ಮೈ ತುಂಬಾ ಬಟ್ಟೆ ಹಾಕಿ, ಕನ್ನಡ ಮಾತಾಡಿ ಎಂದು ಕಮೆಂಟ್: ನಿವೇದಿತಾ ಕೊಟ್ಟ ಉತ್ತರ ಏನು?

ನಟಿ ನಿವೇದಿತಾ ಗೌಡ ಅವರು‌ ಕಿರುತೆರೆಯಲ್ಲಿ, ಆಲ್ಬಂ ಹಾಡಿನಲ್ಲಿ ಸದ್ದು ಮಾಡಿದ ಬಳಿಕ ಈಗ ಸದಾ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಾ ಇರುತ್ತಾರೆ. ದಿನಕ್ಕೊಂದು ವಿಡಿಯೋ, ಫೋಟೊಗಳ ಮೂಲಕ ಗಮನ ಸೆಳೆಯುತ್ತಾರೆ. ನಿವೇದಿತಾ ಚಂದನ್‌ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು‌ ಅಭಿಮಾನಿಗಳು ಇದ್ದಾರೆ. ಹಾಗಾಗಿ ಅವರ ವಿಡಿಯೋಗಳು ವೈರಲ್ ಆಗುತ್ತವೆ‌.

ಆದರೆ ಈ ಬಾರಿ ನಿವೇದಿತಾ ಒಬ್ಬರೇ ಒಂದು ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಈ ವಿಡಿಯೋ ಮಾಡಲು ಕಾರಣ ಅವರಿಗೆ ಬರುವ ಕಮೆಂಟ್ ಗಳು. ಹೌದು ತಾರೆಯರು ಏನೇ ಮಾಡಿದ್ರು, ಅದನ್ನು ಒಂದಷ್ಟು ಮಂದಿ ಮೆಚ್ಚಿಕೊಂಡರೆ, ಮತ್ತೊಂದಷ್ಟು ಜನರಿಗೆ ಅದು ಇಷ್ಟ ಆಗಲ್ಲ.

Recommended Video

ಗಡ್ಡ ತೆಗೆಸಿ ದಪ್ಪ ಮೀಸೆ ಬಿಟ್ಟು ಕಾಲೇಜ್ ಸೇರಿಕೊಂಡ ಚಂದನ್ ಶೆಟ್ಟಿ

ಹೀಗೆ ನಿವೇದಿತಾ ಅವರು ಪೋಸ್ಟ್ ಮಾಡುವ, ವಿಡಿಯೋ ಮತ್ತು ಫೋಟೊಗಳಿಗೆ ಬಂದಿರುವ ನೆಗೆಟಿವ್ ಕಮೆಂಟ್‌ಗಳಿಗೆ ಉತ್ತರ ನೀಡಲು ನಿವೇದಿತಾ ಹೊಸ ವಿಡಿಯೋ ಮಾಡಿದ್ದಾರೆ. ಅಲ್ಲಿ ನಿವೇದಿತಾ ಬಟ್ಟೆ ಬಗ್ಗೆ ಕಮೆಂಟ್ ಮಾಡಿದವರಿಗೆ ಸರಿಯಾಗೆ ಉತ್ತರ ಕೊಟ್ಟಿದ್ದಾರೆ.

ಕನ್ನಡದಲ್ಲಿ ಮಾತಾಡಿ ಎಂದವರಿಗೆ ನಿವಿ ಖಾರವಾದ ಉತ್ತರ!

ಕನ್ನಡದಲ್ಲಿ ಮಾತಾಡಿ ಎಂದವರಿಗೆ ನಿವಿ ಖಾರವಾದ ಉತ್ತರ!

