ವಿಡಿಯೋ: ಮೈಗೆ ಸುತ್ತಿಕೊಂಡ ಟವೆಲ್ ಬಿಚ್ಚಿದ ನಿವೇದಿತಾ, ಗಾಬರಿಯಾದ ಚಂದನ್ ಶೆಟ್ಟಿ
ಸ್ಯಾಂಡಲ್‌ವುಡ್‌ನ ಕ್ಯೂಟ್ ಜೋಡಿಗಳಲ್ಲೊಂದು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಜೋಡಿ. ಈ ಜೋಡಿ ಆಗಾಗ್ಗೆ ಇನ್‌ಸ್ಟಾಗ್ರಾಂನಲ್ಲಿ ರೀಲ್‌ಗಳನ್ನು, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಪರಸ್ಪರರ ಕಾಲೆಳೆಯುವ, ಸರ್ಪ್ರೈಸ್ ನೀಡುವ, ತಮಾಷೆಯ ವಿಡಿಯೋಗಳು ಹಾಗೂ ಇನ್ನಿತರೆ ವಿಡಿಯೋಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಅದರಲ್ಲಿಯೂ ನಿವೇದಿತಾ ಅಂತೂ ನಿಯಮಿತವಾಗಿ ಇನ್‌ಸ್ಟಾಗ್ರಾಂಗೆ ವಿಡಿಯೋ ಅಪ್‌ಲೋಡ್ ಮಾಡುತ್ತಲೇ ಇರುತ್ತಾರೆ.
ಇದೀಗ ನಿವೇದಿತ ಗೌಡ ಹೊಸ ವಿಡಿಯೋ ಒಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಪತಿ ಚಂದನ್ ಶೆಟ್ಟಿಗೆ ಸಖತ್ ಶಾಕ್ ನೀಡಿದ್ದಾರೆ.

ಮೈಗೆ ಟವೆಲ್ ಸುತ್ತಿಕೊಂಡು ಕ್ಯಾಮೆರಾ ಮುಂದೆ ನಿವೇದಿತಾ ಡ್ಯಾನ್ಸ್ ಮಾಡುತ್ತಿರುತ್ತಾರೆ. ಪತಿ ಚಂದನ್ ಶೆಟ್ಟಿ ಅಲ್ಲಿಯೇ ಕುಳಿತು ಲ್ಯಾಪ್‌ಟಾಪ್‌ನಲ್ಲಿ ಏನೋ ಕೆಲಸ ಮಾಡುತ್ತಿರುತ್ತಾರೆ. ಡ್ಯಾನ್ಸ್ ಮಾಡುತ್ತಿದ್ದ ನಿವೇದಿತಾ ಇದ್ದಕ್ಕಿದ್ದಂತೆ ತಮ್ಮ ಮೈಗೆ ಸುತ್ತಿಕೊಂಡಿರುವ ಟವೆಲ್ ಬಿಚ್ಚಿ ಬಿಸಾಡುತ್ತಾರೆ!
ಚಂದನ್ ಶೆಟ್ಟಿಯಂತೂ ತನ್ನ ಪತ್ನಿಯ ಈ ಅಚಾನಕ್ ಕಾರ್ಯ ನೋಡಿ ಶಾಕ್ ಆಗಿ, ನಿವೇದಿತಾರನ್ನು ಕ್ಯಾಮೆರಾದಿಂದ ದೂರ ಎಳೆದೊಯ್ಯಲು ಯತ್ನಿಸುತ್ತಾರೆ. ಆದರೆ ಅಸಲಿಗೆ ನಿವೇದಿತಾ ಟವೆಲ್ ಒಳಗೆ ಉಡುಪು ಧರಿಸಿರುತ್ತಾರೆ. ಅದನ್ನು ಕಂಡು ಚಂದನ್ ಪೆಚ್ಚಾಗಿ ನಗುತ್ತಾರೆ. ಪತ್ನಿಯಿಂದ ಫೂಲ್ ಆದುದ್ದನ್ನು ಒಪ್ಪಿಕೊಂಡು ತಲೆ ಗೀರಿಕೊಳ್ಳುತ್ತಾರೆ.
ನಿವೇದಿತಾ ಗೌಡ ಇನ್‌ಸ್ಟಾಗ್ರಾಂ ಪೇಜ್ ತುಂಬಾ ಇಂಥಹುವೇ ತಮಾಷೆಯ ವಿಡಿಯೋಗಳು, ಡ್ಯಾನ್ಸ್ ವಿಡಿಯೋಗಳು, ಫ್ಯಾಷನ್ ಶೋ ವಿಡಿಯೋಗಳೇ ತುಂಬಿವೆ. ನಿವೇದಿತಾ ಗೌಡ ತನ್ನ ತಾಯಿಯ ಜೊತೆಗೂ ಡ್ಯಾನ್ಸ್ ಮಾಡಿ ರೀಲ್ಸ್‌ಗಳನ್ನು ಅಪ್‌ಲೋಡ್ ಮಾಡುತ್ತಾರೆ. ಚಂದನ್ ಶೆಟ್ಟಿ ಜೊತೆಗಂತೂ ಹಲವು ಡ್ಯಾನ್ಸ್ ಹಾಗೂ ತಮಾಷೆಯ ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದಾರೆ.
ಇನ್ನು ರ್ಯಾಪರ್ ಚಂದನ್ ಶೆಟ್ಟಿ ಕೆಲವು ದಿನಗಳ ಹಿಂದಷ್ಟೆ 'ಲಕ ಲಕ ಲ್ಯಾಂಬೊರ್ಗಿನಿ' ಹಾಡು ಬಿಡುಗಡೆ ಮಾಡಿದ್ದಾರೆ. ರಚಿತಾ ರಾಮ್ ಕುಣಿದಿರುವ ಈ ಹಾಡು ಸಖತ್ ಹಿಟ್ ಆಗಿದೆ. ಇದೀಗ ಧ್ರುವ ಸರ್ಜಾರ ಹೊಸ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಹೊಸದೊಂದು ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಸಹ!
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಬಿಗ್‌ಬಾಸ್ ಮನೆ ಸ್ಪರ್ಧಿಗಳಾಗಿದ್ದರು. ಅಲ್ಲಿಯೇ ಪರಿಚಯವಾಗಿ, ಅಲ್ಲಿಯೇ ಪ್ರೀತಿ ಬೆಳೆದು ಬಳಿಕ ವಿವಾಹವಾದರು. 2019 ಅಕ್ಟೋಬರ್ ತಿಂಗಳಲ್ಲಿ ಈ ಜೋಡಿ ವಿವಾಹ ಬಂಧನಕ್ಕೆ ಒಳಗಾಯಿತು.


Click it and Unblock the Notifications











