ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಅಚ್ಚು ಮೆಚ್ಚಿನ ವ್ಯಕ್ತಿ ಯಾರು ? ಒಬ್ಬೊಬ್ಬರಿಗೆ ಒಂದೊಂದು ಚಿಂತೆ..!
ಸೋಶಿಯಲ್ ಮೀಡಿಯಾದಲ್ಲಿ ಬೆಳಗಾದರೆ ಆ ಸೆಲೆಬ್ರೆಟಿಗಳು ಹಂಗೆ, ಈ ಸೆಲೆಬ್ರೆಟಿಗಳು ಹಿಂಗೇ ಎನ್ನುವಂತಹ ಪೋಸ್ಟುಗಳು, ಸ್ಟಾರ್ ಸೆಲೆಬ್ರೆಟಿಗಳ ಕುರಿತಾದ ಟ್ರೋಲುಗಳು, ಕಿಂಡಲ್ಲುಗಳು ಬರೋದು ಕಾಮನ್ನು. ಸೆಲೆಬ್ರೆಟಿಗಳೆಂದ ಮೇಲೆ ಅಷ್ಟೂ ಮಾಡದೇ ಇದ್ದರೆ ಹೇಗೆ?
ಇಂತಹ ಸಾಕಷ್ಟು ವಿವಾದಾತ್ಮಕ ವಿಚಾರಗಳಿಗೆ ಬಹುತೇಕ ಸೆಲೆಬ್ರೆಟಿಗಳು ಉರಿದು ಬೀಳುತ್ತಾರೆ. ಪ್ರತಿಕ್ರಿಯೆ ನೀಡುತ್ತಾರೆ. ಕೆಲವರಂತೂ ಕಾನೂನಿನ ಮೆಟ್ಟಿಲನ್ನು ಹತ್ತುತ್ತಾರೆ. ಇನ್ನೂ ಕೆಲವರು ಇಂತಹ ಯಾವ ಅನಗತ್ಯ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳದೇ ತಮ್ಮದೇ ಕೆಲಸಗಳಲ್ಲಿ ಬ್ಯುಸಿಯಾಗಿತ್ತಾರೆ. ಉದಾಹರಣೆಗೆ ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ.

ಹೌದು, ರೀಲ್ಸ್ ಮಾಡುವುದನ್ನೇ ಹವ್ಯಾಸವನ್ನಾಗಿಸಿಕೊಂಡಿರುವ ನಿವೇದಿತಾ ಗೌಡ, ಸದ್ಯಕ್ಕೆ ಹಿಂದಿಯ ಹಾಡೊಂದಕ್ಕೆ ರೀಲ್ಸ್ ಮಾಡಿದ್ದಾರೆ. ಕ್ರಾಪ್ ಟಾಪ್ ಹಾಗೂ ಲಾಂಗ್ ಸ್ಕರ್ಟ್ ನಲ್ಲಿ ನನಗೆ ನಾನೇ ಅಚ್ಚು ಮೆಚ್ಚು ಅಂದಿದ್ದಾರೆ. ಸದ್ಯಕ್ಕೆ ನಿವೇದಿತಾ ಅವರ ಈ ವಿಡಿಯೋ ಅನೇಕರ ಕಣ್ಮನವನ್ನ ಸೆಳೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ನಿವೇದಿತಾ ಗೌಡ ಅವರ ಅವತಾರಕ್ಕೆ ಅನೇಕ ಅಭಿಪ್ರಾಯಗಳು ವ್ಯಕ್ತವಾಗ್ತಿವೆ. ಕೆಲವರಿಗೆ ನಿವೇದಿತಾ ಅವರ ಕೂದಲಿನ ಬಗ್ಗೆ ಚಿಂತೆಯಾದರೆ, ಇನ್ನೂ ಕೆಲವರಿಗೆ ನಿವೇದಿತಾ ತಮ್ಮ ಮನೆಯ ಕಿಟಕಿಯನ್ನ ಕ್ಲೀನ್ ಮಾಡಿಲ್ಲವಲ್ಲ ಎಂಬ ಚಿಂತೆ ಕಾಡ್ತಿದೆ. ಕೊನೆ ಪಕ್ಷ ಮನೆಯನ್ನ ಸ್ವಚ್ಚ ಗೊಳಿಸಿಯಾದರೂ ರೀಲ್ಸ್ ಮಾಡಬಹುದಿತ್ತಲ್ಲ ಎಂಬ ಮೆಸೆಜ್ ಕಮೆಂಟ್ ಬಾಕ್ಸ್ ನಲ್ಲಿ ಕಾಣ್ತಿದೆ.

