ಬಾತ್‌ರೂಮ್‌ನಲ್ಲಿ ನಾನು ನನ್ನ ಕೆಲಸ ಮಾಡ್ತೀನಿ, ನೀವು ನಿಮ್ಮದು ಮಾಡಿಕೊಳ್ಳಿ - ನಿವೇದಿತಾ ಗೌಡ..!
ಸಾಮಾಜಿಕ ಜಾಲತಾಣದಲ್ಲಿ ದಿನಾ ಬೆಳಗಾದರೆ ಸಾಕು ಆ ಸ್ಟಾರ್ ಹಂಗೆ, ಈ ಸ್ಟಾರ್ ಹಿಂಗೇ ಎನ್ನುವಂತಹ ಬರಹಗಳು, ಸ್ಟಾರ್ ಸೆಲೆಬ್ರೆಟಿಗಳ ಕುರಿತಾದ ಟ್ರೋಲುಗಳು, ಕಿಂಡಲ್ಲುಗಳು ಬರುವುದು ಸರ್ವೇ ಸಾಮಾನ್ಯ. ಚಿತ್ರರಂಗದ ತಾರೆಯರನ್ನು ಅಷ್ಟೂ ಕಾಡದೇ ಇದ್ದರೆ ಹೇಗೆ ? ಎನ್ನುವುದು ಅನೇಕರ ಆಲೋಚನೆ. ಇನ್ನು ಇಂತಹ ಸಾಕಷ್ಟು ವಿಚಾರಗಳು ಕಣ್ಣಿಗೆ ಕಂಡಾಗ ತಮ್ಮ ಕುರಿತು
ವಿವಾದಾತ್ಮಕವಾದ ಟ್ರೋಲ್ ಮಾಡಿದಾಗ ಅಥವಾ ತಮ್ಮನ್ನು ಹೀಯಾಳಿಸಿದಾಗ ಅನೇಕ ತಾರೆಯರು ಉರಿದು ಬೀಳುತ್ತಾರೆ. ಟ್ರೋಲ್ ಮಾಡಿದವರ ವಿರುದ್ದ, ಕಾಲೆಳದೆವರ ವಿರುದ್ದ, ಮನಸೋ ಇಚ್ಚೆ ಕಾಮೆಂಟ್ ಮಾಡಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದಲ್ಲದೇ ಕೆಲವರು ಕಾನೂನಿನ ಮೊರೆ ಹೋಗುತ್ತಾರೆ. ಸೈಬರ್ ಕ್ರೈಮ್ ಅಡಿ ಪ್ರಕರಣವನ್ನು ಕೂಡ ದಾಖಲಿಸುತ್ತಾರೆ.

ಆದರೆ ಇನ್ನೂ ಕೆಲವರು ಇಂತಹ ಯಾವ ಅನಗತ್ಯ ವಿಚಾರಕ್ಕೆ ತಲೆ ಕೆಡಿಸಿಕೊಳ್ಳದೇ ತಮ್ಮದೇ ಕೆಲಸಗಳಲ್ಲಿ ಬ್ಯುಸಿಯಾಗಿರುತ್ತಾರೆ. ಉದಾಹರಣೆಗೆ ನಿವೇದಿತಾ ಗೌಡ. ಹೌದು, ಯಾರೇ ಕೂಗಾಡಲಿ, ಬಾತ್ ರೂಮ್ ಅಲ್ಲಾಡಲಿ ಎಂಬ ವ್ಯಕ್ತಿತ್ವವನ್ನು ರೂಢಿಸಿಕೊಂಡಿರುವ ನಿವೇದಿತಾ ಗೌಡ ಇಲ್ಲಿಯವರೆಗೆ ಹಲವು ಬಾರಿ ಟ್ರೋಲ್ ಆಗಿದ್ದಾರೆ. ತಮ್ಮ ದೇಹಸಿರಿಯನ್ನು ಪ್ರದರ್ಶಿಸುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇನ್ನೂ ನಿವೇದಿತಾ ಪ್ರತಿ ಬಾರಿ ವಿಡಿಯೋ ಮಾಡಿದಾಗ ಅದಕ್ಕೆ ವ್ಯಕ್ತವಾಗುವ ಅಭಿಪ್ರಾಯಗಳು ಹೇಳಲಾಗದಷ್ಟು ಅಸಹ್ಯ ಮತ್ತು ಅಶ್ಲೀಲವಾಗಿರುತ್ತವೆ. ಆದರೂ ಕೂಡ ನಿವೇದಿತಾ ಗೌಡ ತಲೆ ಕೆಡಿಸಿಕೊಂಡಿಲ್ಲ. ರೀಲ್ಸ್ ಮಾಡುವುದನ್ನು ಬಿಟ್ಟಿಲ್ಲ. ಬದಲಿಗೆ ಇನ್ನೂ ದಿನಕ್ಕೊಂದು ವಿಡಿಯೋವನ್ನು ತಪ್ಪದೇ ಹಂಚಿಕೊಳ್ತಿದ್ದಾರೆ ನಿವೇದಿತಾ ಗೌಡ.
ಇಂಥಾ ನಿವೇದಿತಾ ಗೌಡ ಆಗಾಗ ತಮ್ಮ ಸ್ನೇಹಿತೆಯನ್ನು ಕೂಡ ತಮ್ಮ ನೆಚ್ಚಿನ ಸ್ಥಳ ಬಾತ್‌ರೂಮ್‌ಗೆ ಕರೆದುಕೊಂಡು ಹೋಗುತ್ತಾರೆ. ಫೋಟೊಗಳನ್ನು ಕ್ಲಿಕಿಸಿಕೊಳ್ಳುತ್ತಾರೆ. ಈ ಮೂಲಕ ಟ್ರೋಲಿಗರಿಗೆ ಆಹಾರವೂ ಆಗ್ತಾರೆ.
