For Quick Alerts
  ALLOW NOTIFICATIONS  
  For Daily Alerts

  'Mrs.ಇಂಡಿಯಾ' ಸ್ಪರ್ಧೆ ಗೆದ್ದು ಬಂದ ನಿವೇದಿತಾ ಗೌಡ!

  |

  ನಿವೇದಿತ ಗೌಡ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಈ ಬಗ್ಗೆ ಸದಾ ನಿವೇದಿತಾ ಗೌಡ ಮಾಹಿತಿಯನ್ನು ಹಂಚಿಕೊಳ್ಳುತ್ತಾ ಇದ್ದರು. ನಿವೇದಿತಾ ಮಿಸೆಸ್ ಇಂಡಿಯಾಗಾಗಿ ತಾನು ನಡೆಸುತ್ತಿರುವ ತಯಾರಿ ಸೇರಿದಂತೆ ಹಲವು ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದರು.

  ನಿವೇದಿತಾ ಗೌಡ ಸಿನಿಮಾದಲ್ಲಿ ನಟಿಸುತ್ತಿಲ್ಲ. ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಇತ್ತೀಚೆಗೆ ನಿವೇದಿತಾ ಹೊಸ ಸುದ್ದಿಯನ್ನು ಹಂಚಿಕೊಂಡಿದ್ದರು. ನಿವೇದಿತಾ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗಿ ಆಗುವ ಬಗ್ಗೆ ಹೇಳಿಕೊಂಡಿದ್ದರು. ಜೊತೆಗೆ ಈ ಬಗ್ಗೆ ಪುಟ್ಟ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು.

  ನಿವೇದಿತಾ ಗೌಡ ಹೊಸ ಡಯೆಟ್ ಪ್ಲ್ಯಾನ್: ಎಲ್ಲವೂ ಮಿಸೆಸ್ ಇಂಡಿಯಾಗಾಗಿ!ನಿವೇದಿತಾ ಗೌಡ ಹೊಸ ಡಯೆಟ್ ಪ್ಲ್ಯಾನ್: ಎಲ್ಲವೂ ಮಿಸೆಸ್ ಇಂಡಿಯಾಗಾಗಿ!

  ನಿವೇದಿತಾ ಗೌಡ ಅಭಿಮಾನಿ ಬಳಗ ದೊಡ್ಡದು. ಹಾಗಾಗಿ ನಿವೇದಿತಾ ಸಾಮಾಜಿಕ ಜಾಲತಾಣದಲ್ಲಿ ಏನೇ ಮಾಡಿದ್ರು, ಸಿಕ್ಕ ಪಟ್ಟೆ ವೈರಲ್ ಆಗಿ ಬಿಡುತ್ತದೆ. ಸಿನಿಮಾಗಳಲ್ಲಿ ನಟಿಸದೇ ಇದ್ದರೂ, ಕೂಡ ನಿವೇದಿತಾಗೆ ದೊಡ್ಡ ಮಟ್ಟದಲ್ಲಿ ಬೇಡಿಕೆ ಇದ್ದೇ ಇದೆ. ಸದ್ಯ ನಿವೇದಿತಾ ಈ ಸ್ಪರ್ಧೆಯಲ್ಲಿ ಗೆದ್ದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಮುಂದೆ ಓದಿ.

  'Mrs.ಇಂಡಿಯಾ' ನಿವೇದಿತಾ!

  ನಿವೇದಿತಾ ಗೌಡ ಮಿಸೆಸ್ ಇಂಡಿಯಾ ಸ್ಪರ್ಧೆಗೆ ಎಂಟ್ರಿ ಕೊಟ್ಟಾಗಿನಿಂದ, ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ನಿವೇದಿತಾ ಗೌಡ ಈ ಸ್ಪರ್ಧೆಯಲ್ಲಿ ವಿಜೇತರಾಗಲಿ ಎಂದು ಅಭಿಮಾನಿಗಳು ಶುಭಕೋರುತ್ತಿದ್ದರು. ಅಂತೆಯೇ ನಿವೇದಿತಾ ಗೌಡ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. 'ವಿನ್ನರ್ ಆಫ್ ಪೀಪಲ್ಸ್ ಚಾಯ್ಸ್ 2022 ಆಫ್ Mrs.ಇಂಡಿಯಾ.' ಎನ್ನುವ ಬಿರುದನ್ನು ನಿವೇದಿತಾ ಮುಡಿಗೇರಿಸಿಕೊಂಡಿದ್ದು, ಜನರ ಆಯ್ಕೆಯ ವಿಭಾಗದಲ್ಲಿ ಈ ಪ್ರಶಸ್ತಿಗೆ ಪಡೆದುಕೊಂಡಿದ್ದಾರೆ.

