ಮೊನ್ನೆ ಮೊನ್ನೆ ಕಣ್ಣೀರು ಹಾಕಿದ್ದ ನಿವೇದಿತಾ ಗೌಡ ನೀವೇನಾ ಎಂದ ಫ್ಯಾನ್ಸ್..!
ಯಾರೇನೇ ಅಂದರು, ಎಷ್ಟೇ ಟೀಕೆ ಟಿಪ್ಪಣಿ ಮಾಡಿದರೂ, ಕಾಲೆಳೆದರೂ, ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಉಫ್ ಎಂದು ಮುಂದೆ ಸಾಗುವುದು ಬಹುಮುಖ ಪ್ರತಿಭೆ ನಿವೇದಿತಾ ಗೌಡ ಅವರ ಮೂಲ ಗುಣ. ಯಾರೇ ಕೂಗಾಡಲಿ, ಬಾತ್ ರೂಮ್ ಅಲ್ಲಾಡಲಿ ಎನ್ನುವ ವ್ಯಕ್ತಿತ್ವವನ್ನು ರೂಢಿಸಿಕೊಂಡಿರುವ ನಿವೇದಿತಾ ಗೌಡ ಮೊನ್ನೆ ಮೊನ್ನೆಯಷ್ಟೇ ಬಾಯ್ಸ್ ವರ್ಸಸ್ ಗರ್ಲ್ಸ್ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ್ದರು.
ತಮ್ಮ ಬದುಕಿನಲ್ಲಿ ತಮ್ಮ ತಂದೆಯ ಬೆಂಬಲ ಮತ್ತು ಪ್ರೋತ್ಸಾಹದ ಕುರಿತು ಮಾತನಾಡುತ್ತಾ ಭಾವುಕರಾಗಿದ್ದರು. ನನ್ನ ಲೈಫ್‌ನಲ್ಲಿ ಏನೇನೋ ಘಟನೆಗಳು ನಡೆದ ಮೇಲೆ, ನಾನು ಇಷ್ಟೊಂದು ಸ್ಟ್ರಾಂಗ್ ಆಗಿರಲು ನನ್ನ ತಂದೆಯೇ ಕಾರಣ ಎಂದು ಹೇಳಿ ಬಿಕ್ಕಿದ್ದರು. ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡ ನಾನು ನಿನ್ನ ಜೊತೆಯಲ್ಲೇ ಇರುತ್ತೇನೆ ಎಂದು ನನ್ನ ತಂದೆ ನನಗೆ ಧೈರ್ಯ ತುಂಬುತ್ತಾರೆ, ನನಗೆ ಅವರೇ ಬಹುದೊಡ್ಡ ಶಕ್ತಿ ಎಂದು ನಿವೇದಿತಾ ಗೌಡ ಹೇಳಿದ್ದರು. ನಿವೇದಿತಾ ಗೌಡ ಅವರ ಈ ಮಾತುಗಳನ್ನು ಕೇಳಿ ಕಾರ್ಯಕ್ರಮದ ಇತರೆ ಸ್ಫರ್ಧಿಗಳು ಕೂಡ ಕಣ್ಣೀರು ಸುರಿಸಿದ್ದರು. ಜಡ್ಜ್‌ಗಳು ಕೂಡ ಭಾವುಕರಾಗಿದ್ದರು.

ಹೀಗೆ ತಮ್ಮ ಮಾತುಗಳಿಂದ ಅವತ್ತು ಎಲ್ಲರನ್ನು ಕಣ್ಣೀರಾಗಿಸಿದ ನಿವೇದಿತಾ ಗೌಡ ಇದೀಗ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ವಿಡಿಯೋವನ್ನು ಮರು ಹಂಚಿಕೊಂಡಿದ್ದಾರೆ. ಈ ಮೂಲಕ ಮತ್ತೊಮ್ಮೆ ತಮ್ಮ ಅಂದ ಚೆಂದದಿಂದ ಮೋಡಿ ಮಾಡುವ ಪ್ರಯತ್ನ ಮಾಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಮತ್ತೊಮ್ಮೆ ಟ್ರೋಲಿಗರಿಗೆ ನಿವೇದಿತಾ ಗೌಡ ಆಹಾರವಾಗಿದ್ದಾರೆ.