ನಿವೇದಿತಾ ಗೌಡ ಅವರು ತಮ್ಮ ವೀಡಿಯೋಗಳಿಗೆ ಬಂದಿರುವ ಕೆಲವು ಕಮೆಂಟ್‌ಗಳಿಗೆ ಉತ್ತರ ಕೊಟ್ಟಿದ್ದಾರೆ. ಕೊಂಚ ಖಾರವಾಗೇ ಉತ್ತರಿಸಿದ್ದಾರೆ ಎಂದು ಹೇಳಬಹುದು. ಕಮೆಂಟ್‌ಗಳಿಗಾಗಿಯೇ ಉತ್ತರ ನೀಡುವ ಸಲುವಾಗಿ 14 ನಿಮಿಷದ ಈ ವೀಡಿಯೋ ಮಾಡಿ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಹರಿ ಬಿಟ್ಟಿದ್ದಾರೆ. ಒಂದು ಕಮೆಂಟ್‌ನಲ್ಲಿ "ಕನ್ನಡದಲ್ಲಿ ಮಾತನಾಡಿ ಇಂಗ್ಲಿಷ್‌ನಲ್ಲಿ ಮಾತನಾಡುವುದಾದರೆ ಇಂಗ್ಲಿಷ್ ಚಾನೆಲ್ ಓಪೆನ್ ಮಾಡಿಕೊಳ್ಳಿ" ಎಂದು ಕಮೆಂಟ್ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ನಿವೇದಿತಾ, "ನಾನು ನನ್ನ ಭಾಷೆಯನ್ನು ಅಲ್ಲಗಳೆಯುತ್ತಿಲ್ಲ. ಹಾಗಂತ ನಾನು ಕನ್ನಡದಲ್ಲೇ ಮಾತನಾಡಬೇಕು, ಇಂಗ್ಲಿಷ್ ನಲ್ಲಿ ಮಾತನಾಡಬಾರದು ಎಂದೇನೂ ಇಲ್ಲ. ನೀವು ಮೊದಲು ಕನ್ನಡದಲ್ಲಿ ಕಮೆಂಟ್ ಟೈಪ್ ಮಾಡಿ, ಆಮೇಲೆ ನನಗೆ ಹೇಳಿ" ಎಂದಿದ್ದಾರೆ.

ನಿವೇದಿತಾ ಸೀರೆ, ಚುಡಿದಾರ್ ತೊಟ್ಟು ವಿಡಿಯೋ ಮಾಡಬೇಕಂತೆ!

ನಿವೇದಿತಾ ಸೀರೆ, ಚುಡಿದಾರ್ ತೊಟ್ಟು ವಿಡಿಯೋ ಮಾಡಬೇಕಂತೆ!

ಇನ್ನು ತನ್ನ ಬಟ್ಟೆ ಬಗ್ಗೆ ಮಾತನಾಡಿರುವವರಿಗೆ ನಿವೇದಿತಾ ಉತ್ತರ ಕೊಟ್ಟಿದ್ದಾರೆ. ನೀವು ಮೈ ಕಾಣುವ ಹಾಗೆ ತುಂಡು ಬಟ್ಟೆಗಳನ್ನು ತೊಡಬೇಡಿ, ಚೂಡಿದಾರ್ ಅಥವಾ ಸೀರೆ ತೊಟ್ಟು ವಿಡಿಯೋ ಮಾಡಿ ಎನ್ನುವ ಕಮೆಂಟ್‌ಗಳು ಬಂದಿವೆ. ಇದಕ್ಕೆ ಉತ್ತರಿಸಿದ ನಿವೇದಿತಾ "ನನ್ನ ಬಟ್ಟೆ, ನನ್ನ ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ ಹೇಗೆ ಮಾತನಾಡುತ್ತೀರಿ, ಆದಿವಾಸಿಗಳು ಮೈ ತುಂಬಾ ಬಟ್ಟೆ ಹಾಕುತ್ತಿದ್ದರಾ? ನೋಡುವ ದೃಷ್ಟಿ ಸರಿಯಿದ್ದರೆ ಎಲ್ಲವೂ ಸರಿ ಇರುತ್ತೆ. ಹಾಗಾಗಿ ನನಗೆ ಇಷ್ಟ ಬಂದ ಬಟ್ಟೆಯನ್ನು ನಾನು ಹಾಕುತ್ತೇನೆ." ಎಂದು ನಿವೇದಿತಾ ಉತ್ತರ ನೀಡಿದ್ದಾರೆ.

ಹೆಣ್ಣು ಮಕ್ಕಳ ಬಗ್ಗೆ ಈ ಕಲ್ಪನೆ ತಪ್ಪು: ನಿವೇದಿತಾ!

ಹೆಣ್ಣು ಮಕ್ಕಳ ಬಗ್ಗೆ ಈ ಕಲ್ಪನೆ ತಪ್ಪು: ನಿವೇದಿತಾ!

