ನಿವೇದಿತಾ ಗೌಡ ಹೊಸ ಡಯೆಟ್ ಪ್ಲ್ಯಾನ್: ಎಲ್ಲವೂ ಮಿಸೆಸ್ ಇಂಡಿಯಾಗಾಗಿ!
ಕನ್ನಡ ಕಿರುತೆರೆಯಲ್ಲಿ ಹೆಚ್ಚು ಸಕ್ರಿಯ ಆಗಿರುವ ನಿವೇದಿತಾ ಗೌಡ, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿರುತ್ತಾರೆ. ಅದರಲ್ಲೂ ಯುಟ್ಯೂಬ್ ಚಾನಲ್ ತೆರೆದ ಮೇಲೆ ನಟಿ ನಿವೇದಿತಾ ನಾನಾ ಬಗೆಯ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾರೆ.
ನಿವೇದಿತಾ ಗೌಡ ಸಿನಿಮಾದಲ್ಲಿ ನಟಿಸುತ್ತಿಲ್ಲ. ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಇತ್ತೀಚೆಗೆ ನಿವೇದಿತಾ ಹೊಸ ಸುದ್ದಿಯನ್ನು ಹಂಚಿಕೊಂಡಿದ್ದರು. ನಿವೇದಿತಾ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗಿ ಆಗುವ ಬಗ್ಗೆ ಹೇಳಿಕೊಂಡಿದ್ದರು. ಜೊತೆಗೆ ಈ ಬಗ್ಗೆ ಪುಟ್ಟ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಈಗ ತಮ್ಮ ತಯಾರಿ ಹೇಗಿದೆ ಎನ್ನುವ ಸಂಪೂರ್ಣ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ನಿವೇದಿತ ಗೌಡ ಮಿಸೆಸ್ ಇಂಡಿಯಾ ಕಾಂಪಿಟೇಶನ್‌ನಲ್ಲಿ ಭಾಗವಹಿಸುವುದಾಗಿ ಮೊದಲಿಗೆ ಹೇಳಿಕೊಂಡಿದ್ದರು. ಹಾಗೆ ಅದಕ್ಕಾಗಿ ಬೇಕಾದ ತಯಾರಿ ಕೂಡ ನಡೆಸಿದ್ದರು. ಇದೀಗ ವಿಡಿಯೋ ಒಂದರ ಮೂಲಕ ಮಿಸೆಸ್ ಇಂಡಿಯಾಗಾಗಿ ಯಾವ ರೀತಿ ಸಿದ್ಧತೆ ನಡೆಸಿದ್ದಾರೆ ಎನ್ನುವುದನ್ನು ರಿವೀಲ್ ಮಾಡಿದ್ದಾರೆ.

ವಿಡಿಯೋ ಮೂಲಕ ತಮ್ಮ ಡಯಟ್ ಬಗ್ಗೆ ಹೇಳಿಕೊಂಡಿದ್ದಾರೆ. ಜೊತೆಗೆ ಹೇಗೆ ಫೇಸ್ ಮಸಾಜ್ ಮಾಡಿಕೊಳ್ಳಬೇಕು? ಹಾಗೆ ಯಾವ ರೀತಿಯ ಡ್ರೆಸ್ ಮಾಡಿಕೊಂಡು ಹೋಗಲು ಸಿದ್ಧತೆ ನಡೆಸಿದ್ದಾರೆ? ಎಂಬುದನ್ನು ಈ ವಿಡಿಯೋದಲ್ಲಿ ಹೇಳಿದ್ದಾರೆ.
Recommended Video
ಬೆಳಗ್ಗೆ ತಿಂಡಿಗೆ ಎರಡು ಬ್ರೌನ್ ಬ್ರೆಡ್, ಡ್ರೈ ಫ್ರೂಟ್ಸ್, ಹಣ್ಣು, ಪೀನಟ್ ಬಟರ್ ತಿನ್ನುತ್ತಾರೆ. ನಂತರ ಬಿಸಿ ನೀರಿಗೆ ನಿಂಬೆ ಹಣ್ಣಿನ ರಸ ಮತ್ತು ಹಸಿ ಶುಠಿ ಮಿಶ್ರಣದ ಜ್ಯೂಸ್ ಕುಡಿಯುತ್ತಾರೆ. ಇದರ ಜೊತೆಗೆ ತಮ್ಮ ಫೇಸ್ ಮಸಾಜ್ ಮಾಡಿಕೊಳೋದು ಹೇಗೆ ಎನ್ನುವುದನ್ನು ಕೂಡ ತೋರಿಸಿಕೊಟ್ಟಿದ್ದಾರೆ.


Click it and Unblock the Notifications