  ಉಪೇಂದ್ರ ಹಾಡಿಗೆ 'ಮಸ್ತು, ಮಸ್ತಾ'ಗಿ ಕುಣಿದ ನಿವೇದಿತಾ: ಭೇಷ್ ಎಂದ ನೆಟ್ಟಿಗರು!ಉಪೇಂದ್ರ ಹಾಡಿಗೆ 'ಮಸ್ತು, ಮಸ್ತಾ'ಗಿ ಕುಣಿದ ನಿವೇದಿತಾ: ಭೇಷ್ ಎಂದ ನೆಟ್ಟಿಗರು!

  ಸಂತಸ ಹಂಚಿಕೊಂಡ ನಿವೇದಿತಾ!

  Mrs.ಇಂಡಿಯಾ ಕಿರಿಟಾವನ್ನು ಮುಡಿಗೇರಿಸಿಕೊಂಡ ನಿವೇದಿತಾ ಗೌಡ, ಈ ಸಂತಸವನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಂಚಿಕೊಳ್ಳುವ ಮೂಲಕ ಈ ವಿಚಾರ ಹಂಚಿಕೊಂಡಿದ್ದಾರೆ. "ಕೊನೆಯದಾಗಿ, ಜನರ ಹೃದಯವನ್ನು ಗೆದ್ದು, ಯಾವುದಾದರೂ ಒಂದು ರೀತಿಯಲ್ಲಿ ನಾವು ಅವರ ಮನ ಮುಟ್ಟುವುದೇ ನಿಜವಾದ ಸಾಧನೆ ಅಲ್ಲವೇ? ಮಿಸೆಸ್ ಇಂಡಿಯಾ ಇಂಕ್‌ನ ಪೀಪಲ್ಸ್ ಚಾಯ್ಸ್ 2022ರ ವಿಜೇತರಾದ ಶ್ರೀಮತಿ ನಿವೇದಿತಾ ಗೌಡ ಅವರು ತಮ್ಮ ಉಪಸ್ಥಿತಿಯಿಂದ ಲಕ್ಷಾಂತರ ಜನರ ಹೃದಯವನ್ನು ಗೆದ್ದಿದ್ದಾರೆ". ಎಂದು ಸಂಸ್ಥೆ ಸಂದೇಶ ಬರೆದುಕೊಂಡಿದೆ. ಇದನ್ನೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಕ್ಯಾಟ್‌ವಾಕ್ ವಿಡಿಯೋ ವೈರಲ್!

  ಕ್ಯಾಟ್‌ವಾಕ್ ವಿಡಿಯೋ ವೈರಲ್!

  ಇನ್ನು ನಿವೇದಿತಾ ಮಿಸೆಸ್. ಇಂಡಿಯಾಗಾಗಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದರು. ಕ್ಯಾಟ್ ವಾಕ್ ಮಾಡುವುದರಿಂದ ಹಿಡಿದು, ಸ್ಟೈಲಿಶ್ ಮ್ಯಾನರಿಸಂ ಸೇರಿದಂತೆ ಹಲವು ವಿಚಾರಗಳಲ್ಲಿ ಟ್ರೈನಿಂಗ್ ಪಡೆದು ಕೊಂಡಿದ್ದರು. ಇದಕ್ಕಾಗಿ ಹಲವು ಫೋಟೊಶೂಟ್ ಕೂಡ ಮಾಡಿಸಲಾಗಿದೆ. ಈ ವಿಡಿಯೋವನ್ನು ನಿವೇದಿತಾ ಹಂಚಿಕೊಳ್ಳುತ್ತಲೆ ಅಭಿಮಾನಿಗಳು ಶುಭಕೋರಿದ್ದರು.

  ನಿವೇದಿತಾ ಸಿನಿಮಾದಲ್ಲಿ ನಟಿಸುತ್ತಾರಾ?

  ನಿವೇದಿತಾ ಸಿನಿಮಾದಲ್ಲಿ ನಟಿಸುತ್ತಾರಾ?

  ನಟಿ ನಿವೇದಿತಾ ಗೌಡ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಈಗ ಮಿಸೆಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಆಲ್ಬಂ ಹಾಡು, ಕಿರುತೆರೆಯಲ್ಲಿ ನಿವೇದಿತಾ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇನ್ನು ತಮ್ಮದೇ ಯುಟ್ಯೂಬ್ ಚಾನೆಲ್‌ನಲ್ಲಿ ಹಲವು ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಈಗ ನಿವೇದಿತಾ ಮುಂದಿನ ನಡೆ ಏನು ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಸೃಷ್ಟಿಯಾಗಿದೆ.

  English summary
  Niveditha Gowda Winner of People's Choice 2022 Of Mrs India Inc, Know More,
  Friday, July 22, 2022, 13:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X