ಎಂದಿನಂತೆ ನಿವೇದಿತಾ ಗೌಡ ಅವರ ಈ ವಿಡಿಯೋ ಕೂಡ ವೈರಲ್ ಆಗಿದೆ. ಕಾಮೆಂಟ್‌ಗಳ ಮಹಾಪೂರ ಹರಿದು ಬಂದಿದೆ. ಕೆಲವರಲ್ಲ ಹಲವರು ನಿವೇದಿತಾ ಗೌಡ ಅವರ ಕಾಲೆಳೆದಿದ್ದಾರೆ. ಮೊನ್ನೆ ಮೊನ್ನೆ ಕಣ್ಣೀರು ಹಾಕಿದ್ದು ನೀವೇನಾ ಎಂದು ಪ್ರಶ್ನೆ ಮಾಡಿದ್ದಾರೆ. ಕೆಟ್ಟಾ ಕೊಳಕು ಕಾಮೆಂಟ್‌ಗಳನ್ನು ಕೂಡ ಮಾಡಿದ್ದಾರೆ. ಈ ಮೂಲಕ ಟ್ರೋಲ್ ಹೆಸರಿನಲ್ಲಿ ನಿಂದಿಸುವ ತಮ್ಮ ಕೆಲಸವನ್ನು ಮುಂದುವರೆಸಿದ್ದಾರೆ. ನಿವೇದಿತಾ ಗೌಡ ಕಾಮೆಂಟ್ ಸೆಕ್ಷನ್‌ಗೆ ಬಂದು ಅನ್ನಬಾರದ್ದನ್ನೆಲ್ಲ ಅಂದಿದ್ದಾರೆ. ಮತ್ತೂ ಹಲವರು ಬೇಕು ಬೇಕಂತಲೇ ಈ ತರಹದ ವಿಡಿಯೋಗಳನ್ನು ಮಾಡುವುದಾ ನೀವು ಎನ್ನುವ ಪ್ರಶ್ನೆಯನ್ನು ಕೂಡ ಮಾಡಿದ್ದಾರೆ.
ಇನ್ನು ನಿವೇದಿತಾ ಗೌಡ ಮನೆಯ ಲಿವಿಂಗ್ ರೂಮ್‌ನಲ್ಲಿರುವುದಕ್ಕಿಂತ ಬಾತ್ ರೂಮ್‌ನಲ್ಲಿ ಇರುವುದೇ ಹೆಚ್ಚು. ಸದಾ ಕಾಲ್ ಬಾತ್ ರೂಮ್‌ದಿಂದನೇ ನಿವೇದಿತಾ ವಿಡಿಯೋ ಹಂಚಿಕೊಳ್ಳುತ್ತಾರೆ. ಸದ್ಯ ಶೇರ್ ಮಾಡಿರುವ ವಿಡಿಯೋ ಕೂಡ ಬಾತ್ ರೂಮ್‌ನಿಂದನೇ. ಹೀಗಾಗಿಯೇ ತಲೆ ಕೆಡಿಸಿಕೊಂಡಿರುವ ಇನ್ನು ಕೆಲವರು ನಿಮ್ಮ ಮನೆಯ ಬಾತ್ ರೂಮ್ ಮೇಲೆ ನಿಮಗ್ಯಾಕೇ ಇಷ್ಟು ವ್ಯಾಮೋಹ ಎಂಬ ಪ್ರಶ್ನೆಯನ್ನು ಕೂಡ ಮಾಡಿದ್ದಾರೆ. ಆದರೆ, ನಿವೇದಿತಾ ಗೌಡ ಯಾವ ಕಾಮೆಂಟ್‌ಗಳಿಗೆ ತಲೆ ಕೆಡಿಸಿಕೊಂಡಿಲ್ಲ. ಉತ್ತರವನ್ನು ನೀಡಿಲ್ಲ.
ಇನ್ನು ಸದ್ಯ ನಿವೇದಿತಾ ಗೌಡ ಚಿತ್ರರಂಗದಲ್ಲಿ ಒಂದೊಂದೆ ಹೆಜ್ಜೆ ಇಡುತ್ತಿದ್ದಾರೆ. ಮಾಜಿ ಪತಿ ಚಂದನ್ ಶೆಟ್ಟಿ ಜೊತೆ ಮುದ್ದು ರಾಕ್ಷಸಿ ಎಂಬ ಚಿತ್ರದಲ್ಲಿ ನಿವೇದಿತಾ ಗೌಡ ನಟಿಸಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು ಶೀಘ್ರದಲ್ಲಿಯೇ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ. ಸೃಜನ್ ಲೊಕೇಶ್ ಜೊತೆ ನಿವೇದಿತಾ ಗೌಡ ಅಭಿನಯದ ಜಿಎಸ್‌ಟಿ ಚಿತ್ರ ಸದ್ಯದಲ್ಲಿಯೇ ತೆರೆಗೆ ಬರಲಿದೆ.
ಮಿಕ್ಕಂತೆ ನಿವೇದಿತಾ ಗೌಡ ಅವರಿಗೆ ಬೇರೆ ಬೇರೆ ಭಾಷೆಯಲ್ಲಿ ಕೂಡ ಅವಕಾಶಗಳನ್ನು ಎದುರು ನೋಡುತ್ತಿರುವ ನಿವೇದಿತಾ ಗೌಡ ತೆಲುಗಿನಲ್ಲಿ ವಾಲು ಕಳ್ಳತಾ ಎಂಬ ಆಲ್ಬಂ ಹಾಡಿನಲ್ಲಿ ಕೂಡ ಕಾಣಿಸಿಕೊಂಡಿದ್ದರು. ಮನಸಾರೆ ನಿನ್ನ ಹೆಸರಿನಲ್ಲಿ ಈ ಹಾಡು ಕನ್ನಡದಲ್ಲಿ ಕೂಡ ಬಿಡುಗಡೆಯಾಗಿತ್ತು.


Click it and Unblock the Notifications











