ಸ್ನೇಹಿತೆಯ ಜೊತೆ ಮತ್ತೆ ಬಾತ್‌ರೂಮ್ ಸೇರಿಕೊಂಡ ನಿವೇದಿತಾ ಗೌಡ, ಫೋಟೊಗಳು ವೈರಲ್...!
ಸಾಮಾನ್ಯವಾಗಿ ವಿಪರೀತವಾಗಿ ರೇಗಿಸಿ ತೆಪ್ಪಗಿದ್ದವರನ್ನು ಪದೇ ಪದೇ ಕೆಣಕಿದರೆ ಎಂತವರಿಗಾದರೂ ಪಿತ್ತ ನೆತ್ತಿಗೇರುತ್ತೆ. ಆದರೆ ನಿವೇದಿತಾ ಗೌಡ ಇದಕ್ಕೆ ಸಂಪೂರ್ಣ ತದ್ವಿರುದ್ದ. ಟ್ರೋಲಿಗರ ಪಾಲಿಗೆ ತಾನು ಯಾವತ್ತು ಇದ್ದರೂ ಎಲೆ ಅಡಿಕೆ ಎನ್ನುವ ವಿಚಾರ ಗೊತ್ತಿದ್ದರೂ ಕೂಡ ನಿವೇದಿತಾ ಗೌಡ ತಲೆ ಕೆಡಿಸಿಕೊಂಡಿಲ್ಲ. ಕಾಲೆಳೆಯುವರನ್ನು ಕಂಡು ಕೆಂಡವನ್ನೂ ಕಾರಿಲ್ಲ.
ಬದಲಿಗೆ ಯಾರೇನೇ ಅಂದರೂ ಇನ್‌ಸ್ಟಾಗ್ರಾಮ್ ನನ್ನ ದೇವರೂ ಎಂದುಕೊಂಡು ಒಂದಾದ ಮೇಲೊಂದು ವಿಡಿಯೋವನ್ನು ಹಂಚಿಕೊಳ್ಳುತ್ತಾನೇ ಬರುತ್ತಿದ್ದಾರೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳಬಾರದು ಆಗಲೇ ಜೀವನದಲ್ಲಿ ನಾವು ಮುಂದೆ ಬರುವುದು ಸಾಧ್ಯವೆಂದುಕೊಂಡು ತಮ್ಮ ಬಾತ್ ರೂಮ್‌ದಿಂದ ವಿಡಿಯೋಗಳನ್ನು ಹಂಚಿಕೊಳ್ಳುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಇದಕ್ಕೆ ವೈರಲ್ ಆದ ಹೊಸ ಫೋಟೊಗಳು ಸಾಕ್ಷಿ.

ಹೌದು, ಸದಾ ಕಾಲ ಬಾತ್‌ರೂಮ್‌ನಲ್ಲಿ ಬಳಕುವ ನಿವೇದಿತಾ ಗೌಡ ಸದ್ಯ ತಮ್ಮ ನೆಚ್ಚಿನ ಬಾತ್‌ರೂಮ್‌ದಿಂದ ಕೆಲ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಕನ್ನಡಿಯ ಮುಂದೆ ನಿಂತು ಮೈ ಮರೆತಂತೆ ಫೋಟೊ ಕ್ಲಿಕಿಸಿಕೊಂಡು ಅದನ್ನು ಶೇರ್ ಮಾಡುವ ಮೂಲಕ ಪಡ್ಡೆಗಳನ್ನು ಕೆಣಕಿದ್ದಾರೆ.
ಇನ್ನು ಎಲ್ಲರಿಗೆ ಗೊತ್ತಿರುವಂತೆ ಇವರ 1,949,118 ಅಭಿಮಾನಿಗಳು ಸದಾ ಕಾಲ ನಿವೇದಿತಾ ಹೊಸದೊಂದು ಭಾವಚಿತ್ರ ಅಥವಾ ವಿಡಿಯೋ ಹಂಚಿಕೊಳ್ಳಲಿ ಎಂದು ಕಾಯುತ್ತಿರುತ್ತಾರೆ. ಇದಕ್ಕೆ ಪುರಾವೆ ಎನ್ನುವಂತೆ ನಿವೇದಿತಾ ಹೊಸದೊಂದು ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆ ಮಾಡುವ ಕೆಲಸವನ್ನೆಲ್ಲ ಪಕ್ಕಕ್ಕಿಟ್ಟು ಇನ್‌ಸ್ಟಾಗ್ರಾಮ್‌ನಲ್ಲಿ ಸಕ್ರಿಯರಾಗುವ ಅನೇಕರು ಹಿಂದೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈಗಲೂ ವ್ಯಕ್ತಪಡಿಸುತ್ತಿದ್ದಾರೆ. ಬಾತ್‌ರೂಮ್ ಮತ್ತು ನಿಮ್ಮ ನಡುವೆ ಇರುವ ಈ ಅವಿನಾಭಾವ ಸಂಬಂಧದ ಬಗ್ಗೆ ನಾಲ್ಕು ಮಾತುಗಳನ್ನು ಮಾತನಾಡಿ ಎಂದು ಮನವಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಸದಾ ಕಾಲ ಬಾತ್‌ರೂಮ್‌ನಲ್ಲಿಯೇ ಇರ್ತಿರಾ ನಿಮಗೆ ಬೋರ್ ಆಗಲ್ವಾ ಎನ್ನುವ ಪ್ರಶ್ನೆಯನ್ನು ಮಾಡುತ್ತಿದ್ದಾರೆ.