ಕೆಲ ದಿನಗಳ ಹಿಂದೆ ಟ್ರೋಲ್ ಗೆ ಒಳಗಾಗಿದ್ದ ನಿವೇದಿತಾ
ಇನ್ನೂ ಹೆಚ್ಚೇನು ಇಲ್ಲ ಕೆಲ ದಿನಗಳ ಹಿಂದೆ ನಿವೇದಿತಾ ಗೌಡ, ಇದೇ ರೀತಿ ಇಂಗ್ಲಿಷ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು. ಟ್ರೋಲ್ ಗೆ ಒಳಗಾಗಿದ್ದರು. ನಿವೇದಿತಾ ಅವರನ್ನ ಆ ವಿಡಿಯೋದಲ್ಲಿ ನೋಡಿದ್ದ ಅನೇಕರು ಬೆಚ್ಚಿ ಬಿದ್ದಿದ್ದರು. ಆಗ ಕೆಲವರ ಕಣ್ಣಿಗೆ ನಿವಿಯ ಆ ಥಳಕು ಬಳಕು ಕಾಮಪ್ರಚೋದಕದಂತೆ ಕಂಡಿದ್ದರೆ , ಕೆಲವರಿಗೆ ಪಕ್ಕದ ಆಂಧ್ರದ ನಟಿಯರು ನೆನಪಾಗಿದ್ದರು. ಇನ್ನೂ ಬಹುತೇಕರಿಗೆ ನಿವೇದಿತಾ ಗೌಡ ಹಾಕಿಕೊಂಡಿರುವ ಡ್ರೆಸ್ ಬಗ್ಗೆ ಚಿಂತೆ ಕಾಡ್ತಿದ್ದರೆ, ಉಳಿದವರ ಕಣ್ಮುಂದೆ ಚಂದನ್ ಶೆಟ್ಟಿ ಕಥೆ-ವ್ಯಥೆ ಪ್ರಸಾರವಾಗಿತ್ತು. ಈಗಿನಂತೆ ಅಂದು ಕೂಡ ಥರೇವಾರಿ ಅಭಿಪ್ರಾಯಗಳಿಂದ ನಿವೇದಿತಾ ಅವರ ಕಮೆಂಟ್ ಸೆಕ್ಷನ್ ತುಂಬಿ ತುಳುಕಿತ್ತು.
ಒಟ್ಟಿನಲ್ಲಿ ಸದ್ಯಕ್ಕೆ ನಿವೇದಿತಾ ಗೌಡ, ಮತ್ತೊಮ್ಮೆ-ಮಗದೊಮ್ಮೆ ಇನ್ಸ್ಟಾಗ್ರಾಂನಲ್ಲಿ ತಮ್ಮ ರೀಲ್ಸ್ ಮೂಲಕ ಪಡ್ಡೆಹೈಕ್ಳ ಹೃದಯಕ್ಕೆ ಬಾಣ ಬಿಟ್ಟಿದ್ದಾರೆ. ಕೆಲವರು ಹೊಗಳಿದರೆ ಇನ್ನೂ ಕೆಲವರು ನಿವೇದಿತಾ ಅವರ ಈ ಅವತಾರವನ್ನ ತೆಗಳುತ್ತಿದ್ದಾರೆ. ಎಂದಿನಂತೆ ಬಿಟ್ಟಿ ಸಲಹೆಯನ್ನೂ ಕೂಡ ನಿವೇದಿತಾ ಅವರಿಗೆ ಕೊಡುತ್ತಿದ್ದಾರೆ.


Click it and Unblock the Notifications











