ವೈರಲ್ ಆಯಿತು ಸ್ನೇಹಿತೆಯ ಜೊತೆಗಿನ ನಿವೇದಿತಾ ಗೌಡ ವಿಡಿಯೋ, ನೆಟ್ಟಿಗರು ಶಾಕ್..!
ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಗೆ ಒಳಗಾಗಲೂ ಏನೇನೂ ಮಾಡಬಾರದೋ ಅದೆಲ್ಲವನ್ನು ಚಾಚು ತಪ್ಪದೇ ಪಾಲಿಸುವರಲ್ಲಿ ಮೊದಲಿಗರು ನಿವೇದಿತಾ ಗೌಡ. ಯಾರೇ ಹೋರಾಡಲಿ, ಬಾತ್ ರೂಮ್ ಅಲ್ಲಾಡಲಿ ಅನ್ನುವ ಮನಸ್ಥಿತಿ ಇವರದ್ದು. ಇದಕ್ಕೆ ಕೈಗನ್ನಡಿ ಎಂಬಂತೆ ಇಲ್ಲಿಯವರೆಗೆ ತಮ್ಮ ಬಾತ್ ರೂಮ್‌ನಿಂದ ನಿವೇದಿತಾ ಗೌಡ ಹತ್ತು ಹಲವು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ರೀಲ್ಸ್ ಮಾಡಿದ್ದಾರೆ.
ಹೀಗೆ ನಿವೇದಿತಾ ಗೌಡ ರೀಲ್ಸ್ ಮಾಡಿದಾಗೆಲ್ಲ ಅನೇಕರು ನಿವೇದಿತಾ ಗೌಡ ಅವರ ಮೇಲೆ ಕೆಂಡವನ್ನು ಕಾರಿದ್ದಾರೆ. ಕೊನೆ ಪಕ್ಷ ಬಾತ್‌ರೂಮ್‌ನಿಂದ ಆಚೆ ಬಂದು ಯಾವುದಾದರೂ ಚೆಂದದ ಲೊಕೇಶನ್ ನಲ್ಲಿ ರೀಲ್ಸ್ ಮಾಡಿ ಎಂಬ ಸಲಹೆಯನ್ನು ನೀಡಿದ್ದಾರೆ, ಮನವಿಯನ್ನು ಕೂಡ ಮಾಡಿಕೊಂಡಿದ್ದಾರೆ. ಆದರೆ ನಿವೇದಿತಾ ಗೌಡ ಇದ್ಯಾವುದಕ್ಕೂ ಸೊಪ್ಪು ಹಾಕಿಲ್ಲ. ತಮ್ಮ ಮನೆಯ ಸ್ನಾನ ಗೃಹ ಬಿಟ್ಟು ಹೊರ ಬರುತ್ತಿಲ್ಲ. ಇದಕ್ಕೆ ವೈರಲ್ ಆದ ಮತ್ತೊಂದು ವಿಡಿಯೋ ಸಾಕ್ಷಿ.

ಹೌದು, ಹೆಚ್ಚೇನ್ ಇಲ್ಲ ಈಗ ಒಂದೂವರೆ ತಿಂಗಳ ಹಿಂದೆ ನಿವೇದಿತಾ ಗೌಡ ತಮ್ಮ ತಮ್ಮ ಆಪ್ತ ಸ್ನೇಹಿತೆ ವಾಣಿ ಜೊತೆ ತಮ್ಮ ಬೆಡ್ ರೂಮ್‌ನಲ್ಲಿ ಕಳೆದ ಕೆಲ ಸುಂದರ ಕ್ಷಣಗಳನ್ನೂ ಹಂಚಿಕೊಂಡಿದ್ದರು. ಸ್ನೇಹಿತೆಯನ್ನು ಅಪ್ಪಿಕೊಂಡಿದ್ದರು. ಬಿದ್ದು ಬಿದ್ದು ನಕ್ಕಿದ್ದರು. ಆದರೆ ಇದಕ್ಕೂ ಹಲವಾರು ತಗಾದೆ ತೆಗೆದಿದ್ದರು. ನಿವೇದಿತಾ ಗೌಡ ಅವರ ಕಾಮೆಂಟ್ ಸೆಕ್ಷನ್‌ಗೆ ಬಂದು ಕೆಟ್ಟಾ ಕೊಳಕು ಮಾತುಗಳನ್ನಾಡುತ್ತಿದ್ದರು. ಚಂದನ್ ಶೆಟ್ಟಿ ಅವರಿಗೆ ಡಿವೋರ್ಸ್ ನೀಡಿದ್ದು ಇದೇ ಕಾರಣಕ್ಕಾ ಎಂದು ಪ್ರಶ್ನೆಯನ್ನು ಮಾಡಿದ್ದರು. ನಮಗ್ಯಾಕೋ ಅನುಮಾನ ಶುರುವಾಗುತ್ತಿದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.
