ವಿಶಾಲ್-ಅನಿಶಾ ಮದುವೆ ಬಗ್ಗೆ ಹರಿದಾಡಿದ್ದ ಸುದ್ದಿ ಸುಳ್ಳು
ಕಳೆದ ಕೆಲವು ದಿನಗಳಿಂದ ತಮಿಳು ವಿಶಾಲ್ ಮತ್ತು ಅನಿಶಾ ಅಲ್ಲ ರೆಡ್ಡಿ ನಡುವಿನ ನಿಶ್ಚಿತಾರ್ಥ ಮುರಿದು ಬಿದ್ದಿದೆ ಎಂಬ ಸುದ್ದಿ ಹಬ್ಬಿದೆ. ಇದಕ್ಕೆ ಪುಷ್ಠಿ ಕೊಡುವಂತೆ ಅನಿಶಾ ರೆಡ್ಡಿ ತಮ್ಮ ಇನ್ಸ್ಟಾಗ್ರಾಂನಲ್ಲಿ ತಮ್ಮಿಬ್ಬರ ಫೋಟೋಗಳನ್ನ ಡಿಲೀಟ್ ಮಾಡಿದ್ದರು ಎನ್ನಲಾಗಿತ್ತು.
ಇದೀಗ, ಆ ಸುದ್ದಿ ಬಹುತೇಕ ಸುಳ್ಳು ಎಂಬ ಟ್ವಿಸ್ಟ್ ಸಿಕ್ಕಿದೆ. ಆಗಸ್ಟ್ 29 ರಂದು ನಟ ವಿಶಾಲ್ ಅವರ ಹುಟ್ಟುಹಬ್ಬ. ಈ ವಿಶೇಷ ದಿನದಂದು ಭಾವಿ ಪತಿಗೆ ಶುಭ ಕೋರಿದ ಅನಿಶಾ 'ನಾನು ಯಾವಾಗಲೂ ನಿನ್ನ ಪ್ರೀತಿಸುತ್ತೇನೆ' ಎಂದು ಪೋಸ್ಟ್ ಹಾಕಿದ್ದಾರೆ.
''ಹ್ಯಾಪಿ ಬರ್ತಡೇ ಸ್ಟಾರ್. ಯಾವಾಗಲೂ ನಿಮ್ಮಿನ್ನು ನಾನು ಆರಾಧಿಸುತ್ತೇನೆ. ನಿಮ್ಮ ಹಾದಿಯಲ್ಲಿ ದೊಡ್ಡತನ ಇದೆ ಡಿಯರ್. ನಿಮ್ಮನ್ನು ಸದಾ ಪ್ರೀತಿಸುತ್ತೇನೆ'' ಎಂದು ಬರೆದುಕೊಂಡಿದ್ದಾರೆ.

ವಿಶಾಲ್ ಮತ್ತು ಅನಿಶಾ ಅಲ್ಲ ರೆಡ್ಡಿ ನಡುವೆ ಎಲ್ಲವೂ ಸರಿ ಇರಲಿಲ್ಲ. ಹಾಗಾಗಿ, ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಮದುವೆ ಬೇಡ ಎಂದು ನಿರ್ಧರಿಸಿಕೊಂಡಿದ್ದರು ಎಂದು ಹೇಳಲಾಗಿತ್ತು.
ಈ ವದಂತಿಗಳ ಬಗ್ಗೆ ಇದುವರೆಗೂ ಇಬ್ಬರು ಅಧಿಕೃತವಾಗಿ ಸ್ಪಷ್ಟ ಪಡಿಸಿರಲಿಲ್ಲ. ಇದೀಗ, ಅನಿಶಾ ರೆಡ್ಡಿ ಪರೋಕ್ಷವಾಗಿ ಈ ಸುದ್ದಿಗೆ ಬ್ರೇಕ್ ಆಗಿದ್ದು, ಎಂಗೇಜ್ ಮೆಂಟ್ ಬ್ರೇಕ್ ಅಪ್ ಸುದ್ದಿ ಸುಳ್ಳು ಎಂದಿದ್ದಾರೆ. ಎಲ್ಲವೂ ಅಂದುಕೊಂಡರೆ ಅಕ್ಟೋಬರ್ ತಿಂಗಳಲ್ಲಿ ಇವರಿಬ್ಬರು ಮದುವೆ ನಡೆಯಲಿದೆಯಂತೆ.


Click it and Unblock the Notifications











