ಶಿವಣ್ಣ ಮಾಡಿರೋ ಈ 2 ದಾಖಲೆಗಳನ್ನು ಭಾರತದ ಯಾವ ನಟನೂ ಮುರಿಯಲಾರ ಎಂದ ಪ್ರಥಮ್!

ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಕಾಲಿಟ್ಟು ತನ್ನ ಮಾತು ಹಾಗೂ ವಿಭಿನ್ನ ನಡವಳಿಕೆಯಿಂದ ಪ್ರೇಕ್ಷಕರ ಮನಗೆದ್ದು, ಹೆಸರು ಮಾಡಿದ ಪ್ರಥಮ್ ಆ ಆವೃತ್ತಿಯಲ್ಲಿ ವಿನ್ನರ್ ಆಗಿ ಹೊರಹೊಮ್ಮುವ ಮೂಲಕ ಹೆಸರು ಮಾಡಿದ್ದರು. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಗೆದ್ದ ಬೆನ್ನಲ್ಲೇ ಸಿನಿಮಾ ಕ್ಷೇತ್ರಕ್ಕೂ ಸಹ ಎಂಟ್ರಿಕೊಟ್ಟ ಪ್ರಥಮ್ ಹೀರೊ ಸಹ ಆಗಿಬಿಟ್ಟರು.

ಹೌದು, 2018ರಲ್ಲಿ ಬಿಡುಗಡೆಗೊಂಡ ಎಂಎಲ್ಎ ಸಿನಿಮಾ ಮೂಲಕ ನಾಯಕನಾಗಿ ಸಿನಿ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ಒಳ್ಳೆ ಹುಡ್ಗ ಪ್ರಥಮ್ ಅದೇ ವರ್ಷ ತೆರೆಗೆ ಬಂದ ದೇವ್ರಂತ ಮನುಷ್ಯ ಎಂಬ ಸಿನಿಮಾದಲ್ಲಿಯೂ ನಾಯಕನಾಗಿ ನಟಿಸಿದರು ಮತ್ತು ರಾಜು ಕನ್ನಡ ಮೀಡಿಯಮ್ ಎಂಬ ಸಿನಿಮಾದಲ್ಲಿ ಪ್ರಥಮ್ ವಿಶೇಷ ಪಾತ್ರವೊಂದನ್ನು ನಿರ್ವಹಿಸಿದ್ದರು.

ಹೀಗೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ವರ್ಷವೇ ಮೂರು ಚಿತ್ರಗಳಲ್ಲಿ ನಟಿಸಿದ್ದ ಪ್ರಥಮ್ ನಂತರದ ನಾಲ್ಕು ವರ್ಷಗಳಲ್ಲಿ ಸೈಲೆಂಟ್ ಆಗಿಬಿಟ್ಟಿದ್ದರು. ಹೀಗೆ ಬೃಹತ್ ಗ್ಯಾಪ್ ತೆಗೆದುಕೊಂಡಿದ್ದ ಪ್ರಥಮ್ ನಟನೆಯ ನಟ ಭಯಂಕರ ಚಿತ್ರ ಈ ವರ್ಷ ಬಿಡುಗಡೆಗೊಂಡಿದ್ದು, ಬೆಳ್ಳಿತೆರೆ ಮೇಲೆ ಪ್ರಥಮ್ ಮತ್ತೊಮ್ಮೆ ದರ್ಶನ ನೀಡಿದ್ದಾರೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದ ಪ್ರಥಮ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದು, ಈ ನಡುವೆಯೇ ತಾವು ಕನ್ನಡದ ಸ್ಟಾರ್ ನಟನೋರ್ವನ ದಾಖಲೆ ಬಗ್ಗೆ ಈ ಹಿಂದೆ ಮಾತನಾಡಿದ್ದ ವಿಡಿಯೊ ತುಣುಕನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ನಟನ ಎರಡು ದಾಖಲೆಗಳನ್ನು ಯಾರಿಂದಲೂ ಮುರಿಯಲಾಗುವುದಿಲ್ಲ

ಈ ನಟನ ಎರಡು ದಾಖಲೆಗಳನ್ನು ಯಾರಿಂದಲೂ ಮುರಿಯಲಾಗುವುದಿಲ್ಲ

ಕನ್ನಡ ಬಹುತೇಕ ಎಲ್ಲಾ ಸ್ಟಾರ್ ನಟರ ಬಗ್ಗೆಯೂ ಸಹ ಮುಕ್ತವಾಗಿ ಮಾತನಾಡುವ ಪ್ರಥಮ್ ತನ್ನ ನಟ ಭಯಂಕರ ಚಿತ್ರ ಬಿಡುಗಡೆಯಾಗುವುದಕ್ಕೂ ಮುನ್ನ ಕೃಷಿ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಕರುನಾಟ ಚಕ್ರವರ್ತಿ ಶಿವ ರಾಜ್‌ಕುಮಾರ್ ಬಗ್ಗೆ ಮಾತನಾಡಿದ್ದರು. ಹೌದು, ಶಿವ ರಾಜ್‌ಕುಮಾರ್ ಅವರು ಹೊಂದಿರುವ ಎರಡು ದಾಖಲೆಗಳನ್ನು ಇಡೀ ಭಾರತದಲ್ಲಿರುವ ಯಾವುದೇ ನಟ ಸಹ ಮುರಿಯಲಾಗುವುದಿಲ್ಲ ಎಂದು ವೇದಿಕೆ ಮೇಲೆ ಹೇಳಿಕೆ ನೀಡಿದ್ದಾರೆ.