ನಿವೇದಿತಾ ಅವರು ಆಗಾಗ ಕೆಲವೊಂದು ಅಡುಗೆಗಳನ್ನು ಮಾಡಿ, ರೆಸಿಪಿಗಳನ್ನು ವಿಡಿಯೋದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಈ ಬಗ್ಗೆ ಬಂದಿರುವ ಕಮೆಂಟ್‌ನಲ್ಲಿ "ಇನ್ನು ನಿಮಂತಹ ಹೆಣ್ಣು ಮಕ್ಕಳು ಮನೆಯಲ್ಲಿದ್ದರೆ, ಮನೆಯವರು ಹೊಟ್ಟೆ ತುಂಬಾ ತಿಂದ ಹಾಗೆ" ಎಂದು ಬರೆಯಲಾಗಿದೆ. ಇದಕ್ಕೆ ನಿವೇದಿತಾ "ಹೆಣ್ಣು ಮಕ್ಕಳೇ ಅಡುಗೆ ಮಾಡಬೇಕು, ಮನೆ ಕೆಲಸ ಮಾಡಬೇಕು, ಮಕ್ಕಳನ್ನು ಹೆರಬೇಕು ಅಂತ ರೂಲ್ಸ್ ಯಾಕೆ.? ಹಾಗಾದರೆ ಗಂಡು ಮಕ್ಕಳು ಇರುವುದು ಯಾಕೆ." ಎಂದು ಪ್ರತ್ಯುತ್ತರ ನೀಡಿದ್ದಾರೆ.

ಬೇರೆಯವರಿಗೆ ಸಹಾಯ ಮಾಡಿ ಎಂದು ಕಮೆಂಟ್!

ಬೇರೆಯವರಿಗೆ ಸಹಾಯ ಮಾಡಿ ಎಂದು ಕಮೆಂಟ್!

ಮತ್ತೊಬ್ಬರು ಸಹಾಯ ಮಾಡುವ ಬಗ್ಗೆಯೂ ಕಮೆಂಟ್ ಮಾಡಿದ್ದಾರೆ. ಬೇರೆಯವರಿಗೂ ಸಹಾಯ ಮಾಡಿ ಎನ್ನುವ ಕಮೆಂಟ್‌ಗೆ ನಿವೇದಿತಾ ಅವರು "ನಿಮಗೆ ಗೊತ್ತಾ? ನಾವು ಯಾರಿಗೆ ಏನು ಸಹಾಯ ಮಾಡಿದ್ದೀವಿ, ಇಲ್ಲ ಎಂದು. ತಿಳಿಯದೇ ಏನೇನೋ ಕಮೆಂಟ್ ಮಾಡಬೇಡಿ. ನಮ್ಮಲ್ಲೂ ಒಳ್ಳೆಯ ಗುಣಗಳಿವೆ. ಕೊರೊನಾ ಸಂಕಷ್ಟದಲ್ಲಿ ನಮ್ಮ ಕೈಲಾದಷ್ಟು ಸಹಾಯ ಮಾಡಿದ್ದೀವಿ. ನಮ್ಮಲ್ಲಿ ಕೆಲಸ ಮಾಡುತ್ತಿದ್ದವರಿಗೆ ಲಾಕ್ ಡೌನ್ ಸಂದರ್ಭದಲ್ಲೂ ಸಂಪೂರ್ಣ ಸಂಬಳ ಕೊಟ್ಟಿದ್ದೀವಿ. ಇಷ್ಟೋಂದು ಪರ್ಸನಲ್ ವಿಚಾರಗಳ ಬಗ್ಗೆ ಕಮೆಂಟ್ ಮಾಡುವುದು ಸರಿಯಲ್ಲ. ಕಮೆಂಟ್ ಮಾಡುವಾಗ ಒಳ್ಳೆಯ ಕಮೆಂಟ್ ಮಾಡಿ ಇನ್ನೊಬ್ಬರಿಗೆ ಖುಷಿ ಕೊಡಿ. ಅದು ಬಿಟ್ಟು ನೆಗೆಟಿವ್ ಆಗಿ ಇರಬೇಡಿ, ಸ್ವಲ್ಪ ಪಾಸಿಟಿವ್ ನೆಸ್ ಇರಲಿ." ಎಂದು ಹೇಳಿದ್ದಾರೆ.

More from Filmibeat

English summary
Niveditha Gowda Replay For Negative Comments On Her Dress, cooking skills, Kannada Speaking,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X