ಆದರೆ ಇದ್ಯಾವುದಕ್ಕೂ ನಿವೇದಿತಾ ಗೌಡ ಆಗಲೂ ತಲೆ ಕೆಡಿಸಿಕೊಂಡಿಲ್ಲ. ಈಗಲೂ ತಲೆ ಕೆಡಿಸಿಕೊಂಡಿಲ್ಲ. ಇದಕ್ಕೆ ಪುರಾವೆ ಎಂಬಂತೆ ನಿವೇದಿತಾ ಗೌಡ ಈಗ ತಮ್ಮ ಅದೇ ಸ್ನೇಹಿತೆ ವಾಣಿ ಜೊತೆ ಮತ್ತೊಂದು ವಿಡಿಯೋವನ್ನು ಸೀದಾ ಬಾತ್ ರೂಮ್‌ನಿಂದ ಹಂಚಿಕೊಂಡಿದ್ದಾರೆ. ಸ್ನೇಹಿತೆಯ ಜೊತೆ ಮೈಚಳಿ ಬಿಟ್ಟು ಡಾನ್ಸ್ ಮಾಡಿದ್ದಾರೆ. ಈ ಮೂಲಕ ಮತ್ತೊಮ್ಮೆ ಚರ್ಚೆಗೀಡಾಗಿದ್ದಾರೆ.
ಸದ್ಯ ನಿವೇದಿತಾ ಗೌಡ ಮತ್ತು ವಾಣಿಯವರ ಈ ಹೊಸ ವಿಡಿಯೋಗೆ ಹಲವಾರು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಎಂದಿನಂತೆ ಒಂದು ವರ್ಗ ನಿವೇದಿತಾ ಗೌಡ ಅವರ ವಿರುದ್ಧ ತೀರಾ ಹೊಲಸು ಮಾತುಗಳನ್ನಾಡುತ್ತಿದೆ. ಇದ್ಯಾಕೋ ಅತಿಯಾಯ್ತು ಎಂದು ಒಂದು ವರ್ಗ ಕಾಮೆಂಟ್ ಮಾಡುತ್ತಿದೆ. ಚಂದನ್ ಶೆಟ್ಟಿ ಅವರಿಗೆ ಡಿವೋರ್ಸ್ ನೀಡಿದ್ದು ಇದೇ ಕಾರಣಕ್ಕಾ ಎಂದು ಪ್ರಶ್ನೆಯನ್ನು ಮಾಡುತ್ತಿದೆ. ನಮಗ್ಯಾಕೋ ಅನುಮಾನ ಶುರುವಾಗುತ್ತಿದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದೆ.
ಅಂದ್ಹಾಗೇ ನಿವೇದಿತಾ ಗೌಡ ಇದೇ ಮೊದಲ ಬಾರಿ ವಾಣಿ ಅವರ ಜೊತೆ ರೀಲ್ಸ್ ಮಾಡಿಲ್ಲ. ಈ ಹಿಂದೆ ಕೂಡ ಅಂದರೆ ಚಂದನ್ ಶೆಟ್ಟಿ ಅವರಿಂದ ದೂರವಾದ ನಂತರವೂ ಕೂಡ ನಿವೇದಿತಾ ಗೌಡ ವಾಣಿ ಅವರ ಜೊತೆ ವಿಡಿಯೋಗಳನ್ನು ಹಂಚಿಕೊಂಡಿದ್ದರು. ಆದರೆ, ಆಗ ವ್ಯಕ್ತವಾಗದ ಅಭಿಪ್ರಾಯಗಳು ಈಗ ಈ ವಿಡಿಯೀ ನಂತರ ವ್ಯಕ್ತವಾಗುತ್ತಿವೆ. ನಿವೇದಿತಾ ಗೌಡ ಅವರ ಈ ಹೊಸ ರೀಲ್ಸ್ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ಹತ್ ಹತ್ರ ಮೂರು ದಿನದಲ್ಲಿ ಮೂವತ್ತು ಸಾವಿರ ಲೈಕ್ಸ್‌ಗಳನ್ನು ಈ ವಿಡಿಯೋ ಪಡೆದುಕೊಂಡಿದೆ.
ಇನ್ನುಳಿದಂತೆ ಕೇವಲ ಇದೊಂದೆ ವಿಡಿಯೋ ಅಲ್ಲ ನಿವೇದಿತಾ ಗೌಡ ತಮ್ಮ ಸ್ನೇಹಿತೆ ವಾಣಿ ಜೊತೆ ಇನ್ನೊಂದು ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ. ಆ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹಲವರ ಗಮನ ಸೆಳೆಯುತ್ತಿದೆ. ಆ ವಿಡಿಯೋಗೆ ಕೂಡ ಹಕವಾರು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.


Click it and Unblock the Notifications