ಹಾಗಂಥ ಟ್ರೋಲ್ ಆದ ತಕ್ಷಣ ಸುಮ್ಮನೆ ಕೂರುವ ಜಾಯಮಾನ ನಿವೇದಿತಾ ಗೌಡ ಅವರದ್ದಲ್ಲ. ಬದಲಿಗೆ ಇನ್ನು ಹೆಚ್ಚೆಚ್ಚು ಫೋಟೊಗಳನ್ನು ನಿವೇದಿತಾ ಗೌಡ ಹಂಚಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡು ಬಂದಿದ್ದಾರೆ. ಇದಕ್ಕೆ ಇನ್ನೊಂದು ಕೈಗನ್ನಡಿ ಎನ್ನುವಂತೆ ಮತ್ತೊಮ್ಮೆ ಸ್ನೇಹಿತೆ ವಾಣಿ ಜೊತೆ ನಿವೇದಿತಾ ಗೌಡ ಬಾತ್‌ರೂಮ್ ಸೇರಿಕೊಂಡಿದ್ದಾರೆ. ಅತ್ಯಾಕರ್ಷಕ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಇದರ ಜೊತೆ ತಮ್ಮ ಕಾಲೆಳೆಯಲು ಅಂತನೇ ಇರುವವರಿಗೆ ಎಚ್ಚರಿಕೆಯ ಸಂದೇಶವನ್ನು ಕೂಡ ನೀಡಿದ್ದಾರೆ.
ಈ ಕುರಿತು ನಿವೇದಿತಾ ಗೌಡ ಬಾತ್‌ರೂಮ್ ಸೆಲ್ಫಿಗಳ ಮೂಲಕ ನಾನು ನನ್ನ ಕೆಲಸ ಮಾಡುತ್ತಿದ್ದೇನೆ, ನೀವು ಕೂಡ ನಿಮ್ಮ ಕೆಲಸ ಮಾಡಿ ಎಂಬರ್ಥದಲ್ಲಿ ಸಾಲುಗಳನ್ನು ಬರೆದುಕೊಂಡಿದ್ದಾರೆ. ಈ ಮೂಲಕ ನನ್ನ ಬದುಕು ನನ್ನದು ನಿಮ್ಮ ಬದುಕು ನಿಮ್ಮದು ಎಂದು ನಿವೇದಿತಾ ಗೌಡ ಹೇಳಿದ್ದಾರೆ.
ಆದರೂ ಕೂಡ ಟ್ರೋಲಿಗರು ಸುಮ್ಮನಾಗಿಲ್ಲ. ನಿಂದಕರು ನಿವೇದಿತಾ ಗೌಡ ಅವರ ಫೋಟೊ ನೋಡಿ ಸುಮ್ಮನೆ ಕುಂತಿಲ್ಲ. ಬದಲಿಗೆ ಎಂದಿನಂತೆ ಕಾಲೆಳೆಯುವ ತಮ್ಮ ಪ್ರವೃತ್ತಿಯನ್ನೇ ಮುಂದುವರೆಸಿದ್ದಾರೆ. ನಿರೀಕ್ಷೆಯಂತೆ ನಿವೇದಿತಾ ಗೌಡ ಅವರ ಈ ಅವತಾರಕ್ಕೂ ಕಾಮೆಂಟ್‌ಗಳ ಸುರಿಮಳೆಯಾಗುತ್ತಿದೆ.ಅರ್ಧ ಚಂದಿರನ ಮೇಲಾಣೆ ಪೂರ್ತಿ ಒಲವಾಗಿದೆ ನಿನ್ನ ಮೇಲೆ ಎಂದು ಬರೆಯುವ ಮೂಲಕ ಅಭಿಮಾನಿಯೊಬ್ಬ ತನ್ನ ಅಭಿಮಾನ ಪ್ರದರ್ಶಿಸಿದ್ದರೆ ಮತ್ತೊಬ್ಬರು ನಿವೇದಿತಾ ಗೌಡ ಮತ್ತು ವಾಣಿಯವರ ಈ ಫೋಟೊಗಳಿಗೆ ಬಾತ್‌ರೂಮ್ ಬೆಗರ್ಸ್ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನುಳಿದಂತೆ ರೀಲ್ಸ್ ಮಾಡುವ ಅಭ್ಯಾಸ ಹೊರತು ಪಡಿಸಿದರೆ ನಿವೇದಿತಾ ಗೌಡ ಬಾಯ್ಸ್ ವರ್ಸಸ್ ಗರ್ಲ್ಸ್ ಕಾರ್ಯಕ್ರಮ ಸೇರಿ ಕೆಲ ಚಿತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆ ಪೈಕಿ ಮುದ್ದು ರಾಕ್ಷಸಿ ಕೂಡ ಒಂದು. ಈ ಚಿತ್ರದಲ್ಲಿ ಮಾಜಿ ಪತಿ ಚಂದನ್ ಶೆಟ್ಟಿ ಜೊತೆ ನಿವೇದಿತಾ ಗೌಡ ತೆರೆಹಂಚಿಕೊಂಡಿದ್ದಾರೆ.ಈ ವರ್ಷ ಈ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ.


Click it and Unblock the Notifications











