'ಕೆಜಿಎಫ್ 2' ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ಇಲ್ಲ, 'ಸಲಾರ್' ಮುಂದೂಡುವ ಸಾಧ್ಯತೆ

By ರವೀಂದ್ರ ಕೊಟಕಿ

ಬಹುನಿರೀಕ್ಷಿತ ಹಲವು ಸಿನಿಮಾಗಳ ಬಿಡುಗಡೆ ದಿನಾಂಕಗಳು ದಿನಕಳೆದಂತೆ ಬದಲಾಗುತ್ತಿದೆ. ಕೆಲವು ನಿರ್ದಿಷ್ಟ ಸಮಯಕ್ಕೆ ಮುಂದೂಡಲ್ಪಟ್ಟಿದೆ. ಮತ್ತೆ ಕೆಲವು ಚಿತ್ರಗಳು ಮುಂದಿನ ವರ್ಷದ ಸಂಕ್ರಾಂತಿ ಮತ್ತು ಫೆಬ್ರವರಿ ಮಾಸಕ್ಕೆ ಹೊಸ ಡೇಟ್ ಗಳನ್ನು ಫಿಕ್ಸ್ ಮಾಡಿಕೊಂಡಿವೆ. ಹೀಗಾಗಿ ಎಲ್ಲರ ಕಣ್ಣು ಕೆಜಿಎಫ್ 2 ಚಿತ್ರದ ಬಿಡುಗಡೆ ದಿನಾಂಕದ ಮೇಲೆ ಕೇಂದ್ರೀಕೃತವಾಗಿತ್ತು.

Recommended Video

KGF ಗೆ ದಾರಿಮಾಡಿ ಕೊಟ್ಟ ಸಲಾರ್

ಕೆಜಿಎಫ್-2 ಏಪ್ರಿಲ್ 14, 2022ಕ್ಕೆ ಚಿತ್ರಮಂದಿರಕ್ಕೆ ಬರುವುದಾಗಿ ಮೊದಲೇ ಘೋಷಿಸಿತ್ತು ಆದರೆ ಕೆಲವು ಚಿತ್ರಗಳ ಬದಲಾವಣೆಯ ಹಿನ್ನಲೆಯಲ್ಲಿ 'ಕೆಜಿಎಫ್ 2' ಚಿತ್ರದ ಬಿಡುಗಡೆಯ ದಿನಾಂಕದ ಬಗ್ಗೆ ಒಂದಷ್ಟು ಗೊಂದಲಗಳು ಮೂಡಿತ್ತು. ಅಲ್ಲದೆ ಹಿಂದೆಯೇ ಹೊಂಬಾಳೆ ಮೂವೀಸ್ ಅವರ ಮತ್ತೊಂದು ಪ್ರತಿಷ್ಠಿತ ಚಿತ್ರವಾದ ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ನಟಿಸಿರುವ 'ಸಲಾರ್' ಚಿತ್ರಕ್ಕೂ ಇದೇ ಡೇಟ್ ಫಿಕ್ಸ್ ಆಗಿತ್ತು. ಕೊರೊನಾದ ಹಿನ್ನಲೆಯಲ್ಲಿ 'ಕೆಜಿಎಫ್ 2' ಚಿತ್ರದ ಬಿಡುಗಡೆ ತಡವಾಗಿ ಈಗ ಅಧಿಕೃತವಾಗಿ ಏಪ್ರಿಲ್ 14ಕ್ಕೆ ಬಿಡುಗಡೆಯಾಗುವುದು ಖಚಿತವಾಗಿದೆ. ಆದರೆ 'ಸಲಾರ್' ಚಿತ್ರದ ಬಿಡುಗಡೆ ಮತ್ತಷ್ಟು ಮುಂದಕ್ಕೆ ಹೋಗಬಹುದು.