125 ಚಿತ್ರಗಳಲ್ಲಿ ನಟಿಸಿದ ಸ್ಟಾರ್ ನಟನ ಮಗ!

125 ಚಿತ್ರಗಳಲ್ಲಿ ನಟಿಸಿದ ಸ್ಟಾರ್ ನಟನ ಮಗ!

ಹೀಗೆ ವೇದಿಕೆ ಮೇಲೆ ಶಿವ ರಾಜ್‌ಕುಮಾರ್ ಅವರ ಹೆಸರಿನಲ್ಲಿರುವ ಎರಡು ದಾಖಲೆಗಳನ್ನು ಯಾರಿಂದಲೂ ಮುರಿಯಲು ಆಗಲ್ಲ ಎಂದ ಪ್ರಥಮ್ ಅದರಲ್ಲಿ ಮೊದಲನೆಯದು ಅತಿಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಸ್ಟಾರ್ ನಟನ ಮಗ ಎಂಬ ದಾಖಲೆ ಹೊಂದಿದ್ದಾರೆ ಎಂದರು. ಬಾಲಿವುಡ್‌ನ ಅಮಿತಾಬ್ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್, ಮಲಯಾಳಂನ ಮುಮ್ಮೂಟಿ ಮಗ ದುಲ್ಕರ್ ಸಲ್ಮಾನ್ ಅವರನ್ನು ಉದಾಹರಣೆ ನೀಡಿದ ಪ್ರಥಮ್ ಇವರೆಲ್ಲಾ ಚಿತ್ರರಂಗದಲ್ಲಿ ಮೂವತ್ತು, ನಲವತ್ತು ಚಿತ್ರಗಳನ್ನು ಮಾಡಿದ್ದು, ದಿಗ್ಗಜ ನಟನ ಮಗನಾಗಿ 125 ಚಿತ್ರಗಳಲ್ಲಿ ನಟಿಸಿ, ಇನ್ನೂ ಸಹ ಚಿತ್ರರಂಗದಲ್ಲಿ ಮುಂದುವರಿಯುತ್ತಿರುವ ಏಕೈಕ ನಟ ಶಿವ ರಾಜ್‌ಕುಮಾರ್ ಎಂದರು.

ರಾಜ್‌ಕುಮಾರ್ ಕಾಲದಲ್ಲೂ ಹೀರೊ, ಯಶ್ ಕಾಲದಲ್ಲೂ ಹೀರೊ..

ರಾಜ್‌ಕುಮಾರ್ ಕಾಲದಲ್ಲೂ ಹೀರೊ, ಯಶ್ ಕಾಲದಲ್ಲೂ ಹೀರೊ..

ಇನ್ನೂ ಮುಂದುವರಿದು ಮಾತನಾಡಿದ ಪ್ರಥಮ್ ಶಿವ ರಾಜ್‌ಕುಮಾರ್ ತಮ್ಮ ತಂದೆ ಚಿತ್ರರಂಗವನ್ನು ಆಳುತ್ತಿದ್ದ ಕಾಲದಲ್ಲಿಯೂ ಸಹ ನಟನಾಗಿದ್ದರು, ಬಳಿಕ ವಿಷ್ಣುವರ್ಧನ್, ಶ್ರೀನಾಥ್ ನಟರಾಗಿದ್ದಲೂ ಸಹ ನಟನಾಗಿದ್ದರು, ರವಿಚಂದ್ರನ್, ನಟನಾಗಿದ್ದಾಗಲೂ ಸಹ ನಟನಾಗಿದ್ದರು, ಪುನೀತ್ ರಾಜ್‌ಕುಮಾರ್, ಸುದೀಪ್ ನಟರಾಗಿ ಚಿತ್ರರಂಗ ಪ್ರವೇಶಿಸಿದಾಗಲೂ ಸಹ ಶಿವಣ್ಣ ನಟ, ವಿಜಯ್ ರಾಘವೇಂದ್ರ ರೀತಿಯ ಯುವ ನಟರು ಕಾಲಿಟ್ಟಾಗಲೂ ಸಹ ಶಿವಣ್ಣ ನಟನಾಗಿದ್ದರು ಹಾಗೂ ಈಗ ಯಶ್ ಕಾಲದಲ್ಲೂ ಸಹ ಶಿವಣ್ಣ ನಟನಾಗಿದ್ದಾರೆ, ಈ ವಿ‍ಶಿಷ್ಟ ದಾಖಲೆಯನ್ನು ಯಾರೂ ಮಾಡಲಾಗಲ್ಲ ಎಂದು ಹೇಳಿದರು.

More from Filmibeat

English summary
No actor can beat these 2 records created by Shiva Rajkumar says Olle Hudga Pratham. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X