ಫ್ಯಾಮಿಲಿ ಪ್ಲ್ಯಾನಿಂಗ್ ಏನಿಲ್ಲ, ಕರಿಯರ್ ಮುಖ್ಯ ಎಂದಿದ್ದ ನಿವೇದಿತಾ; ಚಂದನ್ ಬಗ್ಗೆ ಹೇಳಿದ್ದಿದ್ದೇನು?

By ಫಿಲ್ಮಿಬೀಟ್ ಡೆಸ್ಕ್

ಸ್ಯಾಂಡಲ್‌ವುಡ್‌ನ ಕ್ಯೂಟ್ ಜೋಡಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ವಿಚ್ಛೇದನ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿದೆ. ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದ ಜೋಡಿ ಈಗ ವಿಚ್ಛೇದನ ಪಡೆದು ಬೇರೆಯಾಗಿದ್ದಾರೆ. ಇದು ಅವರ ಫ್ಯಾನ್ಸ್‌ಗೆ ಹಾಗೂ ಆತ್ಮೀಯರಿಗೆ ದೊಡ್ಡ ಮಟ್ಟಕ್ಕೆ ಶಾಕ್ ಆಗಿದೆ.

ಚಂದನ್ ಶೆಟ್ಟಿ, ನಿವೇದಿತಾ ಗೌಡ ಇಬ್ಬರೂ ತಮ್ಮದೇ ವೃತ್ತಿ ಬದುಕನ್ನು ರೂಪಿಸಿಕೊಳ್ಳುವಲ್ಲಿ ಬ್ಯುಸಿಯಾಗಿದ್ದರು. ಚಂದನ್ ಶೆಟ್ಟಿ ಮ್ಯೂಸಿಕ್ ಜೊತೆಗೆ ನಟನೆಗೂ ಇಳಿದಿದ್ದರು. ಇತ್ತ ನಿವೇದಿತಾ ಗೌಡ ರಿಯಾಲಿಟಿ ಶೋಗಳನ್ನು ಕಾಣಿಸಿಕೊಳ್ಳುತ್ತಿದ್ದರು. ಇತ್ತೀಚೆಗೆ ಚಂದನ್ ಶೆಟ್ಟಿ ಜೊತೆ ಕ್ಯಾಂಡಿ ಕ್ರಶ್ ಅನ್ನುವ ಸಿನಿಮಾದಲ್ಲೂ ನಟಿಸಿದ್ದರು.

Niveditha Gowda revealed about family planning in an interview before divorce

ಹಿಂದೊಮ್ಮೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರೂ ಒಟ್ಟಿಗೆ ಸ್ಪೀಡ್ ಪ್ಲಸ್ ಕರ್ನಾಟಕ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದರು. ಈ ವೇಳೆ ಫ್ಯಾಮಿಲಿ ಪ್ಲಾನಿಂಗ್ ಬಗ್ಗೆ ಕೇಳಿದ್ದರು. ಆದರೆ, ಆ ವೇಳೆ ನಿವೇದಿತಾ ಗೌಡ ಬೇರೆಯದ್ದೇ ಉತ್ತರ ಕೊಟ್ಟಿದ್ದರು. ಚಂದನ್ ಹಾಗೂ ನಿವೇದಿತ ತಮ್ಮ ನಾಲ್ಕು ವರ್ಷಗಳ ವೈವಾಹಿಕ ಬದುಕಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಆ ಸಂದರ್ಶನದ ಝಲಕ್ ಇಲ್ಲಿದೆ.

"ಇವಳನ್ನು ಜಾಸ್ತಿ ಕೇಳಿ. ನನ್ನನ್ನು ಕೇಳಬೇಡಿ"

ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವದಂದು ಈ ಜೋಡಿಯ ಸಂದರ್ಶನ ಹೀಗಿತ್ತು. "ಬದಲಾವಣೆ ಅಂತೇನು ಇಲ್ಲ. ಮದುವೆ ಮುಂಚೆ ಯಾವ ರೀತಿ ಇದ್ವಿ ಅದೇ ರೀತಿ ಇದೀವಿ. ಸಂಸಾರ ಅಂದ್ಮೇಲೆ ಚಿಕ್ಕ ಪುಟ್ಟದ್ದು ಇದ್ದಿದ್ದೆ. ಮಾಮೂಲಿ ಜಗಳ ಆಡುತ್ತಿರುತ್ತೇವೆ. ಹಾಗೇ ಸರಿ ಹೋಗುತ್ತಿರುತ್ತೇವೆ. ಹಾಗೇ ಹೊಸ ಹೊಸದು ಏನೇನು ಕಲಿಯೋಕೆ ಸಿಗುತ್ತೋ ಅದನ್ನೆಲ್ಲ ಕಲಿಯುತ್ತಿರುತ್ತೇವೆ. ಇವಳನ್ನು ಜಾಸ್ತಿ ಕೇಳಿ. ನನ್ನನ್ನು ಕೇಳಬೇಡಿ." ಎಂದು ಚಂದನ್ ಶೆಟ್ಟಿ ಹೇಳಿದ್ದರು.