ಆರ್‌ಆರ್‌ಆರ್‌ ಸಿನಿಮಾ ಮುಂದೂಡಿಕೆ

ಆರ್‌ಆರ್‌ಆರ್‌ ಸಿನಿಮಾ ಮುಂದೂಡಿಕೆ

ಭಾರತೀಯ ಸಿನಿಮಾ ಜಗತ್ತು ಮತ್ತು ಸಿನಿಪ್ರೇಮಿಗಳು ಕುತೂಹಲದಿಂದ ಎದುರು ನೋಡುತ್ತಿರುವ ಚಿತ್ರ 'ಕೆಜಿಎಫ್-2'. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಯಶ್ ಅಭಿನಯದಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಕೆಜಿಎಫ್-2 ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಅಂತ ಸಿನಿಮಾ ಜಗತ್ತು ಎದುರುನೋಡುತ್ತಿದೆ. 'ಕೆಜಿಎಫ್ -2' ಜೊತೆಗೆ ಇದೇ ವರ್ಷದಲ್ಲಿ ಬಿಡುಗಡೆಯಾಗಬೇಕಿದ್ದ0ತ ಬಹುನಿರೀಕ್ಷಿತ ಮತ್ತೆರಡು ಚಿತ್ರಗಳ ಪೈಕಿ ಎಸ್ ಎಸ್ ರಾಜಮೌಳಿ ನಿರ್ದೇಶನದ 'ಆರ್ ಆರ್ ಆರ್' ಕೆಲವು ತಿಂಗಳ ಹಿಂದೆ ದಸರಾ ಸಂದರ್ಭದಲ್ಲಿ ಬಿಡುಗಡೆಯಾಗುವುದೇ ಮೊದಲೇ ಘೋಷಣೆ ಮಾಡಿತ್ತು. ಆದರೆ ಕೊರೊನಾ ಕಾರಣ ಮತ್ತು ಹಂಡ್ರೆಡ್ ಪರ್ಸೆಂಟ್ ಚಿತ್ರಮಂದಿರದಲ್ಲಿ ಅವಕಾಶ ಸಿಗುವ ಅವಕಾಶಗಳು ಇಲ್ಲದ ಕಾರಣಕ್ಕೆ ಅನಿರ್ದಿಷ್ಟ ಸಮಯಕ್ಕೆ ಮುಂದೂಡಿದ್ದಾರೆ. ಆದರೆ ಯಾವಾಗ ಬಿಡುಗಡೆ ಆಗುತ್ತದೆ ಅಂತ ಅಧಿಕೃತವಾಗಿ ಇನ್ನೂ ಸುದ್ದಿ ಬಂದಿಲ್ಲ.

'ಲಾಲ್ ಸಿಂಗ್ ಛಡ್ಡಾ' ಮುಂದೂಡಿಕೆ

'ಲಾಲ್ ಸಿಂಗ್ ಛಡ್ಡಾ' ಮುಂದೂಡಿಕೆ

ಇನ್ನೊಂದೆಡೆ ತೆಲುಗಿನ ಬಹುನಿರೀಕ್ಷಿತ 'ಪುಷ್ಪ' ಚಿತ್ರದ ಎದುರು ಬಿಡುಗಡೆಗೆ ಸಿದ್ಧವಾಗಿದ್ದ ಅಮೀರ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ 'ಲಾಲ್ ಸಿಂಗ್ ಚಡ್ಡಾ' ಪೈಪೋಟಿಯಿಂದ ಈಗ ಹಿಂದೆ ಸರಿದಿದೆ. ಹೀಗಾಗಿ ಡಿಸೆಂಬರ್ 25ರಂದು 'ಪುಷ್ಪ'ದೊಡ್ಡ ಮಟ್ಟದಲ್ಲಿ ಬಿಡುಗಡೆಗೆ ಹಾದಿ ಸುಗಮವಾಗಿದೆ. 'ಲಾಲ್ ಸಿಂಗ್ ಚಡ್ಡಾ' ಮುಂಬರುವ ಫೆಬ್ರವರಿ 14 ರಂದು ವ್ಯಾಲೆಂಟೈನ್ಸ್ ಡೇ ಸಂದರ್ಭದಲ್ಲಿ ಬಿಡುಗಡೆ ಮಾಡುವುದಾಗಿ ತಂಡ ಅಧಿಕೃತವಾಗಿ ಘೋಷಿಸಿದೆ. 'ಪುಷ್ಪ' ಸಿನಿಮಾವು ಡಿಸೆಂಬರ್ 25ರಂದೇ ಬಿಡುಗಡೆ ಆಗಲಿದೆ.

