»   » ಲೈಂಗಿಕ ಕಿರುಕುಳದ ಬಗ್ಗೆ 21 ವರ್ಷದ ನಂತರ ಸತ್ಯ ಹೊರಹಾಕಿದ ನಟಿ

ಲೈಂಗಿಕ ಕಿರುಕುಳದ ಬಗ್ಗೆ 21 ವರ್ಷದ ನಂತರ ಸತ್ಯ ಹೊರಹಾಕಿದ ನಟಿ

Posted By:
Subscribe to Filmibeat Kannada

ಇತ್ತೀಚಿನ ದಿನಗಳಲ್ಲಿ ಸಿನಿಮಾ ನಟಿಯ ಮೇಲೆ ಲೈಂಗಿಕ ಕಿರುಕುಳ, ಸಿನಿಮಾರಂಗದಲ್ಲಿ ಲೈಂಗಿಕ ಕಿರುಕುಳದ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಕಥುವಾದಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ವಿಚಾರವಾಗಿ ಇಡೀ ಸಿನಿಮಾರಂಗ ಧ್ವನಿ ಎತ್ತಿದ್ದು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ.

ಈ ಪ್ರಕರಣ ಜನರಿಗೆ ತಲುಪುತ್ತಿರುವ ಬೆನ್ನಲ್ಲೆ ಕಾಲಿವುಡ್ ನಟಿ ತಾನೂ ಕೂಡ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ನಟಿ ನಿವೇತಾ ಪೇತುರಾಜ್ ಆಕೆಯ ಮೇಲಾದ ಲೈಂಗಿಕ ಕಿರುಕುಳದ ಬಗ್ಗೆ ವಿಡಿಯೋ ಮಾಡಿ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಕಾಶ್ಮೀರದ ಬಾಲಕಿಯ ಅತ್ಯಾಚಾರ ವಿರುದ್ಧ ಧ್ವನಿ ಎತ್ತಿದ ಬಾಲಿವುಡ್ ನಟಿಯರು

ಅಷ್ಟೇ ಅಲ್ಲದೆ ಮಕ್ಕಳನ್ನ ಎಷ್ಟು ಸುರಕ್ಷತೆಯಿಂದ ಕಾಪಾಡಿಕೊಳ್ಳಬೇಕು ಎನ್ನುವ ವಿಚಾರವಾಗಿಯೋ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಹಾಗಾದರೆ ನಿವೇತಾ ಪೇತುರಾಜ್ ಅವರಿಗೆ ಲೈಂಗಿಕ ಕಿರುಕುಳ ಕೊಟ್ಟವರು ಯಾರು? ನಟಿ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ಏನಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

ಲೈಂಗಿಕ ಕಿರುಕುಳದ ಬಗ್ಗೆ ನಟಿ ಬಿಚ್ಚಿಟ್ಟ ಸತ್ಯ

ಕಾಲಿವುಡ್ ನಟಿ ನಿವೇತಾ ಪೇತುರಾಜ್ ನಾನು ಐದು ವರ್ಷವಿದ್ದಾಗ ನನಗೆ ಲೈಂಗಿಕ ಕಿರುಕುಳ ನೀಡಿದ್ದರು ಎನ್ನುವ ಸತ್ಯವನ್ನ ಬಿಚ್ಚಿಟ್ಟಿದ್ದಾರೆ. ಕಥುವಾ ಅತ್ಯಾಚಾರ ಮತ್ತು ಸಾವಿನ ವಿಚಾರದ ಬಗ್ಗೆ ಮಾತನಾಡುವಾಗ ಈ ಬಗ್ಗೆ ನಿವೇತಾ ಹೇಳಿಕೊಂಡಿದ್ದಾರೆ.

ಪರಿಚಯ ಇದ್ದವರೇ ಮಾಡುವ ಕೆಲಸ

ಮಕ್ಕಳ ಮೇಲಿನ ಲೈಂಗಿಕ ಕಿರುಕುಳ, ಅತ್ಯಾಚರ ಹೆಚ್ಚಿನ ಮಟ್ಟದಲ್ಲಿ ಪರಿಚಯ ಇರುವವರಿಂದಲೇ ಆಗುತ್ತದೆ. ಸಂಬಂದಿಕರು, ಸ್ನೇಹಿತರು ಮನೆಯ ಅಕ್ಕ-ಪಕ್ಕದವರು ಇವರುಗಳೇ ಕೆಲವು ಬಾರಿ ಶತ್ರುಗಳಾಗಿ ಇಂತಹ ಕೆಲಸಗಳನ್ನು ಮಾಡುತ್ತಾರೆ. ಆದ್ದರಿಂದ ಪೋಷಕರು ಮಕ್ಕಳ ಮೇಲೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ವಿಡಿಯೋದಲ್ಲಿ ನಟಿ ನಿವೇತಾ ಹೇಳಿದ್ದಾರೆ.