ಕಳೆದ ಮೂರು ವರ್ಷಗಳಿಂದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರೂ ವಿವಾಹ ವಾರ್ಷಿಕೋತ್ಸವದಂದು ಟ್ರಾವೆಲ್ ಮಾಡುತ್ತಿದ್ದರು. ಆದರೆ, ಕಳೆದ ಫೆಬ್ರವರಿಯಲ್ಲಿ ಈ ಜೋಡಿ ರೊಮ್ಯಾಂಟಿಕ್ ಸಾಂಗ್ ಅನ್ನು ಶೂಟ್ ಮಾಡುತ್ತಿತ್ತು. 'ಕ್ಯಾಂಡಿ ಕ್ರಶ್' ಸಿನಿಮಾದಲ್ಲಿ ಈ ಜೋಡಿಗಂತಲೇ ಒಂದು ಸಾಂಗ್ ಇಡಲಾಗಿದೆ. ಆ ಹಾಡಿನ ಬಗ್ಗೆ ಮಾತಾಡಿ ಖುಷಿ ಪಟ್ಟಿದ್ದರು.

Niveditha Gowda revealed about family planning in an interview before divorce

"ಚಂದನ್‌ಗೆ ಕೋಪ ಜಾಸ್ತಿ"

ಇದೇ ಸಂದರ್ಶನದಲ್ಲಿ ಚಂದನ್ ಶೆಟ್ಟಿಗೆ ಕೋಪ ಜಾಸ್ತಿ. ನನ್ನ ಅವರು ಸಹಿಸಿಕೊಳ್ಳುವಂತಹದ್ದು ಏನೂ ಇಲ್ಲ ಎಂದು ನಿವೇದಿತಾ ಗೌಡ ಹೇಳಿದ್ದರು. "ನನಗೆ ಸ್ವಲ್ಪ ತಾಳ್ಮೆ ಜಾಸ್ತಿ. ಹಾಗೇ ಬೈಯ್ಸಿಕೊಳ್ಳುತ್ತಲೂ ಇರುತ್ತೇನೆ. ನನಗೆ ಎಗ್ಸೈಟ್‌ಮೆಂಟ್ ಇಲ್ಲ. ಏನೇ ಇದ್ದರೂ ನಾರ್ಮಲ್ ಆಗಿ ತೆಗೆದುಕೊಳ್ಳುತ್ತೇನೆ. ಇವಳು ಹಾಗಲ್ಲ ಚಿಕ್ಕದಾಗಿ ಖುಷಿ ಆದರೂ 10 ಪಟ್ಟು ಖುಷಿ ಪಡ್ತಾಳೆ. ಅದೇ ದು:ಖ ಆದರೂ 10 ಪಟ್ಟು ದು:ಖ ಪಡುತ್ತಾಳೆ." ಎಂದು ಚಂದನ್ ಶೆಟ್ಟಿ ಹೇಳಿದ್ರೆ, ನಿವೇದಿತಾ ಗೌಡ "ಆತರ ಏನಿಲ್ಲ. ಸಹಿಸಿಕೊಳ್ಳುವಂತಹದ್ದು ಏನೂ ಇಲ್ಲ. ಎಷ್ಟು ಕೋಪ ಗೊತ್ತಾ? ಕೋಪ ಜಾಸ್ತಿ ಬರುತ್ತೆ." ಎಂದು ನಿವೇದಿತಾ ಗೌಡ ಹೇಳಿಕೊಂಡಿದ್ದರು.

ಫ್ಯಾಮಿಲಿ ಪ್ಲ್ಯಾನಿಂಗ್ ಏನಿಲ್ಲ

"ಇನ್ನೂ ಕರಿಯರ್ ಶುರುವಾಗುತ್ತಿದೆ. ಮಾಡುವುದಕ್ಕೆ ಇನ್ನೂ ತುಂಬಾ ಕೆಲಸ ಬಾಕಿಯಿದೆ. ಅದರ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದೇನೆ. ಸಿನಿಮಾ ಆಫರ್ ಬಂದಾಗ ರಿಯಾಲಿಟಿ ಶೋಗೆ ಕಮಿಟ್ ಆಗಿದ್ದೆ. ಮೊದಲು ಒಪ್ಪಿಕೊಂಡಿದ್ದಕ್ಕೆ ಪ್ರಾಮುಖ್ಯತೆ ಕೊಡಬೇಕಿತ್ತು. ಈಗ ಗ್ಯಾಪ್ ಇತ್ತು. ಆ ವೇಳೆ ಸಿನಿಮಾ ಬಂದಿದ್ದಕ್ಕೆ ಮಾಡಿದ್ದೇನೆ." ಎಂದು ನಿವೇದಿತಾ ಗೌಡ ತನ್ನ ಕರಿಯರ್ ಬಗ್ಗೆ ಕ್ಲಾರಿಟಿ ಕೊಟ್ಟಿದ್ದರು.

More from Filmibeat

English summary
Niveditha Gowda said she is planning her career in an interview before divorce:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X