್ ಎಂದಿದ್ದಾರೆ. ಅಂದರೆ ನಟ ಶಿವಣ್ಣ ಅವರ 'ನೋ ಪ್ರಾಬ್ಲಂ' ಹಾಡಿಗೆ ಹೆಜ್ಜೆ ಹಾಕಿರುವ ನಿವೇದಿತಾ ಗೌಡ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.

Niveditha Gowda New Dance Video Go Viral In Social Media

ನಿವೇದಿತಾಳ ಈ ಹೊಸ ಡ್ಯಾನ್ಸ್ ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿ ನೆಟ್ಟಿಗರು ಫಿದಾ ಆಗಿದ್ದು, ಅವರ ಅಭಿಮಾನಿಗಳು ಸಹ ಖುಷಿ ವ್ಯಕ್ತಪಡಿಸುತ್ತಿದ್ದಾರೆ.‌

ಇನ್ನೂ ಇತ್ತೀಚೆಗೆ ತಮ್ಮ ದೈನಂದಿನ ಚಟುವಟಿಕೆ ಹೇಗಿರುತ್ತೆ ಎಂದು ಒಂದು ವಿಡಿಯೋ ಮಾಡಿ ಹಂಚಿಕೊಂಡಿದ್ದು. ಈ ವಿಡಿಯೋ ಕೂಡ ವೈರಲ್ ಆಗಿತ್ತು.‌ ಇದರೊಂದಿಗೆ ದೋಸೆ ಮಾಡುವುದು, ಶಾಪಿಂಗ್ ಮಾಡುವುದು, ಬ್ಯೂಟಿ ಕಿಪ್ಸ್, ಪಾನಿಪೂರಿ ಚಾಲೆಂಜ್ ಹೀಗೆ ಹಲವಾರು ವಿಡಿಯೋಗಳನ್ನು ಮಾಡುತ್ತಾರೆ. ಜೊತೆಗೆ ಪತಿ ಚಂದನ್ ಶೆಟ್ಟಿಗೆ ಪ್ರ್ಯಾಂಕ್ ಮಾಡುವ ವಿಡಿಯೋಗಳನ್ನು ಕಂಡು ಅಭಿಮಾನಿಗಳು ಎಂಜಾಯ್ ಮಾಡಿದ್ದಾರೆ.

ಪತಿ ಚಂದನ್ ಶೆಟ್ಟಿಯ ಜೊತೆಯಲ್ಲಿ ರೀಲ್ಸ್ ಮಾಡುತ್ತಾ ತುಂಬಾನೇ ಕ್ಯೂಟ್ ಆಗಿ ಕಾಣಿಸುವ ನಿವೇದಿತಾ, ಇತ್ತೀಚಿಗೆ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲೂ ಕೂಡ ಮಿಂಚಿದ್ದರು. ತುಂಬಾ ಕ್ಯೂಟ್ ಆಗಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದರು. ನಿವೇದಿತಾ ಕಿರುತೆಯಲ್ಲಿ ಹೆಚ್ಚು ಬೇಡಿಕೆಯನ್ನು ಗಳಿಸಿದ್ದಾರೆ. ಬಹುತೇಕ ಹೊಸ ಕಾರ್ಯಕ್ರಮಗಳಲ್ಲಿ ನಿವೇದಿತಾ ಇದ್ದೇ ಇರುತ್ತಾರೆ.

More from Filmibeat

English summary
Niveditha Gowda New Dance Video Go Viral In Social Media,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X