ನಿಮ್ಮ ಮಕ್ಕಳಿಗೆ ತಿಳಿ ಹೇಳಿ

ಈಗಿನ ಕಾಲದಲ್ಲಿ ಮಕ್ಕಳಿಗೆ ಎರಡು ವರ್ಷವಿದ್ದಾಗಲೇ ಲೈಂಗಿಕ ಕಿರುಕುಳದ ಬಗ್ಗೆ ತಿಳಿಸಿ ಹೇಳಲು ಪ್ರಯತ್ನ ಪಡಿ. ಯಾಕೆಂದರೆ ಯಾವಗ ಏನು ಆಗುತ್ತದೆ ಎನ್ನುವ ವಿಚಾರ ಯಾರಿಗೂ ತಿಳಿಯುತ್ತಿಲ್ಲ. ಮಕ್ಕಳಿಗೆ ಯಾವುದು ಗುಡ್ ಟಚ್ ಮತ್ತು ಬ್ಯಾಡ್ ಟಚ್ ಎನ್ನುವುದನ್ನ ತಿಳಿಸಿ. ಯಾವ ನೋವಿ ಏನನ್ನು ಸೂಚಿಸುತ್ತದೆ ಎನ್ನುವುದನ್ನು ಹೇಳಿ ಕೊಡಿ ಮಕ್ಕಳ ಮೇಲಿನ ಎಲ್ಲಿ ಬೇಕಾದರೂ ದೌರ್ಜನ್ಯ ನಡೆಯಬಹುದು ಎಂದಿದ್ದಾರೆ.

ನಿಮ್ಮವರಿಗೆ ನೀವೆ ರಕ್ಷಕರು

ಈ ಎಲ್ಲಾ ವಿಚಾರಗಳ ಜೊತೆಗೆ ನಿಮ್ಮ ಮನೆಯ ಸುತ್ತಾ ಮುತ್ತಲಿನ ರಸ್ತೆಯಲ್ಲಿ ಯಾರು ಹೇಗೆ ನಡೆದುಕೊಳ್ಳುತ್ತಾರೆ ಎನ್ನುವುದನ್ನ ನೀವೆ ನೋಡಿಕೊಳ್ಳಬೇಕು. ನಿಮ್ಮವರ ಬಗ್ಗೆ ಹೆಚ್ಚಿನ ಕಾಳಜಿ ಮತ್ತು ರಕ್ಷಣೆ ಮಾಡಬೇಕು ಎಂದು ನಟಿ ನಿವೇತಾ ಹೇಳಿದ್ದಾರೆ.

ಕಾಲಿವುಡ್ ನಟಿ ನಿವೇತಾ ಪೇತುರಾಜ್

ನಿವೇತಾ ಪೇತುರಾಜ್ ತಮಿಳು ಸಿನಿಮಾ ನಟಿ. "ಒರು ನಾಲ್ ಕೂತು" ಹಾಗೂ "ಪೊಧವಗ ಎಮ್ಮಾನಾಸು ತಂಗಮ್" ಚಿತ್ರಗಳಲ್ಲಿ ನಟಿಯಾಗಿ ಅಭಿನಯಿಸಿದ್ದಾರೆ ಅಷ್ಟೇ ಅಲ್ಲೆ ಟಾಲಿವುಡ್ ನಲ್ಲಿ ಮೆಂಟಲ್ ಮದಿಲ್ ಎಂಬ ಸಿನಿಮಾದಲ್ಲಿಯೋ ನಿವೇತಾ ಅಭಿನಯವಿದೆ.

ನಟಿಯರಿಗೆ ಹೊಸ ಅವಕಾಶ ಬೇಕಾದರೆ ಮಂಚ ಏರಬೇಕು: ಮಂಡ್ಯ ರಮೇಶ್

English summary
actress Nivetha Pethuraj, who is known for films like "Oru Naal Koothu" has joined the clamour of voices asking for women's safety and security. Revealing that she too had been sexually harassed when she was five years of age, Nivetha pointed out that the perpetrators of such crimes were mostly men who were known to the family.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X