ಇನ್ನೂ ಕೆಲವರು ನಿವೇದಿತಾ ಗೌಡ ಅವರ ಈ ಬಾಡಿಕಾನ್ ಡ್ರೆಸ್ ಮತ್ತು ಮೂರು ಎಳೆಯುಳ್ಳ ಸರಕ್ಕೆ ಹಿಟ್ ಮಾಡಿಕೊಂಡು ತಮ್ಮ ಕೆಂಪಾದ ಹೃದಯ ಮತ್ತು ಫೈರ್ ಎಮೋಜಿಯನ್ನು ಕಾಮೆಂಟ್ ಮಾಡುತ್ತಿದ್ದಾರೆ. ಅಂದ್ಹಾಗೇ ಎಂದಿನಂತೆ ಈ ಬಾರಿ ಕೂಡ ನಿವೇದಿತಾ ಗೌಡ ಅವರ ಸ್ನೇಹಿತೆ ಕೂಡ ಇದ್ದಾರೆ. ಮಿರರ್ ಮುಂದೆ ನಿಂತು ನಿವೇದಿತಾ ಗೌಡ ಅವರ ಜೊತೆ ಫೋಸ್ ಕೊಟ್ಟಿದ್ದಾರೆ.
ಸದ್ಯಕ್ಕೆ ಈ ಫೋಟೊಗಳಿಗೆ ಕೇವಲ ಎರಡ ಗಂಟೆಯಲ್ಲಿ ಹದಿನಾರು ಸಾವಿರಕ್ಕೂ ಅಧಿಕ ಲೈಕ್ಸ್‌ಗಳು ಬಂದಿವೆ. 221ಕ್ಕೂ ಅಧಿಕ ಜನ ತಮ್ಮ ಮನದ ಮಾತುಗಳನ್ನು ಕಾಮೆಂಟ್ ಮೂಲಕ ತಿಳಿಸಿದ್ದಾರೆ. ಇನ್ನುಳಿದಂತೆ 'ವಾಲು ಕಳ್ಳತಾ' ಹಾಡಿನ ಮೂಲಕ ತೆಲುಗು ಚಿತ್ರರಂಗವನ್ನು ಪ್ರವೇಶಿಸಿರುವ ನಿವೇದಿತಾ ಗೌಡ ಸದ್ಯ ಕನ್ನಡ ಮತ್ತು ತೆಲುಗಿನಲ್ಲಿ ಒಳ್ಳೆಯ ಅವಕಾಶಗಳನ್ನು ಎದುರು ನೋಡುತ್ತಿದ್ದಾರೆ. ಇನ್ನು ಮಾಜಿ ಪತಿ ಚಂದನ್ ಶೆಟ್ಟಿ ಜೊತೆ ನಿವೇದಿತಾ ಗೌಡ 'ಮುದ್ದು ರಾಕ್ಷಸಿ' ಎಂಬ ಚಿತ್ರದಲ್ಲಿ ಕೂಡ ಆಕ್ಟ್ ಮಾಡಿದ್ದಾರೆ. ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಪುನೀತ್ ಶ್ರೀನಿವಾಸ್ ಈ ಚಿತ್ರದ ಕಥೆ ಚಿತ್ರಕಥೆಯನ್ನು ಬರೆದು ನಿರ್ದೇಶಿಸಿದ್ದಾರೆ. ಮೋಹನ್ ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇನ್ನೂ ಸೈಕೋ ಥ್ರಿಲ್ಲರ್ ಕಥಾಹಂದರ ಈ ಚಿತ್ರದ ಚಿತ್ರೀಕರಣ ಬಹುತೇಕ ಬೆಂಗಳೂರಿನಲ್ಲಿಯೇ ನಡೆದಿದೆ. ಎಂ ಎಸ್ ತ್ಯಾಗರಾಜ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಎ ಕರುಣಾಕರ್ ಚಿತ್ರದ ಛಾಯಾಗ್ರಹಣ ಮಾಡಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.


Click it and Unblock the Notifications