'ಕೆಜಿಎಫ್ 2' ಬಿಡುಗಡೆ ಏಪ್ರಿಲ್ 14ಕ್ಕೆ

'ಕೆಜಿಎಫ್ 2' ಬಿಡುಗಡೆ ಏಪ್ರಿಲ್ 14ಕ್ಕೆ

ಹಿಂದೆಯೇ ಏಪ್ರಿಲ್ 14ಕ್ಕೆ 'ಕೆಜಿಎಫ್ 2' ಬಿಡುಗಡೆ ಖಚಿತವಾಗಿತ್ತು. ಹೀಗೆ ಕೆಲವು ಮಹತ್ವದ ಚಿತ್ರಗಳು

ಬಿಡುಗಡೆಯಲ್ಲಿ ಏರುಪೇರು ಆಗುತ್ತಿರುವ ಕಾರಣದಿಂದ 'ಕೆಜಿಎಫ್ 2' ಬಗ್ಗೆ ಇದ್ದ ಆತಂಕಗಳಿಗೆಲ್ಲಾ ಈಗ ತೆರೆ ಬಿದ್ದಿದೆ. 'ಕೆಜಿಎಫ್-2' ಚಿತ್ರ ತನ್ನ ಅಧಿಕೃತ ಘೋಷಿತ ದಿನದಂದೇ ಬಿಡುಗಡೆಯಾಗುತ್ತಿದೆ. ಸಿನಿ ಕ್ರಿಟಿಕ್

ತರುಣ್ ಆದರ್ಶ್ ಈ ಬಗ್ಗೆ ಮಾಹಿತಿಯನ್ನು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದು

'ಎಲ್ಲಾ ಅಂತೆ-ಕಂತೆಗಳಿಗೆ ತೆರೆಬಿದ್ದಿದೆ. 'ಕೆಜಿಎಫ್' 2' ತನ್ನ ಅಧಿಕೃತ ಘೋಷಿತ ದಿನಾಂಕ ಏಪ್ರಿಲ್ 14 ,2022 ರಂದು ಬಿಡುಗಡೆಯಾಗುತ್ತಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ' ಅಂತ ಅದರಲ್ಲಿ ಸ್ಪಷ್ಟಪಡಿಸಿದ್ದಾರೆ.

ರೊಚಕವಾಗಿರಲಿದೆ 'ಕೆಜಿಎಫ್ 2'

ರೊಚಕವಾಗಿರಲಿದೆ 'ಕೆಜಿಎಫ್ 2'

2022, ಏಪ್ರಿಲ್ 14ರಂದು ವಿಶ್ವದಾದ್ಯಂತ ಕನ್ನಡ- ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಕೆಜಿಎಫ್ 2' ಸಿನಿಮಾ ಬಿಡುಗಡೆಯಾಗಲಿದೆ. ಏಪ್ರಿಲ್ 14ರ ಬಿಡುಗಡೆಯ ಕ್ಷಣಕ್ಕೆ ಈಗಿನಿಂದಲೇ ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ. 'ಕೆಜಿಎಫ್ 2' ನಲ್ಲಿ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ ಸೇರಿ ಇನ್ನೂ ಹಲವು ಪ್ರತಿಭಾನ್ವಿತ ನಟರು ಸೇರಿಕೊಂಡಿದ್ದು, 'ಕೆಜಿಎಫ್; ಚಾಪ್ಟರ್ 1' ಗಿಂತಲೂ ರೋಚಕವಾಗಿ 'ಕೆಜಿಎಫ್ 2' ಇರಲಿದೆ ಎನ್ನಲಾಗಿದೆ.

More from Filmibeat

English summary
No change in KGF 2 movie release date. Hombale Films 'Salaar' movie may get postpone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X